ಫೆಬ್ರವರಿ 1ರಂದು ಕೇಂದ್ರ ಬಜೆಟ್: ಅನಂತ್ ಕುಮಾರ್

Subscribe to Oneindia Kannada

ನವದೆಹಲಿ, ಜನವರಿ 5: ಕೇಂದ್ರ ಬಜೆಟ್ ಮಂಡನೆಗೆ ದಿನ ನಿಗದಿಯಾಗಿದೆ. ಇದೇ ಫೆಬ್ರವರಿ 7ರಂದು ಕೇಂದ್ರ ಬಜೆಟ್ ಸಂಸತ್ ನಲ್ಲಿ ಮಂಡನೆಯಾಗಲಿದೆ.

ಕೇಂದ್ರ ಸಂಸದೀಯ ವ್ಯವಹಾರ ಸಚಿವ ಅನಂತ್ ಕುಮಾರ್ ಈ ಮಾಹಿತಿ ನೀಡಿದ್ದಾರೆ. ಇದೇ ಜನವರಿ 29ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಫೆಬ್ರವರಿ 29ರವರಗೆ ಬಜೆಟ್ ಅಧಿವೇಶನ ಮುಂದುವರಿಯಲಿದೆ. ಇದು ಮೊದಲ ಬಜೆಟ್ ಅಧಿವೇಶನವಾಗಿದೆ.

ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸಲಿದ್ದಾರೆ. ಇದು ನರೇಂದ್ರ ಮೋದಿ ಸರಕಾರದ ನಾಲ್ಕನೇ ಬಜೆಟ್ ಆಗಿರಲಿದೆ.

ಫೆಬ್ರವರಿ ಒಂದಕ್ಕೆ ಕೇಂದ್ರದ ಕೊನೆಯ ಬಜೆಟ್ ಮಂಡನೆ

Union budget to be presented on February 1

ಮಾರ್ಚ್ 5ರಿಂದ ಎರಡನೇ ಬಜೆಟ್ ಅಧಿವೇಶನ ಆರಂಭವಾಗಲಿದೆ. ಒಂದು ತಿಂಗಳ ಕಾಲ ಈ ಅಧಿವೇಶನ ನಡೆಯಲಿದ್ದು ಏಪ್ರಿಲ್ 6ರವರಗೆ ನಡೆಯಲಿದೆ ಎಂದು ಅನಂತ್ ಕುಮಾರ್ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಬಜೆಟ್ ನ್ನು ಇದೇ ಫೆಬ್ರವರಿ 16ರಂದು ಸಿದ್ದರಾಮಯ್ಯ ಮಂಡಿಸಲಿದ್ದಾರೆ. ಅದಕ್ಕೂ ಮೊದಲು ಕೇಂದ್ರ ಸರಕಾರದ ಬಜೆಟ್ ಮಂಡನೆಯಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
First part of budget session to be held from 29 January to 9 February, budget to be presented on 1 February. Second part to be held from 5 March to 6 April,” said Parliamentary Affairs Minister Ananth Kumar.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