• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಲಾಕ್‌ಡೌನ್ ವಿಫಲ': ಸಾಕ್ಷಿ ಮುಂದಿಟ್ಟು ಸರ್ಕಾರಕ್ಕೆ ಚಾಟಿ ಬೀಸಿದ ರಾಹುಲ್ ಗಾಂಧಿ

|
Google Oneindia Kannada News

ದೆಹಲಿ, ಜೂನ್ 6: ಕೊರೊನಾವೈರಸ್ ನಿಯಂತ್ರಿಸುವಲ್ಲಿ ಭಾರತ ಸರ್ಕಾರ ಸೋತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪದೇ ಪದೇ ಆರೋಪಿಸುತ್ತಲೇ ಇದ್ದಾರೆ. ಯಾವುದೇ ಮುಂಜಾಗ್ರತೆ ಕ್ರಮಗಳ ಬಗ್ಗೆ ನಿರ್ಧರಿಸಿದೆ ಏಕಾಏಕಿ ಲಾಕ್‌ಡೌನ್‌ ಘೋಷಣೆ ಮಾಡಿದ ಮೋದಿ ಸರ್ಕಾರ ದೇಶದಲ್ಲಿ ಆರ್ಥಿಕ ಕುಸಿತಕ್ಕೆ ಕಾರಣವಾಯಿತು ಎಂದು ಟೀಕಿಸಿದ್ದರು.

   ಬದಲಾಯಿಸಲು ಯಾರೆಲ್ಲಾ ಸ್ಟಾರ್ ಗಳು ಬಂದಿದ್ದಾರೆ ನೋಡಿ | Badalagu Neenu Badalayisu Neenu | Oneindia Kannada

   ಇದೀಗ, ಅದರ ಮುಂದುವರೆದ ಭಾಗ ಎಂಬಂತೆ ಜಗತ್ತಿನ ಇತರೆ ದೇಶಗಳು ಹಾಗೂ ಭಾರತದಲ್ಲಿ ಹೇಗೆ ಕೊರೊನಾ ವೈರಸ್ ಪ್ರಕರಣಗಳ ಏರಿಕೆ ಮತ್ತು ಇಳಿಕೆಯಾಗುತ್ತಿದೆ ಎಂಬುದನ್ನು ಗ್ರಾಫ್ ಮೂಲಕ ತೋರಿಸುತ್ತಿದ್ದಾರೆ.

   'ಲಾಕ್‌ಡೌನ್ ಗುರಿ ಮತ್ತು ಉದ್ದೇಶ ಸಂಪೂರ್ಣ ವಿಫಲ''ಲಾಕ್‌ಡೌನ್ ಗುರಿ ಮತ್ತು ಉದ್ದೇಶ ಸಂಪೂರ್ಣ ವಿಫಲ'

   ಎಲ್ಲ ದೇಶಗಳಲ್ಲಿ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸಲು ಲಾಕ್‌ಡೌನ್‌ ಜಾರಿ ಮಾಡಿದರು. ಅದರಲ್ಲಿ ಸಫಲತೆ ಕಂಡಿದ್ದಾರೆ. ಆದರೆ, ಭಾರತ ಸರ್ಕಾರ ಮಾತ್ರ ಸೋಂಕು ಏರಿಕೆಯಾಗುತ್ತಿದ್ದರೂ ಲಾಕ್‌ಡೌನ್‌ ತೆರೆವುಗೊಳಿಸುತ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ಮುಂದೆ ಓದಿ...

   ಭಾರತದಲ್ಲಿ ಲಾಕ್‌ಡೌನ್‌ ವಿಫಲ

   ಸ್ಪೇನ್, ಜರ್ಮನ್, ಇಟಲಿ, ಯುಕೆ ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮಾಡಿತ್ತು. ಲಾಕ್‌ಡೌನ್‌ ಹಾಗೂ ಇನ್ನಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಜರುಗಿಸಿದ ಬಳಿಕ ಈಗ ಆ ದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಆದರೆ, ಆ ದೇಶಗಳಿಗೆ ಹೋಲಿಸಿಕೊಂಡರೆ ಭಾರತ ಜಾರಿ ಮಾಡಿದ ಲಾಕ್‌ಡೌನ್‌ ಸಂಪೂರ್ಣ ವಿಫಲವಾಗಿದೆ ಎಂದು ರಾಹುಲ್ ಗಾಂಧಿ ಗ್ರಾಫ್ ಮೂಲಕ ಉದಾಹರಣೆ ನೀಡಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

