ಕೇಂದ್ರ ಸಚಿವ ಸಂಪುಟ: ಪ್ರಧಾನಿ ಮೋದಿ ಕೈಯಲ್ಲಿ ಯಾವ್ಯಾವ ಖಾತೆಗಳಿವೆ?
ನವದೆಹಲಿ, ಮೇ 31: ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 58 ಜನರಿಗೆ ಇಂದು ಖಾತೆ ಹಂಚಿಕೆ ಮಾಡಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಅವರಿಗೆ ಗೃಹ ಖಾತೆ, ರಾಜನಾಥ್ ಸಿಂಗ್ ಅವರಿಗೆ ರಕ್ಷಣೆ, ನಿರ್ಮಲಾ ಸೀತಾರಾಮನ್ ಅವರಿಗೆ ವಿತ್ತ ಸಚಿವ ಸ್ಥಾನದ ಜವಾಬ್ದಾರಿ ನೀಡಲಾಗಿದೆ.
ಅದೆಲ್ಲ ಸರಿ, ಆದರೆ ನರೇಂದ್ರ ಮೋದಿ ಅವರ ತಮ್ಮ ಬಳಿ ಯಾವೆಲ್ಲ ಖಾತೆಗಳನ್ನು ಉಳಿಸಿಕೊಂಡಿದ್ದಾರೆ?
ಮೇ 30 ರಂದು ಸಂಜೆ 5 ಗಂಟೆಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಕಾರ್ಯನಿರ್ವಹಿಸುವ ಜೊತೆಯಲ್ಲಿ ಹಲವು ಖಾತೆಗಳ ಜವಾಬ್ದಾರಿಯನ್ನೂ ಹೊರುತ್ತಾರೆ.

ಪ್ರಧಾನ ಮಂತ್ರಿ, ಸಿಬ್ಬಂದಿ ಖಾತೆ, ಸಾರ್ವಜನಿಕ ಕುಂದು ಕೊರತೆ ಹಾಗೂ ಪಿಂಚಣಿ, ಅಣುಶಕ್ತಿ, ಬಾಹ್ಯಾಕಾಶ ಹಾಗೂ ಹಂಚಿಕೆಯಾಗದೆ ಬಾಕಿ ಉಳಿದ ಎಲ್ಲಾ ಖಾತೆಗಳನ್ನೂ ಪ್ರಧಾನಿ ನರೇಂದ್ರ ಮೋದಿ ಅವರೇ ನಿರ್ವಹಿಸುತ್ತಾರೆ.
ಮೇ 23 ರಂದು ಹೊರಬಿದ್ದ ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ 352 ಸ್ಥಾನಗಳನ್ನು ಗೆದ್ದು ಸಂಪೂರ್ಣ ಬಹುಮತ ಪಡೆದಿತ್ತು. ಬಿಜೆಪಿ ಸ್ವತಂತ್ರವಾಗಿಯೇ 303 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಸಫಲವಾಗಿತ್ತು.












Click it and Unblock the Notifications