ಅಸಾರಾಮ್ ಮೇಲೆ ಸರಣಿ ಅತ್ಯಾಚಾರದ ದೂರು

ಸೂರತ್, ಅ.6: ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಜೋಧ್ ಪುರದ ಕೇಂದ್ರ ಕಾರಾಗೃಹ ಸೇರಿರುವ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ವಿರುದ್ಧ ಸರಣಿ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಅತ್ಯಾಚಾರಕ್ಕೆ ನೆರವು ನೀಡಿದ ಆರೋಪದ ಮೇಲೆ ದೇವಮಾನವನ ಪತ್ನಿ ಹಾಗೂ ಪುತ್ರಿಯ ವಿರುದ್ಧವೂ ದೂರು ದಾಖಲಾಗಿದೆ.

ಸೂರತ್ ಮೂಲದ ಇಬ್ಬರು ಸಹೋದರಿಯರು ಅಸಾರಾಂ ಬಾಪು ಮತ್ತು ಅವರ ಪುತ್ರ ನಾರಾಯಣ್ ಸಾಯಿ ತಮ್ಮ ಮೇಲೆ ಅತ್ಯಾಚಾರ ಮಾಡಿರುವುದಾಗಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಎಫ್ಆರ್ಐ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇಬ್ಬರು ಸಹೋದರಿಯರು ತಮ್ಮ ಮೇಲೆ ಅತ್ಯಾಚಾರ ಎಸಗಿರುವುದಾಗಿ ಅಸಾರಾಮ್ ಬಾಪು ಹಾಗೂ ಮಗ ನಾರಾಯಣ್ ಸಾಯಿ ವಿರುದ್ಧ ದೂರು ನೀಡಿದ್ದಾರೆ. ಅಕ್ಕನ ಮೇಲೆ ಸ್ವತಃ ದೇವಮಾನವ ಅಸಾರಾಮ್ ಬಾಪು ಅತ್ಯಾಚಾರವೆಸಗಿದ್ದು, ತಂಗಿಯ ಮೇಲೆ ಅಸಾರಾಮ್ ಮಗ ನಾರಾಯಣ್ ಸಾಯಿ ಅತ್ಯಾಚಾರ ನಡೆಸಿದ್ದಾನೆ ಎಂದು ಈ ಇಬ್ಬರು ಸಹೋದರಿಯರು ಸೂರತ್ ನ ಜಹಂಗೀರ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Trouble level up: New FIR of rape against Asaram and son by sisters

ಇಷ್ಟೇ ಅಲ್ಲದೆ ದೇವಮಾನವನ ಪತ್ನಿ ಹಾಗೂ ಪುತ್ರಿಯ ವಿರುದ್ಧವೂ ಎಫ್ ಐಆರ್ ನಲ್ಲಿ ಅತ್ಯಾಚಾರಕ್ಕೆ ನೆರವು ನೀಡಿದ ಆರೋಪಗಳಿವೆ. ಅಸಾರಾಮ್ ಪತ್ನಿ ಲಕ್ಷ್ಮಿ ಹಾಗೂ ಮಗಳು ಭಾರತಿ ಅವರು ತಮ್ಮ ಮೇಲೆ ಬಾಪು ಹಾಗೂ ಪುತ್ರ ಅತ್ಯಾಚಾರ ನಡೆಸಲು ಸಹಕರಿಸಿದ್ದಾರೆ ಎಂದು ಎಫ್ ಐಆರ್ ನಲ್ಲಿ ಹೆಸರಿಸಲಾಗಿದೆ.

ಜೋಧ್‌ಪುರದಲ್ಲಿರುವ ಅಸಾರಾಮ್‌ನ ಆಶ್ರಮದ ನಿವಾಸಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಸೆ.1ರಂದು ಪೊಲೀಸರು ಅಸಾರಾಮ್ ಬಾಪುವನ್ನು ಬಂಧಿಸಿದ್ದರು. ಬಾಪು ಕಡೆ ಭಕ್ತರು ಸಂತಸ್ತ ಬಾಲಕಿಯ ಕುಟುಂಬಕ್ಕೆ ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಬಾಲಕಿಯ ಅಪ್ಪ ಪೊಲೀಸರಿಗೆ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಮೊದಲ ಅಪ್ರಕರಣದಲ್ಲಿ ಅಸಾರಾಮ್ ಬಾಪು ಅವರ ಪುರುಷತ್ವ ಪರೀಕ್ಷೆ ನಡೆಸಿ ಲೈಂಗಿಕವಾಗಿ ಸಮರ್ಥರು ಎಂದು ವರದಿ ನೀಡಲಾಯಿತು. ನಂತರ ಬಾಪು ವಕೀಲರು ಯುವತಿಯ ಡಿಎನ್ ಎ ಪರೀಕ್ಷೆ ಮಾಡಿ ಆಕೆ ಅಪ್ರಾಪ್ತ ವಯಸ್ಕಳೆ ಅಲ್ಲವೇ ಎಂಬುದನ್ನು ಮೊದಲು ನಿರ್ಧರಿಸಲಿ ಎಂದರು.

ಜೋಧಪುರ ಪೊಲೀಸರು ಬಾಪು ವಿರುದ್ಧ Protection of Children against Sexual Offences (POSCO) ಅನ್ವಯ ಕೇಸು ದಾಖಲಿಸುತ್ತಾರೆ ಎಂಬ ಸುದ್ದಿ ಹಬ್ಬಿತು.

ಕೆಲವೇ ದಿನಗಳಲ್ಲಿ ಅತ್ಯಾಚಾರಕ್ಕೆ ಸಹಕರಿಸಿ, ಬಾಲಕಿಯನ್ನು ಆಶ್ರಮಕ್ಕೆ ಕರೆತಂದಿದ್ದ ದೇವಮಾನವನ ಆಪ್ತ ಸಹಾಯಕ ಶಿವ ಮತ್ತು ಶಿಲ್ಪಿ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ದೇವಮಾನವನ ಅತ್ಯಾಚಾರ ಪುರಾಣದಲ್ಲಿ ಅವನ ಮಗ, ಪತ್ನಿ ಹಾಗೂ ಪುತ್ರಿಯರೂ ಸೇರಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+