• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಂತರರಾಷ್ಟ್ರೀಯ ವಿಮಾನ ಸಂಚಾರ ಆರಂಭದ ಬಗ್ಗೆ ಸಚಿವರು ಹೇಳಿದ್ದೇನು?

|

ದೆಹಲಿ, ಜೂನ್ 20: ಕೊರೊನಾ ವೈರಸ್ ಹರಡುವಿಕೆ ಹಿನ್ನೆಲೆ ದೇಶಾದ್ಯಂತ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಸಂಚಾರ ನಿಲ್ಲಿಸಲಾಗಿತ್ತು. ಪ್ರಸ್ತುತ ಪ್ರಾದೇಶಿಕ ವಿಮಾನ ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ವಿಮಾನ ಹಾರಾಟ ಮಾಡುತ್ತಿದೆ.

   ಗಂಗೂಲಿ ಕುಟುಂಬದ ಮೂವರಿಗೆ ಕೊರೊನ ಸೋಂಕು | Oneindia Kannada

   ಆದರೆ, ಅಂತರರಾಷ್ಟ್ರೀಯ ವಿಮಾನ ಸಂಚಾರ ಇನ್ನೂ ಆರಂಭವಾಗಿಲ್ಲ. ಯಾವಾಗ ವಿದೇಶಿ ಸಂಚಾರ ಆರಂಭವಾಗುವುದು ಎಂಬ ಕುತೂಹಲಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಉತ್ತರ ನೀಡಿದ್ದಾರೆ.

   'Compete with China' ಮೋದಿಗಿಂತ ಎಚ್‌ಡಿಕೆ ಬೆಟರ್: ಇಲ್ಲಿದೆ ಸಾಕ್ಷಿ!

   'ಅಂತರರಾಷ್ಟ್ರೀಯ ವಿಮಾನ ಸಂಚಾರ ಯಾವಾಗ ಆರಂಭವಾಗಬಹುದು ಎಂಬುದರ ಬಗ್ಗೆ ನಮಗೂ ತಿಳಿದಿಲ್ಲ. ವಿದೇಶಗಳ ಪರಿಸ್ಥಿತಿ ಮತ್ತು ಅಲ್ಲಿನ ವಿಮಾನಯಾನ ಇಲಾಖೆಯ ನಿರ್ಧಾರದ ಮೇಲೆ ನಾವು ನಿರ್ಧರಿಸಬೇಕಾಗುತ್ತದೆ' ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

   'ಅಂತರರಾಷ್ಟ್ರೀಯ ಮಾರುಕಟ್ಟೆಯೂ ತೆರೆದಿದೆ. ಆ ಕುರಿತು ರಿಯಾಲಿಟಿ ಚೆಕ್ ಅಗತ್ಯವಿದೆ. ನಾವು ಅಂತರರಾಷ್ಟ್ರೀಯ ಸಂಚಾರವನ್ನು ಪುನರಾರಂಭಿಸಬೇಕಾದ ಸಮಯವೂ, ನಮ್ಮ ವಿಮಾನಗಳನ್ನು ಸ್ವೀಕರಿಸಲು ಮುಕ್ತವಾಗಿರುವ ಇತರ ದೇಶಗಳ ಮೇಲೆ ಅವಲಂಬಿತವಾಗಿರುತ್ತದೆ'' ಎಂದು ಮಾಹಿತಿ ನೀಡಿದ್ದಾರೆ.

   'ಅಂತರರಾಷ್ಟ್ರೀಯ ಸಂಚಾರ ಆರಂಭಿಸಬೇಕಾದರೆ, ಎರಡೂ ಕಡೆ ಸಿದ್ಧವಾಗಿರಬೇಕು. ಕೇಸ್ ಟು ಕೇಸ್ ಆಧಾರದ ಮೇಲೆ ವಿಮಾನಗಳನ್ನು ತೆರೆಯುವ ಬಗ್ಗೆ ನಾವು ಯೋಚಿಸಬಹುದು'' ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಹೇಳಿದ್ದಾರೆ.

   ಇನ್ನು ವಂದೇ ಭಾರತ್ ಮಿಷನ್ ಅಡಿ ಇದುವರೆಗೂ ವಿದೇಶಗಳಲ್ಲಿ ಸಿಲುಕಿಕೊಂಡಿದ್ದ 2,75,000 ಭಾರತೀಯರನ್ನು ವಿಮಾನ ಮತ್ತು ಹಡಗುಗಳಲ್ಲಿ ಮರಳಿ ದೇಶಕ್ಕೆ ಕರೆತರಲಾಗಿದೆ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

   English summary
   The exact time when we will resume international flight depends on the other countries to be open to receive flights: Civil Aviation Minister Hardeep Singh Puri.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X