   ಭಾರತದಲ್ಲಿ ಪ್ರತಿದಿನದ ಸೋಂಕು ಏರಿಕೆ

   ಭಾರತದಲ್ಲಿ ಪ್ರತಿದಿನದ ಸೋಂಕು ಏರಿಕೆ

   ಭಾರತದಲ್ಲಿ ಪ್ರತಿದಿನ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಶುಕ್ರವಾರ ದೇಶದಲ್ಲಿ 9887 ಜನರಿಗೆ ಸೋಂಕು ದೃಢವಾಗಿದೆ. ಅಮೆರಿಕ, ಬ್ರೆಜಿಲ್ ಬಿಟ್ಟರೆ ಭಾರತದಲ್ಲಿ ದಿನವೊಂದರಲ್ಲಿ ಅತಿ ಹೆಚ್ಚು ಕೇಸ್ ವರದಿಯಾಗುತ್ತಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,36,657ಕ್ಕೆ ಏರಿದೆ.

   ಈ ಮೂರು ರಾಜ್ಯಗಳಲ್ಲಿ ಮೋದಿಗಿಂತ ರಾಹುಲ್ ಗಾಂಧಿ ಹೆಚ್ಚು ಜನಪ್ರಿಯಈ ಮೂರು ರಾಜ್ಯಗಳಲ್ಲಿ ಮೋದಿಗಿಂತ ರಾಹುಲ್ ಗಾಂಧಿ ಹೆಚ್ಚು ಜನಪ್ರಿಯ

   6 ಸ್ಥಾನಕ್ಕೆ ಏರಿದ ಭಾರತ

   6 ಸ್ಥಾನಕ್ಕೆ ಏರಿದ ಭಾರತ

   ಅತಿ ಹೆಚ್ಚು ಸೋಂಕಿತರನ್ನು ಹೊಂದಿರು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಈಗ ಆರನೇ ಸ್ಥಾನಕ್ಕೆ ಏರಿದೆ. ನಿನ್ನೆಯ ಅಂಕಿ ಅಂಶದ ಬಳಿಕ ಇಟಲಿ ದೇಶವನ್ನು ಹಿಂದಿಕ್ಕಿದ ಭಾರತ ಮೇಲಕ್ಕೆ ಜಿಗಿದಿದೆ. ಅಮೆರಿಕ (1,965,912), ಬ್ರೆಜಿಲ್ (646,006), ರಷ್ಯಾ (458,689), ಸ್ಪೇನ್ (288,058), ಯುಕೆ (283,311) ನಂತರ ಭಾರತ (2,36,657) ಸ್ಥಾನ ಪಡೆದುಕೊಂಡಿದೆ.

   ಲಾಕ್‌ಡೌನ್‌ನಿಂದ ಅನ್‌ಲಾಕ್‌ ಕಡೆ ಭಾರತ

   ಲಾಕ್‌ಡೌನ್‌ನಿಂದ ಅನ್‌ಲಾಕ್‌ ಕಡೆ ಭಾರತ

   ದೇಶದಲ್ಲಿ ಕಡಿಮೆ ಸೋಂಕು ವರದಿಯಾಗುತ್ತಿದ್ದ ವೇಳೆ ಲಾಕ್‌ಡೌನ್‌ ಮಾಡಿದ ಸರ್ಕಾರ, ದಿನನಿತ್ಯ ಸುಮಾರು 10 ಸಾವಿರವರೆಗೂ ಸೋಂಕು ಪತ್ತೆಯಾಗುತ್ತಿರುವ ಇಂತಹ ಸಮಯದಲ್ಲಿ ಅನ್‌ಲಾಕ್‌ ಕಡೆ ಮುಖ ಮಾಡಿದೆ. ಇದು ದೇಶದ ಆರ್ಥಿಕತೆ ದೃಷ್ಟಿಯಿಂದ ಒಳ್ಳೆಯದು ಎನಿಸಿದರೂ, ಕೊರೊನಾ ವಿಚಾರದಲ್ಲಿ ಪರಿಸ್ಥಿತಿ ಕೈಮೀರುತ್ತಿದೆ ಎಂಬ ವಾದ ಕಾಂಗ್ರೆಸ್ ಪಕ್ಷದ್ದೂ.

   English summary
   This is "what a failed lockdown looks like", Rahul Gandhi compared india's COVID-19 graph to other countries. Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X