• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೇ 4 ರಿಂದ ಎಲ್ಲೆಲ್ಲಿ 'ಊಬರ್' ಸೇವೆ ಲಭ್ಯ? ಸಂಪೂರ್ಣ ಮಾಹಿತಿ ಇಲ್ಲಿದೆ

|

ನವದೆಹಲಿ, ಮೇ 4: ಆಯ್ದ ಪ್ರದೇಶಗಳಲ್ಲಿ ಮಾತ್ರ ಇಂದಿನಿಂದ ಸೇವೆ ಆರಂಭಿಸುವುದಾಗಿ ಊಬರ್ ಸಂಸ್ಥೆ ದೃಢಪಡಿಸಿದೆ. ಮೇ 4 ರಿಂದ ಕೆಲವು ವಲಯಗಳಲ್ಲಿನ ನಿವಾಸಿಗಳಿಗೆ ಮಾತ್ರ ಸೇವೆ ಒದಗಿಸಲು ಊಬರ್ ಸಿದ್ಧವಾಗಿದೆ. App ಮೂಲಕ ಸವಾರರಿಗೆ ಹೆಚ್ಚಿನ ಮಾಹಿತಿ ಮತ್ತು ನಗರಗಳ ಸ್ಥಿತಿಗತಿ ತಿಳಿಸಲಾಗುವುದು ಎಂದು ಊಬರ್ ಸಂಸ್ಥೆ ಹೇಳಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಗ್ರೀನ್ ಝೋನ್ ಗಳಲ್ಲಿ ಸಿಂಗಲ್ ರೈಡ್ ನಲ್ಲಿ ಚಾಲಕನ ಜೊತೆಗೆ ಎರಡು ಸವಾರರು ಮಾತ್ರ ಪ್ರಯಾಣ ಮಾಡಬಹುದು. ಪ್ರಯಾಣ ಮಾಡುವ ಸಮಯದಲ್ಲಿ ಚಾಲಕನ ಪಕ್ಕದಲ್ಲಿ ಯಾರೂ ಕುಳಿತುವಂತಿಲ್ಲ ಎಂದು ಊಬರ್ ತಿಳಿಸಿದೆ.

ಕೊರೊನಾ: ಕರ್ನಾಟಕದಲ್ಲಿರುವ ರೆಡ್, ಆರೆಂಜ್, ಗ್ರೀನ್ ಝೋನ್ ಗಳ ಪಟ್ಟಿ

ಸರ್ಕಾರದ ಮಾರ್ಗಸೂಚಿ ಪ್ರಕಾರ, ತುರ್ತು ಸಂದರ್ಭಗಳನ್ನು ಹೊರತುಪಡಿಸಿ 65 ವರ್ಷಕ್ಕಿಂತ ಮೇಲ್ಪಟ್ಟವರು, ಕಾಯಿಲೆ ಹೊಂದಿರುವವರು, ಗರ್ಭಿಣಿ ಸ್ತ್ರೀ ಮತ್ತು 10 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳು ಮನೆಯಲ್ಲೇ ಇರತಕ್ಕದ್ದು. ಇದು ನಿಮ್ಮೆಲ್ಲರ ಗಮನದಲ್ಲಿರಲಿ.

ಯಾವ ಯಾವ ಗ್ರೀನ್ ಝೋನ್ ಗಳಲ್ಲಿ ಉಬರ್ ಲಭ್ಯ.?

ಯಾವ ಯಾವ ಗ್ರೀನ್ ಝೋನ್ ಗಳಲ್ಲಿ ಉಬರ್ ಲಭ್ಯ.?

ಕಟಕ್, ಗುವಾಹಟಿ, ಜಮ್ಶೆಡ್ ಪುರ್, ಕೊಚ್ಚಿ, ಸಿಲ್ವಾಸ್ಸಾ ಮತ್ತು ದಮನ್ ನಲ್ಲಿ ಊಬರ್ ಸೇವೆ ಲಭ್ಯ.

ಯಾವ ಯಾವ ಆರೆಂಜ್ ಝೋನ್ ಗಳಲ್ಲಿ ಊಬರ್ ಲಭ್ಯ.?

ಯಾವ ಯಾವ ಆರೆಂಜ್ ಝೋನ್ ಗಳಲ್ಲಿ ಊಬರ್ ಲಭ್ಯ.?

ಅಮೃತಸರ, ಗುರ್ಗಾಂವ್, ಪಂಚಕುಲ, ತಿರುಚಿರಾಪಳ್ಳಿ, ಅಸನ್ಸೋಲ್, ಹುಬ್ಬಳ್ಳಿ, ಪ್ರಯಾಗರಾಜ್, ಉದಯಪುರ, ಭುವನೇಶ್ವರ, ಕೋಯಿಕ್ಕೋಡ್, ಪುದುಚೇರಿ, ವಾಪಿ, ಕೊಯಮತ್ತೂರು, ಮಂಗಳೂರು, ರಾಜ್ ಕೋಟ್, ವಿಶಾಖಪಟ್ಟಣಂ, ಡೆಹ್ರಾಡೂನ್, ರೋಹ್ಟಕ್, ದುರ್ಗಾಪುರ, ಮೊಹಾಲಿ, ತಿರುವನಂತಪುರಂ, ಘಜಿಯಾಬಾದ್ ಮತ್ತು ತ್ರಿಶೂರ್ ನಲ್ಲಿ ಊಬರ್ ಸೇವೆ ಲಭ್ಯವಿದೆ.

