ನಿರ್ಭಯಾ ಅತ್ಯಾಚಾರಿಗಳಿಗೆ ಜೈಲು ಅಧಿಕಾರಿಗಳ ಕೊನೆಯ ಪತ್ರ
ನವದೆಹಲಿ, ಫೆಬ್ರವರಿ 22: ನಿರ್ಭಯಾ ಅತ್ಯಾಚಾರಿಗಳನ್ನು ಮಾರ್ಚ್ 3 ರಂದು ಗಲ್ಲಿಗೇರಿಸುತ್ತಿದ್ದು, ಜೈಲು ಅಧಿಕಾರಿಗಳು ಪತ್ರವೊಂದನ್ನು ರವಾನಿಸಿದ್ದಾರೆ.
Recommended Video
ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಮಾರ್ಚ್ 3ರಂದು ಮರಣದಂಡನೆ ವಿಧಿಸಿ ದೆಹಲಿ ಪಟಿಯಾಲ ಕೋರ್ಟ್ ಡೆತ್ ವಾರಂಟ್ ಹೊರಡಿಸಿದೆ.
ಅಪರಾಧಿಗಳ ಗಲ್ಲುಶಿಕ್ಷೆಯ ದಿನ ಹತ್ತಿರ ಬರುತ್ತಿದ್ದಂತೆ ತಿಹಾರ್ ಜೈಲು ಅಧಿಕಾರಿಗಳು ನಾಲ್ವರಿಗೂ ಅವರವರ ಕುಟುಂಬದವರನ್ನು ಭೇಟಿಯಾಗುವ ಕುರಿತು ಪತ್ರ ಬರೆದಿದ್ದಾರೆ.

ಕುಟುಂಬದವರನ್ನು ಭೇಟಿಯಾಗಿರುವ ಪವನ್, ಮುಖೇಶ್
ಪವನ್ ಮತ್ತು ಮುಕೇಶ್ ಫೆ.1ಕ್ಕೂ ಮೊದಲೇ ತಮ್ಮ ಕುಟುಂಬದವರನ್ನು ಭೇಟಿಯಾಗಿದ್ದರು. ಈಗ ವಿನಯ್ ಶರ್ಮಾ ಮತ್ತು ಅಕ್ಷಯ್ ಉಳಿದಿದ್ದಾರೆ. ಅವರು ಯಾವಾಗ ತಮ್ಮ ಕುಟುಂಬವನ್ನು ಭೇಟಿಯಾಗಲು ಇಷ್ಟಪಡುತ್ತಾರೋ ಆಗ ಸಿದ್ಧತೆ ಮಾಡಲಾಗುತ್ತದೆ ಎಂದು ಜೈಲು ಸಿಬ್ಬಂದಿ ತಿಳಿಸಿದ್ದಾರೆ. ಈ ಮೊದಲು ಅಪರಾಧಿಗಳನ್ನು ಫೆ.1ರಂದು ನೇಣಿಗೇರಿಸಬೇಕು ಎಂದು ಆದೇಶವಿತ್ತು.

2012ರಲ್ಲಿ ನಿರ್ಭಯಾ ಮೇಲೆ ನಡೆದ ಅತ್ಯಾಚಾರ
2012ರಲ್ಲಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ನಲ್ಲಿ ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರವಾಗಿತ್ತು. ಆಕೆ ಸಿಂಗಾಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಅದಾದ ಏಳುವರ್ಷಗಳ ಬಳಿಕ ಸುಪ್ರೀಂಕೋರ್ಟ್ ಅಪರಾಧಿಗಳಿಗೆ ಮರಣದಂಡನೆ ನಿಗದಿ ಮಾಡಿತ್ತು. ದೆಹಲಿ ಪಟಿಯಾಲಾ ಕೋರ್ಟ್ ಮಾರ್ಚ್ 3ರಂದು ಗಲ್ಲುಶಿಕ್ಷೆ ನಿಗದಿ ಮಾಡಿ ಡೆತ್ವಾರಂಟ್ ಜಾರಿಗೊಳಿಸಿದೆ.

ಜೈಲಿನಲ್ಲಿ ಕಿಟಕಿ ಮೂಲಕವಷ್ಟೇ ಮಾತನಾಡುತ್ತಿದ್ದ ಆರೋಪಿಗಳು
ಇಷ್ಟುದಿನ ಕುಟುಂಬದವರು ಯಾರೇ ನೋಡಲು ಬಂದರೂ ಜೈಲಿನಲ್ಲಿ ಕಿಟಕಿಯ ಮೂಲಕವಷ್ಟೇ ಮಾತುಕತೆಗೆ ಅವಕಾಶ ನೀಡಲಾಗಿತ್ತು. ಇದೀಗ ಕೊನೇ ಭೇಟಿಯಾಗಿದ್ದರಿಂದ ಮುಖಾಮುಖಿ ಕುಳಿತು ಮಾತನಾಡಲು ಅವಕಾಶ ಇರುತ್ತದೆ ಎನ್ನಲಾಗಿದೆ.

ಹ್ಯಾಂಗ್‌ಮ್ಯಾನ್ ಕಳುಹಿಸಿಕೊಡುವಂತೆ ಪತ್ರ
ಈ ನಾಲ್ವರಲ್ಲಿ ವಿನಯ್ ಶರ್ಮಾ ಫೆ.16ರಂದು ಜೈಲಿನ ಗೋಡೆಗೆ ತನ್ನ ತಲೆಯನ್ನು ಜಜ್ಜಿಕೊಂಡಿದ್ದ. ಆತನ ಮಾನಸಿಕ ಸ್ಥಿತಿ ಹದಗೆಟ್ಟಿದೆ ಎನ್ನಲಾಗಿತ್ತು. ಇದೇ ಕಾರಣಕ್ಕೆ ಆತನ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ ಎಂದು ಜೈಲು ಆಡಳಿತ ಮಾಹಿತಿ ನೀಡಿದೆ.
ಅಷ್ಟೇ ಅಲ್ಲ ತಿಹಾರ್ ಜೈಲು ಅಧಿಕಾರಿಗಳು ಉತ್ತರ ಪ್ರದೇಶ ಜೈಲು ಆಡಳಿತಕ್ಕೆ ಪತ್ರ ಬರೆದಿದ್ದು, ಅಪರಾಧಿಗಳನ್ನು ಗಲ್ಲಿಗೇರಿಸುವ ದಿನ (ಮಾರ್ಚ್ 3)ಕ್ಕೆ ಎರಡು ದಿನ ಮೊದಲೇ ಹ್ಯಾಂಗ್ಮನ್ನನ್ನು ಕಳಿಸಿಕೊಡುವಂತೆ ತಿಳಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications