'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಬೆದರಿಕೆ: 'ವೈ' ಶ್ರೇಣಿ ಭದ್ರತೆ

ನವದೆಹಲಿ ಮಾರ್ಚ್ 18: 'ದಿ ಕಾಶ್ಮೀರ್ ಫೈಲ್ಸ್'ಸಿನಿಮಾ ದೇಶದೆಲ್ಲೆಡೆ ಅಲ್ಪಾವಧಿಯಲ್ಲಿಯೇ ಭಾರಿ ಸದ್ದು ಮಾಡಿದೆ. ಆದರೆ ಈ ಸಿನಿಮಾದ ವಿರೋಧಿಗಳು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ವೈ ಕೆಟಗರಿ ಭದ್ರತೆ ಒದಗಿಸಿದೆ. ಕಾಶ್ಮೀರಿ ಪಂಡಿತರ ಮೇಲೆ ಅವರು ನಿರ್ಮಿಸಿರುವ ಚಿತ್ರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ದಾಳಿಗೆ ತುತ್ತಾಗುವ ಅಪಾಯವಿದ್ದು, ಸರ್ಕಾರ ಅವರಿಗೆ ದೇಶದಾದ್ಯಂತ ಸಿಆರ್‌ಪಿಎಫ್ ರಕ್ಷಣೆಯೊಂದಿಗೆ ವೈ ಕೆಟಗರಿ ಭದ್ರತೆಯನ್ನು ಒದಗಿಸಿದೆ ಎಂದು ಮೂಲಗಳು ತಿಳಿಸಿವೆ.

ವಿವೇಕ್ ಅಗ್ನಿಹೋತ್ರಿ ಅವರಿಗೆ 'ವೈ' ಶ್ರೇಣಿಯಡಿ ಎಂಟು ಅಧಿಕಾರಿಗಳ ಭದ್ರತೆಯನ್ನು ನೀಡಲಾಗುವುದು. ಇದರಲ್ಲಿ 2 ಕಮಾಂಡೋಗಳು ಮತ್ತು ಇತರ ಪೊಲೀಸರು ಇರಲಿದ್ದಾರೆ. ಕಾಶ್ಮೀರಿ ಪಂಡಿತರ ಬಗ್ಗೆ ಕಾಶ್ಮೀರ ಫೈಲ್ಸ್ ಚಲನಚಿತ್ರವನ್ನು ನಿರ್ಮಿಸಲಾಗಿದೆ. ಸಿನಿಮಾದಲ್ಲಿ 1990 ರ ಘಟನೆಯನ್ನು ನೆನಪಿಸುವಂತೆ ಚಿತ್ರೀಕರಿಸಲಾಗಿದೆ. ಅಲ್ಲಿ ಕಾಶ್ಮೀರಿ ಪಂಡಿತರನ್ನು ಬೆದರಿಸಿ ಕಣಿವೆಯಿಂದ ಓಡಿಸಲಾಯಿತು ಮತ್ತು 200 ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರನ್ನು ಕೊಲ್ಲಲಾಯಿತು. ಉಗ್ರರು ಈ ಹತ್ಯಾಕಾಂಡ ನಡೆಸಿರುವ ಬಗ್ಗೆ ಸಿನಿಮಾದಲ್ಲಿ ಚಿತ್ರೀಕರಿಸಲಾಗಿದೆ. ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ ಮತ್ತು ದರ್ಶನ್ ಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

 ‘The Kashmir Files’ Director Vivek Agnihotri Threatened: Y Category Security

ಸಿನಿಮಾದ ಬಗ್ಗೆ ದೇಶದಲ್ಲಿ ಚರ್ಚೆ

ಈ ಚಿತ್ರ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇಲ್ಲಿಯವರೆಗೆ ಅನೇಕ ದೊಡ್ಡ ಸೆಲೆಬ್ರಿಟಿಗಳು ಈ ಚಿತ್ರವನ್ನು ಬೆಂಬಲಿಸಿದ್ದಾರೆ, ಅನೇಕ ಕಲಾವಿದರು ಮತ್ತು ರಾಜಕಾರಣಿಗಳು ಈ ಚಿತ್ರವನ್ನು ವಿರೋಧಿಸಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಹಲವು ದೊಡ್ಡ ನಾಯಕರು ಈ ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+