ಕೋವಿಡ್-19: ರೆಡ್ ಝೋನ್ ನಲ್ಲಿರುವ ಬೆಂಗಳೂರಿನ 13 ವಾರ್ಡ್ ಗಳು ಯಾವುವು?

ಊಬರ್ ಸೇವೆಗಳ ಮಾಹಿತಿ

ಊಬರ್ ಸೇವೆಗಳ ಮಾಹಿತಿ

* ರೆಡ್ ಝೋನ್ ಗಳಲ್ಲಿ ಊಬರ್ ಸೇವೆ ಲಭ್ಯವಿಲ್ಲ.

* ಅಗತ್ಯ ಸೇವೆಗಳಿಗಾಗಿ ಎಲ್ಲೆಲ್ಲಿ ಊಬರ್ ಲಭ್ಯ?

ಬೆಂಗಳೂರು, ಭೋಪಾಲ್, ಹೈದರಾಬಾದ್, ಇಂದೋರ್, ಮುಂಬೈ, ನಾಸಿಕ್ ಮತ್ತು ಲೂಧಿಯಾನಾ.

* ಊಬರ್ ಮೆಡಿಕ್ ಎಲ್ಲೆಲ್ಲಿ ಲಭ್ಯ.?

ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಬೆಂಗಳೂರು, ಪುಣೆ, ಕೋಲ್ಕತ್ತಾ, ಪಾಟ್ನಾ, ಲಕ್ನೋ, ನೋಯ್ಡಾ, ಖಾನ್ ಪುರ, ಪ್ರಯಾಗ್ ರಾಜ್, ಆಗ್ರಾ, ಘಜಿಯಾಬಾದ್, ಜಮ್ಶೆಡ್ ಪುರ, ಸೂರತ್, ಗುವಾಹಟಿ

ಊಬರ್ ಸುರಕ್ಷತಾ ಮಾರ್ಗಸೂಚಿ

ಊಬರ್ ಸುರಕ್ಷತಾ ಮಾರ್ಗಸೂಚಿ

* ಅನಾರೋಗ್ಯದಿಂದ ಬಳಲುತ್ತಿದ್ದರೆ, ದಯವಿಟ್ಟು ಮನೆಯಲ್ಲೇ ಇರಿ

* ಊಬರ್ ಕ್ಯಾಬ್ ಹತ್ತುವ ಮುನ್ನ ಮತ್ತು ಇಳಿದ ಬಳಿಕ ನಿಮ್ಮ ಕೈಗಳನ್ನು ಸೋಪಿನಿಂದ ಅಥವಾ ಸ್ಯಾನಿಟೈಸರ್ ನಿಂದ ಶುಚಿಗೊಳಿಸಿ.

* ಊಬರ್ ಸವಾರಿ ವೇಳೆ ಮುಖಗವಸು/ಮಾಸ್ಕ್ ಧರಿಸುವುದು ಕಡ್ಡಾಯ

* ಊಬರ್ ಸವಾರಿ ಮಾಡುವ ವೇಳೆ ಕಿಟಕಿ ಗಾಜುಗಳನ್ನು ತೆಗೆದುಕೊಳ್ಳಬಹುದು ಅಥವಾ ಫ್ರೆಶ್ ಏರ್ ಮೋಡ್ ನಲ್ಲಿ ಮಾತ್ರ A/C ಆನ್ ಮಾಡುವಂತೆ ಡ್ರೈವರ್ ಗೆ ಹೇಳಿ.

* ಸಾಧ್ಯವಾದಷ್ಟು ಡಿಜಿಟಲ್ ಪೇಮೆಂಟ್ ಮಾಡಿ.

* ನಿಮ್ಮ ವಸ್ತುಗಳು/ಲಗೇಜುಗಳನ್ನು ನೀವೇ ಹ್ಯಾಂಡಲ್ ಮಾಡತಕ್ಕದ್ದು.

* ಸುರಕ್ಷತೆಯಿಂದ ಮುಂಜಾಗ್ರತಾ ಕ್ರಮವಾಗಿ ಡ್ರೈವರ್ ಮತ್ತು ಸವಾರರು ಪ್ರಯಾಣವನ್ನು ರದ್ದುಗೊಳಿಸಬಹುದು. ಅಂತಹ ಸಂದರ್ಭದಲ್ಲಿ, ಸವಾರರು App ಮೂಲಕ ರದ್ದತಿ ವಿನಂತಿ ಕಳುಹಿಸಿದರೆ, ರದ್ದತಿ ಶುಲ್ಕವನ್ನು ಮರುಪಾವತಿ ಮಾಡಲಾಗುವುದು.

ಲಾಕ್ ಡೌನ್ 3.0: ಯಾವುದಕ್ಕೆ, ಎಲ್ಲೆಲ್ಲಿ ವಿನಾಯಿತಿ? ಗೊಂದಲವಿಲ್ಲದ ಮಾಹಿತಿ ಇಲ್ಲಿದೆ

English summary
Coronavirus Lockdown: Uber is available in these cities from May 4th.Coronavirus Lockdown: Uber is available in these cities from May 4th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X