ದೆಹಲಿ ವಿಮಾನ ನಿಲ್ದಾಣದಲ್ಲಿ ಆತಂಕ ಮೂಡಿಸಿದ ಬಾಂಬ್ ನಂಥ ವಸ್ತು

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 02: ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ವಿಭಾಗದಲ್ಲಿ ಬುಧವಾರದಂದು
ಬಾಂಬ್ ನಂಥ ವಸ್ತು ಪತ್ತೆಯಾಗಿ ಆತಂಕ ಮೂಡಿಸಿತ್ತು.

ದೆಹಲಿ ವಿಮಾನನಿಲ್ದಾಣದ ಸರಕುಗಳ ಸಂಗ್ರಹ ಪ್ರದೇಶದಲ್ಲಿ ಸಂಶಯಾಸ್ಪದ ವಸ್ತುವೊಂದು ಪತ್ತೆಯಾಗಿತ್ತು.ಬಾಂಬ್ ನಿಷ್ಕ್ರಿಯ ಮತ್ತು ಶ್ವಾನದಳಗಳು(BBDS)ತೀವ್ರ ಶೋಧ ನಡೆಸಿದ ಬಳಿಕ ಪತ್ತೆಯಾದ ವಸ್ತುವಿನಲ್ಲಿ ಯಾವುದೇ ಸ್ಫೋಟಕಗಳಿಲ್ಲ ಎಂಬುದು ತಿಳಿದು ಬಂದಿತು.

'Suspicious' material found at Delhi airport; Bomb squad identifies it as car spare parts

ಪತ್ತೆಯಾದ ವಸ್ತು ಸ್ಫೋಟಕವಲ್ಲ. ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ಮಹಾ ನಿರ್ದೇಶಕ ಓ.ಪಿ.ಸಿಂಗ್ ತಿಳಿಸಿದರು.

ಬೆಳಗ್ಗೆ 7.05ರಲ್ಲಿ ಕಾರ್ಗೋ ಪ್ರದೇಶದಲ್ಲಿ ಶಂಕಾಸ್ಪದ ವಸ್ತು ಪತ್ತೆಯಾದ ಬಗ್ಗೆ ಕಂಟ್ರೋಲ್ ರೂಂಗೆ ತುರ್ತು ಕರೆ ಬಂದಿತ್ತು. ನಂತರ ಬಾಂಬ್ ಮತ್ತು ಡಾಗ್ ಸ್ಕ್ವಾಡ್‍ಗಳನ್ನು ತಕ್ಷಣ ಅಲ್ಲಿಗೆ ರವಾನಿಸಿ ತೀವ್ರ ಶೋಧ ನಡೆಸಿದರು.

Delhi on high alert : Terrorists dressed in army uniform to attack airport

ಪತ್ತೆಯಾದ ವಸ್ತುವು ಮಾರುತಿ ಕಂಪೆನಿಗೆ ಸೇರಿದ ವಾಹನದ ಬಿಡಿಭಾಗ ಎಂದು ದೃಢಪಡಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The cargo terminal at the Indira Gandhi International Airport (IGI) was reportedly cordoned off after the recovery of a suspicious material on Wednesday.
Please Wait while comments are loading...