ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು,ನಾಳೆ ಲಾರಿ ಮುಷ್ಕರ: ದಿನಬಳಕೆ ವಸ್ತುಗಳ ಬೆಲೆ ತುಟ್ಟಿಯಾದೀತು!

|
Google Oneindia Kannada News

ನವದೆಹಲಿ, ಅಕ್ಟೋಬರ್ 9: ಡಿಸೆಲ್ ಅನ್ನು ಜಿಎಸ್ ಟಿ(ಸರಕು ಮತ್ತು ಸೇವಾ ತೆರಿಗೆ) ವ್ಯಾಪ್ತಿಗೆ ತರುವಂತೆ ಒತ್ತಾಯಿಸಿ ಮತ್ತು ಡಿಸೆಲ್ ದರ ಏರಿಕೆ ಖಂಡಿಸಿ ದೇಶದಾದ್ಯಂತ ಅಕ್ಟೋಬರ್ 9 ಮತ್ತು 10 ರಂದು ಮುಷ್ಕರ ಕೈಗೊಳ್ಳಲು ಅಖಿಲ ಭಾರತ ಮೋಟಾರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್ (ಎಐಎಂಟಿಸಿ)ನ ಟ್ರಕ್ಕರ್ಸ್ ಅಸೋಸಿಯೇಷನ್ ನಿರ್ಧರಿಸಿದೆ.

ಜಿಎಸ್ ಟಿ ಅಡಿ ಪೆಟ್ರೋಲಿಯಂ ಉತ್ಪನ್ನ ತರಲು ಸರಕಾರ ಒಪ್ಪಲ್ಲ ಏಕೆ?ಜಿಎಸ್ ಟಿ ಅಡಿ ಪೆಟ್ರೋಲಿಯಂ ಉತ್ಪನ್ನ ತರಲು ಸರಕಾರ ಒಪ್ಪಲ್ಲ ಏಕೆ?

ಇಂದು(ಅ.9) ಬೆಳಿಗ್ಗೆ 8 ಗಂಟೆಯಿಂದಲೇ ಮುಷ್ಕರ ಆರಂಭವಾಗಿದ್ದು, ದಿನಬಳಕೆ ವಸ್ತುಗಳಲ ಪೂರೈಕೆಯಲ್ಲಿ ವ್ಯತ್ಯಯವಾಗುವುದರಿಂದ ದಿನಬಳಕೆ ವಸ್ತುಗಳು ತುಟ್ಟಿಯಾಗುವ ಸಾಧ್ಯತೆ ಇದೆ.

Truck operators have begun 2-day strike to protest to include Goods and Services Tax on diesel

ಡಿಸೇಲ್ ದರವನ್ನು ಜಿಎಸ್ ಟಿಯಿಂದ ಹೊರಗಿಟ್ಟಿರುವುದರಿಂದ ಡಿಸೇಲ್ ವಾಹನ ಬಳಸುವವರಿಗೆ ಕಷ್ಟವಾಗುತ್ತಿದೆ. ಅದರಲ್ಲೂ ಪೆಟ್ರೋಲ್ ಮತ್ತು ಡಿಸೆಲ್ ಬೆಲೆಗಳನ್ನು ದಿನದಿನವೂ ಪರಿಷ್ಕರಣೆ ಮಾಡುವುದಕ್ಕೆ ಆರಂಭಿಸಿದ ಮೇಲೆ ಡಿಸೇಲ್ ಬೆಲೆಯಲ್ಲಿ ದಿನ ದಿನವೂ ಹೆಚ್ಚಳವಾಗುತ್ತಿರುವುದು ಗ್ರಾಹಕರಿಗೆ ಹೊರೆಯಾಗಿದೆ ಎಂದು ಟ್ರಕ್ಕರ್ಸ್ ಅಸೋಸಿಯೇಷನ್ ತಿಳಿಸಿದೆ.

ಅಕ್ಟೋಬರ್ 9 ಮತ್ತು 10 ರಂದು ಎರಡು ದಿನಗಳ ಕಾಲ ಮುಷ್ಕರ ನಡೆಸಲಿರುವ ಟ್ರಕ್ಕರ್ಸ್ ಅಸೋಸಿಯೇಷನ್, ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಇದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳುವುದಾಗಿ ಹೇಳಿದೆ.

English summary
Truck operators have begun 2-day strike to protest to include Goods and Services Tax on diesel. The countrywide protests have been organised by truckers' association All India Motor Transport Congress (AIMTC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X