ಮುಸ್ಲಿಮರ ಬಂಧನಕ್ಕೆ ಉಲ್ಟಾ ಹೊಡೆದ ಶಿಂದೆ

ನಾನು ಪತ್ರ ಬರೆದಿರೋದು ನಿಜ. ಆದರೆ ಹಾಗಲ್ಲಾ ಹೇಳಿರೋದು. ಮುಸ್ಲಿಂ ಯುವಕರು ಮಾತ್ರವೇ ಅಲ್ಲ. ಭಯೋತ್ಪಾದಕ ಚಟುವಟಿಕೆಗಳಲ್ಲಿ ತಪ್ಪಾಗಿ ಬಂಧಿತರಾದ ಯಾವುದೇ ಸಮುದಾಯದ ಯುವಕರಿಗೂ ಕಿರುಕುಳ ನೀಡಬೇಡಿ ಎಂದು ಆದೇಶಿಸಿರುವುದಾಗಿ ಶಿಂಧೆ ಹೇಳಿದ್ದಾರೆ.
ಪತ್ರ ಭಾರಿ ವಿವಾದಕ್ಕೆ ಕಾರಣವಾಗಿ ವಿಪಕ್ಷಗಳು ಶಿಂದೆ ಮೇಲೆ ದಾಳಿ ನಡೆಸುತ್ತಿದ್ದಂತೆ ಶಿಂದೆ ಇದೀಗ ತಮ್ಮ ವರಸೆ ಬದಲಿಸಿದಂತಿದೆ. 'ಮುಸ್ಲಿಂ ಯುವಕರ ಮೇಲೆ ಕ್ರಮ ಕೈಗೊಳ್ಳಬೇಡಿ ಎಂದು ನಾನು ನಿರ್ದೇಶಿಸಿಲ್ಲ. ವಿಪಕ್ಷಗಳು ಅದನ್ನು ತಪ್ಪಾಗಿ ಅರ್ಥೈಸಿಕೊಂಡಿವೆ. ಮೊದಲ ಎರಡು ಪ್ಯಾರಾಗಳಲ್ಲಷ್ಟೇ ನಾನು ಮುಸ್ಲಿಂ ಎಂಬ ಪದ ಬಳಸಿದ್ದೇನೆ' ಎಂದು ಶಿಂಧೆ ಹೇಳಿದ್ದಾರೆ.
'ಅಷ್ಟಕ್ಕೂ ಈ ಪತ್ರ ನಾನೇಕೆ ಬರೆದೆ. ಎನ್ ಜಿಓಗಳು ಮತ್ತು ಇತರೆ ಸಂಘಟನೆಗಳು ದೂರು ನೀಡಿದ ಹಿನ್ನೆಲೆಯಲ್ಲಿ ಪತ್ರ ಬರೆದೆ. ಆದರೆ ಅದರಲ್ಲಿ ಮುಸಲ್ಮಾನರಿಗೆ ಮಾತ್ರ ತೊಂದರೆ ಕೊಡಬೇಡಿ ಎಂದು ನಾನು ಬರೆದಿಲ್ಲ. ರಾಜಕೀಯ ಪಕ್ಷಗಳು ತಪ್ಪಾಗಿ ಅರ್ಥೈಸಿಕೊಂಡವು' ಎಂದು ಸಮಜಾಯಿಷಿ ನೀಡಿದ್ದಾರೆ.












Click it and Unblock the Notifications