ತೋಮಾರ್ ಬಂಧನ, ಮೋದಿ ಬನಾನ ರಿಪಬ್ಲಿಕ್ ಮಾಡ್ತಾರೆ: ಎಎಪಿ

ನವದೆಹಲಿ,ಜೂ.9: ನಕಲಿ ಪದವಿ ಪ್ರಮಾಣ ಪತ್ರ ಹೊಂದಿರುವ ಆರೋಪ ಹೊತ್ತು ದೆಹಲಿ ಪೊಲೀಸರ ಅತಿಥಿಯಾಗಿರುವ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಪರ ಆಮ್ ಆದ್ಮಿ ಪಕ್ಷ ಬ್ಯಾಟಿಂಗ್ ಆರಂಭಿಸಿದೆ. ನಮ್ಮ ಸರ್ಕಾರದ ಮೇಲೆ ಇಲ್ಲದ ಒತ್ತಡಗಳನ್ನು ಹೇರಿ ಸರ್ಕಾರವನ್ನು ದೃತಿಗೆಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ, ಮೋದಿ ಅವರು ಬನಾನಾ ರಿಪಬ್ಲಿಕ್ ಮಾಡಹೊರಟ್ಟಿದ್ದಾರೆ ಎಂದು ಎಎಪಿ ಮುಖಂಡ ಆಶುತೋಷ್ ಟೀಕಿಸಿದ್ದಾರೆ.

ತೋಮರ್ ವಿರುದ್ದ ಹಾಲಿ ಎರಡು ಪ್ರಕರಣಗಳು ದಾಖಲಾಗಿವೆ. ಮೊದಲನೆಯದು ನಕಲಿ ಕಾನೂನು ಪದವಿ ಸರ್ಟಿಫಿಕೇಟ್ ತೋರಿಸಿ ಬಾರ್ ಕೌನ್ಸಿಲ್‌ನಲ್ಲಿ ತೋಮರ್ ತಮ್ಮ ಹೆಸರು ದಾಖಲಿಸಿ ಸದಸ್ಯತ್ವ ಪಡೆದಿದ್ದರು. ಎರಡನೆಯದಾಗಿ ದೆಹಲಿ ವಿಧಾನಸಭಾ ಚುನಾವಣೆಯಲ್ಲೂ ನಕಲಿ ಪದವಿ ಸರ್ಟಿಫಿಕೇಟ್ ನೀಡಿದ್ದರು. ಬಿಹಾರದ ತಿಲಕ್ ಮಾಂಝಿ ಭಾಗಲ್ಪುರ್ ವಿವಿಯಿಂದ ಪಡೆದ ಪ್ರಮಾಣ ಪತ್ರ ನಕಲಿ ಎಂದು ಆರೋಪಿಸಲಾಗಿದೆ. [ನಕಲಿ ಪದವಿ ವಿವಾದ : ದೆಹಲಿ ಸಚಿವ ತೋಮಾರ್ ಬಂಧನ]

ಪೊಲೀಸರು ಯಾವುದೇ ರೀತಿ ನೋಟಿಸ್ ನೀಡದೆ ಸಚಿವರನ್ನು ಬಂಧಿಸಲಾಗಿದೆ. ಆಮ್ ಆದ್ಮಿ ಸರ್ಕಾರದ ಮೇಲೆ ಒತ್ತಡ ತರಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಎಪಿ ನಾಯಕರು ಕಿಡಿಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅರವಿಂದ್ ಕೇರ್ಜಿವಾಲ್ ಕಂಡುಭಯಪಡುತ್ತಿದ್ದಾರೆ. ಮೋದಿ ಅವರು ಬನಾನ ರಿಪಬ್ಲಿಕ್ ಮಾಡಲು ಹೊರಟ್ಟಿದ್ದಾರೆ ಎಂದು ಎಎಪಿ ಮುಖಂಡ ಆಶುತೋಷ್ ಕಿಡಿಕಾರಿದ್ದಾರೆ.

 ಪದವಿಗೆ ಮಾನ್ಯತೆ ಸಿಕ್ಕಿಲ್ಲ

ಪದವಿಗೆ ಮಾನ್ಯತೆ ಸಿಕ್ಕಿಲ್ಲ

48 ವರ್ಷ ವಯಸ್ಸಿನ ತೋಮಾರ್ ಅವರು ತ್ರಿನಗರ್ ಅಸೆಂಬ್ಲಿಯಿಂದ ಗೆದ್ದು ಶಾಸಕರಾಗಿ ಅರವಿಂದ್ ಕೇಜ್ರಿವಾಲ್ ಸರ್ಕಾರದಲ್ಲಿ ಕಾನೂನು ಸಚಿವರಾಗಿ ಫೆಬ್ರವರಿ 2015ರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಆಪ್ ಮುಖಂಡ ಆಶುತೋಷ್ ಪ್ರತಿಕ್ರಿಯೆ

ಆಪ್ ಮುಖಂಡ ಆಶುತೋಷ್ ಪ್ರತಿಕ್ರಿಯೆ ಹೀಗಿದೆ

ಗೃಹಸಚಿವಾಲಯದ ಕೈವಾಡವಿಲ್ಲ: ರಾಜನಾಥ್

ಯಾರನ್ನು ಬಂಧಿಸಬೇಕು ಯಾರನ್ನು ಬಂಧಿಸಬಾರದು ಎಂಬುದರ ಬಗ್ಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡುವುದಿಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್.

ಪೊಲೀಸ್ ಆಯುಕ್ತರ ಹೇಳಿಕೆ ಗೊಂದಲ

ತೋಮಾರ್ ಬಂಧಿಸಿಲ್ಲ ಎಂದು ಹೇಳಿಕೆ ನೀಡಿದ್ದ ಬಸ್ಸಿ ಅವರು ನಂತರ ಬೇರೆ ರೀತಿಯ ಹೇಳಿಕೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+