ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ ಅವಧಿಯಲ್ಲಿ ಪೂರ್ತಿ ಸಂಬಳ ವಿಚಾರ: ಇಂದು ಸುಪ್ರೀಂ ತೀರ್ಪು

|
Google Oneindia Kannada News

ದೆಹಲಿ, ಜೂನ್ 12: ಕೊರೊನಾ ವೈರಸ್ ಲಾಕ್‌ಡೌನ್ ಅವಧಿಯಲ್ಲಿ ಕೆಲಸಗಾಗರಿಗೆ ಪೂರ್ತಿ ವೇತನ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಲಿದೆ.

ಕೊರೊನಾ ಸೋಂಕು ಹರಡುವ ಭೀತಿಯಲ್ಲಿ ಮಾರ್ಚ್ ತಿಂಗಳಲ್ಲಿ ದೇಶಾದ್ಯಂತ ಲಾಕ್‌ಡೌನ್‌ ಜಾರಿ ಮಾಡಲಾಯಿತು. ಅಲ್ಲಿಂದ ಸುಮಾರು 54ಕ್ಕೂ ಅಧಿಕ ದಿನಗಳವರೆಗೂ ಅಗತ್ಯ ಸೇವೆಗಳನ್ನು ಬಿಟ್ಟು ಬೇರೆ ವ್ಯವಹಾರಿಕ ಚಟುವಟಿಕೆಯೂ ನಡೆದಿಲ್ಲ.

ಸುಪ್ರೀಂಕೋರ್ಟ್ ಆದೇಶದಿಂದ ನಿಟ್ಟುಸಿರು ಬಿಟ್ಟ ವಲಸೆ ಕಾರ್ಮಿಕರುಸುಪ್ರೀಂಕೋರ್ಟ್ ಆದೇಶದಿಂದ ನಿಟ್ಟುಸಿರು ಬಿಟ್ಟ ವಲಸೆ ಕಾರ್ಮಿಕರು

ಈ ವೇಳೆ ಲಾಕ್‌ಡೌನ್‌ ಅವಧಿಯಲ್ಲಿ ಕಾರ್ಮಿಕರಿಗೆ ಕಂಪನಿಗಳು ಪೂರ್ಣ ಪ್ರಮಾಣದ ಸಂಬಳ ನೀಡಬೇಕು ಎಂದು ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು. ಕೇಂದ್ರ ಸರ್ಕಾರದ ಆದೇಶ ಪ್ರಶ್ನಿಸಿ, ಖಾಸಗಿ ಕಂಪನಿಗಳು ಸೇರಿದಂತೆ ಅನೇಕ ಮಂದಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Supreme Court Will Announce Verdict About Pay Full Salary To Staff During Lockdown

ಈ ವಿಚಾರವಾಗಿ ಸುಪ್ರೀಂಕೋರ್ಟ್ ಜೂನ್ 4 ರಂದು ನ್ಯಾಯಮೂರ್ತಿ ಅಶೋಕ್ ಭುಷಣ್, ಸಂಜಯ್ ಕಿಶನ್ ಕೌಲ್, ಎಂ ಆರ್ ಶಾ ಸಮ್ಮುಖದಲ್ಲಿ ಅರ್ಜಿ ವಿಚಾರಣೆ ನಡೆದಿತ್ತು. ಲಾಕ್‌ಡೌನ್‌ ಅವಧಿಯ ಸಂಬಳ ವಿಚಾರವಾಗಿ ಉದ್ಯೋಗಿಗಳು ಮತ್ತು ಮಾಲೀಕರ ನಡುವೆ ಮಾತುಕತೆ ನಡೆಯಬೇಕಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.

ಜೂನ್ 12, ