ಮಂಗಳಮುಖಿಯಿಂದಲೇ ತನ್ನ ಮಗುವಿಗೆ ಅಮೃತಧಾರೆ!

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 14 : ಮಂಗಳಮುಖಿ ಸ್ತನ್ಯಪಾನ ಮಾಡಿಸಲು ಸಾಧ್ಯವೆ? ಅಸಹಜವಾದುದ್ದನ್ನು ಊಹಿಸಿಕೊಳ್ಳುವುದಾದರೂ ಹೇಗೆ? ಯಾವುದನ್ನು ಅಸಾಧ್ಯವೆಂದುಕೊಂಡಿದ್ದೇವೆಯೋ ಅಂತಹುದನ್ನು ಸಾಧ್ಯವಾಗಿಸಿದ ವಿದ್ಯಮಾನ ನವದೆಹಲಿಯಲ್ಲಿ ಜರುಗಿದೆ.

ಇನ್ನೂ ಅಚ್ಚರಿಯ ಸಂಗತಿಯೆಂದರೆ, ಲಿಂಗ ಪರಿವರ್ತನೆಯ ಶಸ್ತ್ರಚಿಕಿತ್ಸೆಗೊಳಗಾಗದೆ, ಸ್ತನ್ಯವರ್ಧನೆಯ ಚಿಕಿತ್ಸೆಯನ್ನೂ ಪಡೆಯದೆ, ಕಡೆಗೆ ಮಗುವಿಗೆ ಜನುಮವನ್ನೂ ನೀಡದೆ ಸ್ತನ್ಯಪಾನ ಮಾಡಿಸುವುದೆಂದರೆ ಅಚ್ಚರಿಯ ಸಂಗತಿಯಲ್ಲದೆ ಇನ್ನೇನು?

ಭಾರತದಲ್ಲಿನ್ನೂ ಸ್ತನ್ಯಪಾನದ ಮಹತ್ವ ಅರಿವಾಗಿಲ್ಲ!

ಇದರ ಹಿಂದೆಯೂ ಒಂದು ವಿಸ್ಮಯಕಾರಿ ಕಥೆಯಿದೆ. ಮಂಗಳಮುಖಿಯ ಗರ್ಭಿಣಿ ಬಾಳಸಂಗಾತಿ ಮಗು ಹುಟ್ಟಿದ ನಂತರ ಸ್ತನ್ಯಪಾನ ಮಾಡಿಸಲು ಹಿಂದೇಟು ಹಾಕಿದಾಗ, ತಾನೇ ಏಕೆ ಮಗುವಿಗೆ ಸ್ತನ್ಯಪಾನ ಮಾಡಿಸಬಾರದು ಎಂಬ ಹೊಳಹು ಆಕೆಯ ತಲೆಯೊಳಗೆ ಹೊಕ್ಕಿದೆ.

Transgender woman becomes first in the world to breastfeed her own child

ಕೂಡಲೆ ಮೌಂಟ್ ಸೈನೀಸ್ ಸೆಂಟರ್ ಫಾರ್ ಟ್ರಾನ್ಸ್ ಜೆಂಡರ್ ಮೆಡಿಸಿನ್ ಅಂಡ್ ಸರ್ಜರಿ ಸಂಸ್ಥೆಯ ವೈದ್ಯರನ್ನು ಆಕೆ ಸಂಪರ್ಕಿಸಿದ್ದಾರೆ. ಮಗು ಹುಟ್ಟುವ ಮೂರು ತಿಂಗಳು ಮೊದಲು ಇದರ ಸಾಧ್ಯತೆಗಳ ಬಗ್ಗೆ ಅಧ್ಯಯನ ಮಾಡಿದ ವೈದ್ಯರು ಕೆನಡಾದಿಂದ ಹಾರ್ಮೋನ್ ರಿಪ್ಲೇಸ್ಮೆಂಟ್ ಚುಚ್ಚುಮದ್ದನ್ನು ತರಿಸಿಕೊಂಡಿದ್ದಾರೆ.

