ಬಾಂಬ್ ಬೆದರಿಕೆಗೆ ಧರೆಗಿಳಿದ ವಿಮಾನ, ಪ್ಯಾಸೆಂಜರ್ಸ್ ಸೇಫ್
ನವದೆಹಲಿ, ಜುಲೈ, 07 : ಬ್ಯಾಂಕಾಕ್‌ನಿಂದ ಇಸ್ತಾಂಬುಲ್ ಗೆ ಹೊರಟಿದ್ದ ಐಲ್ಯಾಂಡ್ ಬೌಂಡ್ ತುರ್ಕಿಶ್ ಏರ್ ಲೈನ್ ವಿಮಾನವು ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿತ್ತು. ಮಂಗಳವಾರ ಮಧ್ಯಾಹ್ನ ಸುಮಾರು ಮುಕ್ಕಾಲು ಗಂಟೆ ಕಾಲ ವಿಮಾನವನ್ನು ತಪಾಸಣೆ ಮಾಡಲಾಯಿತು. ನಂತರ ಯಾವುದೇ ಬಾಂಬ್ ಪತ್ತೆಯಾಗದ ಕಾರಣ ವಿಮಾನ ಇಸ್ತಾಂಬುಲ್ ಗೆ ಪ್ರಯಾಣಿಸಿತು.
148 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನದಲ್ಲಿನ ವಾಷ್ ರೂಮಿನ ಕನ್ನಡಿ ಮೇಲೆ ಲಿಪ್ ಸ್ಟಿಕ್ ಆಕಾರದ ಒಂದು ಬಾಂಬ್ ಇದೆ ಎಂದು ಪೈಲಟ್ ಗೆ ಸಂದೇಶದ ಮೂಲಕ ಮಾಹಿತಿ ರವಾನೆಯಾಗಿತ್ತು. ಇದರಿಂದ ಹೆದರಿದ ಪೈಲಟ್ ನಾಗಾಪುರದ ಎಟಿಸಿಸ್ ನ ಅನುಮತಿ ಮೇರೆಗೆ ಸುರಕ್ಷಿತವಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಧರೆಗಿಳಿಸಿ ತಪಾಸಣೆ ನಡೆದ ಬಳಿಕ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು[ಯಮೆನ್ ವಿಮಾನ ಅಪಘಾತ : 100 ಹೆಚ್ಚು ಸಾವು?]

ವಿಮಾನದ ಸರಕು ವಿಭಾಗ ಹಾಗೂ ಕ್ಯಾಬಿನ್ ನಲ್ಲಿ ಎನ್‌ಎಸ್‌ಜಿ ಕಮಾಂಡೊಗಳು ಮತ್ತು ಬಾಂಬ್ ವಿಲೇವಾರಿ ತಂಡವು ಸುಮಾರು 3 ಗಂಟೆಗಳ ಕಾಲ ಬಾಂಬ್ ಗಾಗಿ ಹುಡುಕಾಟ ನಡೆಸಿದ್ದು, ಯಾವುದೇ ಸ್ಪೋಟಕಗಳು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ












Click it and Unblock the Notifications