• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದಲ್ಲಿ 3 ಕೊರೊನಾ ಲಸಿಕೆಗಳು ಪ್ರಯೋಗದ ಸುಧಾರಿತ ಹಂತದಲ್ಲಿವೆ: ಹರ್ಷವರ್ಧನ್

|

ನವದೆಹಲಿ, ಸೆಪ್ಟೆಂಬರ್ 14: ಭಾರತದಲ್ಲಿ ಮೂರು ಕೊರೊನಾ ಲಸಿಕೆಗಳು ಕ್ಲಿನಿಕಲ್ ಪ್ರಯೋಗದ ಸುಧಾರಿತ ಹಂತದಲ್ಲಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. ಭಾರತದಲ್ಲಿ ಮೂರು ಕೊರೊನಾ ಲಸಿಕೆಗಳು 1,2,3ನೇ ಹಂತದಲ್ಲಿ ಕ್ಲಿನಿಕಲ್ ಪ್ರಯೋಗಕ್ಕೆ ಒಳಗಾಗಿದೆ. ದೇಶದ ವಿವಿಧ ಹಂತದ ಅಭಿವೃದ್ಧಿಯಲ್ಲಿರುವ 30ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಬೆಂಬಲ ನೀಡಲಾಗಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಕೊವಿಡ್ 19 ರೋಗವನ್ನು ನಿಗ್ರಹಿಸಲು ಭಾರತ ಕೈಗೊಂಡ ಕ್ರಮಗಳ ಬಗ್ಗೆ ಸಂಸತ್ತಿಗೆ ಮಾಹಿತಿ ನೀಡುತ್ತಿರುವಾಗ ಈ ವಿಷಯ ತಿಳಿಸಿದರು. 2021ರ ಮೊದಲ ತ್ರೈಮಾಸಿಕದ ವೇಳೆಗೆ ಕೊರೊನಾ ಲಸಿಕೆ ಸಿದ್ಧವಾಗಬಹುದು ಎಂದರು.

'2024ರ ವರೆಗೂ ಕೊರೊನಾ ಲಸಿಕೆಯ ಅಭಾವವಿರಲಿದೆ'

ಸಚಿವರ ಪ್ರಕಾರ ದೇಶದಲ್ಲಿ ನಾಲ್ಕಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸುಧಾರಿತ ಪೂರ್ವ ಕ್ಲಿನಿಕಲ್ ಅಭಿವೃದ್ಧಿ ಹಂತದಲ್ಲಿದ್ದಾರೆ. ಕೋವ್ಯಾಕ್ಸಿನ್ ಭಾರತ್ ಬಯೋಟೆಕ್ ಹಾಗೂ ಐಸಿಎಂಆರ್ ಅಭಿವೃದ್ಧಿಡಿಸುತ್ತಿದೆ. ಹಾಗೂ ಜೈಡಸ್ ಕ್ಯಾಡಿಲಾದ ಜೈಕೋವ್ ಡಿ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿದೆ. ಆಕ್ಸ್‌ಫರ್ಡ್ ನ ಆಸ್ಟ್ರಾಜೆನೆಕಾ ಕೂಡ ಕ್ಲಿನಿಕಲ್ ಪ್ರಯೋಗದಲ್ಲಿದೆ. ದೇಶದಲ್ಲಿ 145 ಲಸಿಕೆಗಳು ಪ್ರಿ ಕ್ಲಿನಿಕಲ್ ಪ್ರಯೋಗದ ಹಂತದಲ್ಲಿದೆ. 35 ಅಭ್ಯರ್ಥಿಗಳು ಕ್ಲಿನಿಕಲ್ ಪ್ರಯೋಗದಲ್ಲಿವೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

'2024ರವರೆಗೂ ಕೊರೊನಾ ಲಸಿಕೆಯ ಅಭಾವವಿರಲಿದೆ' ಎಂದು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ಪೂನವಾಲಾ ಹೇಳಿದ್ದಾರೆ.

ಕೊವಿಡ್ 19ನಿಂದ ಜಗತ್ತನ್ನು ನಿಯಂತ್ರಿಸಲು ಕನಿಷ್ಠ ನಾಲ್ಕೈದು ವರ್ಷಗಳು ಬೇಕು. 2024ರವರೆಗೂ ಕೊರೊನಾ ಲಸಿಕೆಯ ಕೊರತೆ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

   Indiaದ ಮೇಲೆ Cyber ​​Attack ಶುರು ಮಾಡಿದ Dragon | Oneindia Kannada

   ಔಷಧೀಯ ಸಂಸ್ಥೆಗಳು ಇಡೀ ವಿಶ್ವದ ಜನಸಂಖ್ಯೆಗೆ ಲಸಿಕೆ ನೀಡುವಷ್ಟು ವೇಗವಾಗಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿಲ್ಲ.

   ಪ್ರತಿಯೊಬ್ಬರೂ ಈ ವಿಶ್ವದಲ್ಲಿ ಲಸಿಕೆಯನ್ನು ಹೊಂದಬೇಕಿದ್ದರೆ ನಾಲ್ಕರಿಂದ ಐದು ವರ್ಷಗಳು ಬೇಕಾಗಬಹುದು.ಲಸಿಕೆಯನ್ನು ದೇಶದ 1.4 ಶತಕೋಟಿ ಜನರಿಗೆ ತುಪುವಂತೆ ಮಾಡಲು ಬೇಕಾದ ಅತ್ಯಾಧುನಿಕ ಕೋಲ್ಡ್‌ ಚೈನ್ ಮೂಲಸೌಕರ್ಯವಿಲ್ಲ ಎಂದು ಭಾರತದಲ್ಲಿ ಲಸಿಕೆ ವಿತರಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

   ಪೂಣೆ ಮೂಲದ ಔಷಧ ಕಂಪನಿಯೊಂದು 1.5 ಬಿಲಿಯನ್ ಪೋಲಿಯೋ ಲಸಿಕೆ ತಯಾರಿಗೆ ಮುಂದಾಗಿದೆ. 170 ದೇಶಗಳಿಗೆ ನೀಡಲಿದೆ. ಆ ಕಂಪನಿಯು ವಿವಿಧ ಐದು ಫಾರ್ಮಾ ಕಂಪನಿ ಜೊತೆ ಕೈಜೋಡಿಸಿದೆ.

   English summary
   Union Health Minister Dr Harsh Vardhan on Monday said that three coronavirus vaccines are in advanced stage of phase 1/2/3 clinical trials in India, while more than 30 candidates have been supported which are in different stages of development in the country.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X