• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ಅಧ್ಯಕ್ಷರ ಗೊಂದಲ ನಿವಾರಣೆಗೆ ಇಂದೊಂದೇ ಮಾರ್ಗ: ಶಶಿ ತರೂರ್

|

ನವದೆಹಲಿ, ಸೆಪ್ಟೆಂಬರ್ 6: ಕಾಂಗ್ರೆಸ್ ಅಧ್ಯಕ್ಷರ ನೇಮಕ ಗೊಂದಲ ಬಗೆಹರಿಯಲು ಚುನಾವಣೆಯಿಂದ ಮಾತ್ರ ಸಾಧ್ಯ ಎಂದು ಮಾಜಿ ಸಚಿವ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಇಂಗ್ಲಿಷ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಚುನಾವಣೆಯನ್ನು ನಡೆಸುವುದೊಂದೇ ಪರಿಹಾರ ಎಂದು ಹೇಳಿದ್ದಾರೆ.

ಶಶಿ ತರೂರ್, ಜೈರಾಮ್ ರಮೇಶ್ ವಿರುದ್ಧ ಹುಲಿಯಂತೆ ಅಬ್ಬರಿಸಿದ ಮೊಯಿಲಿ

ನಾವೇನೇ ಉತ್ತರ ನೀಡಬಹುದು ಆದರೆ ಅದು ಕಾಂಗ್ರೆಸ್ ಕಾರ್ಯಕರ್ತರ ಮನಸ್ಸಿನಲ್ಲಿರುವ ಗೊಂದಲವನ್ನು ನಿವಾರಿಸುವುದಿಲ್ಲ.ರಾಹುಲ್ ಗಾಂಧಿ ಒಳ್ಳೆಯ ಆಯ್ಕೆಯಾಗಿತ್ತು ಆದರೆ ಅವರೇ ಅಧಿಕಾರವನ್ನು ತಿರಸ್ಕರಿಸಿದ್ದಾರೆ.

ಅವರು ರಾಜೀನಾಮೆ ನೀಡಿದ್ದಾರೆ ಎಂದು ನಾವು ಸುಮ್ಮನೆ ಕೂರುವಂತಿಲ್ಲ ಸಮಾಜಕ್ಕೆ ತೆರೆದುಕೊಳ್ಳಲೇಬೇಕು, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲೇಬೇಕಿದೆ. ಸೋನಿಯಾ ಗಾಂಧಿ ಅವರು ಹಂಗಾಮಿ ಅಧ್ಯಕ್ಷನ್ನಾಗಿ ನೇಮಕ ಮಾಡಲಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೇರಲು ಸಾಕಷ್ಟು ಆಕಾಂಕ್ಷಿಗಳಿದ್ದಾರೆ.

ಆದರೆ ಆಕಾಂಕ್ಷಿಗಳ್ಯಾರೂ ಕೂಡ ಮುಂದೆ ಬರುತ್ತಿಲ್ಲ, ಅದೆಲ್ಲಕ್ಕೂ ಒಂದು ನಿಯಮ ಎನ್ನುವುದಿರುತ್ತದೆ ಆಗ ಅವರು ಹೊರ ಬರಲೇಬೇಕು, ಸಾಕಷ್ಟು ಮಂದಿ ಆಕಾಂಕ್ಷಿಗಳು ನಮ್ಮ ಬಳಿ ಮಾತನಾಡಿದ್ದಾರೆ.

ನಾಳೆ ಯಾರಾದರೂ ಬಂದು ನಾನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅರ್ಹ ಎಂದರೆ ಯಾರೂ ಆತನನ್ನು ದೂರವಂತಿಲ್ಲ ಎಲ್ಲರೂ ಒಪ್ಪಿಕೊಳ್ಳಲೇಬೇಕು ಆದರೆ ಇದನ್ನು ಸಾರ್ವಜನಿಕರಿಗೆ ಬಿಡಬೇಕು ಎಂದು ಹೇಳಿದರು.

English summary
Former Minister Shashi Tharoor says that The Only Way To Alleviate The Confusion Of The Congress President, elections would be the only way forward. Any of us can give an answer but it means nothing that reflects the will of the karyakartas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X