ಗಣತಂತ್ರ ದಿನದ ಅತಿಥಿ ಒಬಾಮಾ ಚ್ಯೂಯಿಂಗ್ ಗಮ್ ಯಾಕಮ್ಮ?
ನವದೆಹಲಿ, ಜ.26: ಗಣರಾಜ್ಯೋತ್ಸವದ ಅಂಗವಾಗಿ ರಾಜಪಥದಲ್ಲಿ ಸೇನಾಪಡೆ ಪಥ ಸಂಚಲನ, ಸ್ತಬ್ದ ಚಿತ್ರಗಳ ಮೆರವಣಿಗೆ, ಸಾಂಸ್ಕೃತಿಕ ನೃತ್ಯಗಳ ಮೆರಗು ತುಂಬಿದರೆ ಮತ್ತೊಂದೆಡೆ ಅಮೆರಿಕದಿಂದ ಬಂದಿರುವ ಅತಿಥಿ ಬರಾಕ್ ಒಬಾಮಾ ಅವರು ಪಥ ಸಂಚಲನ ನೋಡುತ್ತಾ ಚ್ಯೂಯಿಂಗ್ ಗಮ್ ಹಾಕಿಕೊಳ್ಳುವ ದೃಶ್ಯಗಳು ಈಗ ಭಾರಿ ಚರ್ಚೆಗೊಳಲ್ಪಟ್ಟಿದೆ.
ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಪತ್ನಿ ಮಿಶೆಲ್ ಹಾಗೂ ಪ್ರಧಾನಿ ಮೋದಿ ಅವರ ಜೊತೆ ಕುಳಿತು ಪರೇಡ್ ನೋಡಿದರು. ಡೇರ್ ಡೇವಿಲ್ ಬೈಕ್ ಗಳ ಸಾಹಸ ಪ್ರದರ್ಶನಕ್ಕೆ ಥಮ್ಸ್ ಅಪ್ ಎಂದರು.

ಆದರೆ, ಪರೇಡ್ ನಡೆಯುವ ಸಂದರ್ಭದಲ್ಲಿ ಚುಯಿಂಗ್ ಗಮ್ ಜಗಿಯುತ್ತಿದ್ದು ಸಾಮಾಜಿಕ ಜಾಲತಾಣಗಳ ಚರ್ಚಾ ಪ್ರಿಯರಿಗೆ ಆಹಾರವಾಗಿದ್ದಾರೆ.
ರಾಜಪಥಕ್ಕೆ ಬರುವ ಮುನ್ನವೇ ಚುಯಿಂಗ್ ಗಮ್ ಜಗಿದುಕೊಂಡು ಬಂದ ಒಬಾಮಾ ಅವರು. ಮೋದಿ ಪಕ್ಕದ ಆಸನದಲ್ಲಿ ಕುಳಿದ ಬಳಿಕ ಚುಯಿಂಗ್ ಗಮ್ ಬಾಯಿಯಿಂದ ಕೈಯಲ್ಲಿ ತೆಗೆದು ಮತ್ತೆ ಬಾಯಿಗೆ ಹಾಕಿಕೊಳ್ಳುವ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ.
ಒಬಾಮಾ ಈ ರೀತಿ ಚುಯಿಂಗ್ ಗಮ್ ತಿನ್ನುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ವಿದೇಶಕ್ಕೆ ಹೋದಾಗಲೂ ಚುಯಿಂಗ್ ಗಮ್ ತಿಂದಿದ್ದರು.[ಸಾಕ್ಷಿ ಬೇಕಾದ್ರೆ ಈ ಸುದ್ದಿ ಓದಿ] ಅಲ್ಲದೆ ಅವರು ತಮ್ಮ ಸಿಗರೇಟ್ ಚಟ ತೊರೆಯಲು ಚ್ಯೂಯಿಂಗ್ ಗಮ್ ಗೆ ಮೊರೆ ಹೋಗಿರುವುದು ಎಲ್ಲರಿಗೂ ಗೊತ್ತೇ ಇದೆ ಎಂದು ಹಲವಾರು ಮಂದಿ ಸಮರ್ಥನೆ ನೀಡಿದ್ದಾರೆ. ಅದರೆ, ಚರ್ಚೆ ಮಾತ್ರ ಚ್ಯೂಯಿಂಗ್ ಗಮ್ ನಂತೆ ಎಳೆದಾಡುತ್ತಿದೆ.
ಅಂಕಣಗಾರ ಡೇವಿಡ್ ಅವರ ಪ್ರತಿಕ್ರಿಯೆ
That's his 21-gum salute RT @Vamsee9002: Just now saw Prez Obama chewing something @Travel4Life5 @smitabarooah
— David B. Cohen (@DavidBCohen1) January 26, 2015 ಶ್ವೇತಭವನದ ಮುಖ್ಯ ವಕ್ತಾರರಾದ ಪೀಟರ್ ಬಾಕರ್ ಅವರ ಪ್ರತಿಕ್ರಿಯೆ
Obama appears to be enjoying parade, shown on Indian television bobbing his head with the music. Seems to be chewing gum, probably Nicorette
— Peter Baker (@peterbakernyt) January 26, 2015 ಲೇಖಕಿ ಶೋಭಾ ಡೇ ಪ್ರತಿಕ್ರಿಯೆ
Barack bhai working his jaws overtime and chewing gum! At least it isn't gutka. But seriously - gum during a formal parade?
— Shobhaa De (@DeShobhaa) January 26, 2015 ಚ್ಯೂಯಿಂಗ್ ಗಮ್ ತಿನ್ನುವ ವಿಡಿಯೋ ತುಣುಕು
Barack Obama seen chewing gum at R Day parade http://t.co/6aRdvsaLQU
— One Time Everydays (@onetimeeveryday) January 26, 2015 











Click it and Unblock the Notifications