ಚುಚ್ಚುಮದ್ದು ನೀಡಿದ ನಂತರ ಕ್ರಮೇಣವಾಗಿ ಮಂಗಳಮುಖಿಯ ಸ್ತನದಲ್ಲಿ ಹಾಲು ಉತ್ಪತ್ತಿಯಾಗಲು ಆರಂಭವಾಗಿದೆ. ಮಗುವಿಗೆ ಹಾಲೂಡಿಸುವಷ್ಟು ಹಾಲು ಉತ್ಪತ್ತಿಯಾಗಲು ಶುರುವಾಗಿದೆ. ನಂತರ ಆರು ತಿಂಗಳುಗಳ ಕಾಲ ಮಗುವಿಗೆ ಮಂಗಳಮುಖಿಯೇ ತಾಯಿಯಾಗಿ ಎದೆಯ ಅಮೃತಧಾರೆ ಎರೆದಿದ್ದಾಳೆ.

ಜಗತ್ತಿನ ಯಾವ ರಾಷ್ಟ್ರಕ್ಕೂ ಸ್ತನ್ಯಪಾನದ ಮಹತ್ವ ಗೊತ್ತಿಲ್ಲ!

ಇದು ವೈದ್ಯಕೀಯ ಜಗತ್ತಿನಲ್ಲಿಯೇ ಅಭೂತಪೂರ್ವ ವಿದ್ಯಮಾನವಾಗಿದೆ ಎಂದು ಮಂಗಳಮುಖಿಗೆ ಚಿಕಿತ್ಸೆ ನೀಡಿದ ಡಾ. ತಮರ್ ರೀಸ್ಮನ್ ಅವರು ಅಭಿಪ್ರಾಯಪಟ್ಟಿದ್ದಾರೆ. ಮಂಗಳಮುಖಿ ಕುಟುಂಬದಲ್ಲಿ ಇಂತಹ ಆರೋಗ್ಯಕರ ಬೆಳವಣಿಗೆ ತಂದಿದ್ದಕ್ಕೆ, ಸಂತಸ ಉಂಟುಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.

Transgender woman becomes first in the world to breastfeed her own child

ಈ ಅನೂಹ್ಯವಾದ ಕ್ರಾಂತಿಕಾರಕ ಬೆಳವಣಿಗೆಯನ್ನು ಟ್ರಾನ್ಸ್ ಜೆಂಡರ್ ಹೆಲ್ತ್ ಎಂಬ ಮ್ಯಾಗಜೀನ್ ನಲ್ಲಿ ಪ್ರಕಟಿಸಲಾಗಿದೆ. ಡಿಐವೈ ಹಾರ್ಮೋನ್ ಥೆರಪಿಯಿಂದ ಮಂಗಳಮುಖಿಯರ ಬಾಳಿನಲ್ಲಿ, ಒಬ್ಬ ತಾಯಿ ಮಗುವಿನ ಜನನದ ನಂತರ ಅನುಭವಿಸುವ ಅನಿರ್ವಚನೀಯ ಸಂತಸವನ್ನು ತರಬಹುದು ಎಂದು ಬರೆಯಲಾಗಿದೆ.

ಮಂಗಳಮುಖಿ ಮಹಿಳೆಯ ಬಾಳಿನಲ್ಲಿ ಇಂಥದೊಂದು ಸ್ತನ್ಯಪಾನ ಮಾಡಿಸಿದ ಘಟನೆ ಜರುಗಿ, ಮ್ಯಾಗಜೀನ್ ನಲ್ಲಿ ಈ ಸಂಗತಿ ಪ್ರಕಟವಾಗಿರುವುದು ಇದೇ ಮೊದಲ ಬಾರಿ ಎಂದು ಸಂಶೋಧಕರು ತಿಳಿಸಿದ್ದಾರೆ ಎಂದು ಡೇಲಿ ಮೇಲ್ ವರದಿ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A transgender woman from Delhi has become the first world to breastfeed her own child. This has become reality after she went through DIY harmone therapy. Wife of transgender had refused to breastfeed her child. So, the transgender decided to become mother herself.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