ಪರಿಸರ ಹೋರಾಟಗಾರ, ಟಿಇಆರ್‌ಐ ಮಾಜಿ ಮುಖ್ಯಸ್ಥ ಪಚೌರಿ ನಿಧನ
ನವದೆಹಲಿ, ಫೆಬ್ರವರಿ 13: ಟಿಇಆರ್‌ಐ ಮಾಜಿ ಮುಖ್ಯಸ್ಥ, ಪರಿಸರವಾದಿ ಆರ್.ಕೆ.ಪಚೌರಿ ಇಂದು ನವದೆಹಲಿಯಲ್ಲಿ ನಿಧನರಾಗಿದ್ದಾರೆ.
ಪಚೌರಿ ಅವರು ಬಹುಸಮಯದಿಂದ ಹೃದಯದ ಸಮಸ್ಯೆಯೊಂದಿಗೆ ಹೆಣಗಾಡುತ್ತಿದ್ದರು. ಅವರಿಗೆ ದೆಹಲಿಯ ಎಸ್ಕಾರ್ಟ್ ಹಾರ್ಟ್ ಇನ್ಸ್ಟಿಟ್ಯೂಟ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಂತಿಮವಾಗಿ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.
ದಿ ಎನರ್ಜಿ ಆಂಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ (ಟಿಇಆರ್‌ಐ) ನ ಸಂಸ್ಥಾಪಕರಗಾಗಿದ್ದ ಪಚೌರಿ ಹಲವು ಕಾಲ ಸಂಸ್ಥೆಯ ಮುಖ್ಯಸ್ಥರಾಗಿ ದುಡಿದಿದ್ದರು. 2015 ರಲ್ಲಿ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿತ್ತು. ಆಗ ತಮ್ಮ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು.
ಟಿಇಆರ್ಐ ಸಂಸ್ಥೆಯು ಪಚೌರಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. 'ಪಚೌರಿ ಅವರ ಕುಟುಂಬದ ಜೊತೆಗೆ ದುಖಃದ ನಮಯದಲ್ಲಿ ನಾವು ಜೊತೆಯಾಗುತ್ತೇವೆ' ಎಂದು ಸಂಸ್ಥೆಯು ಹೇಳಿದೆ.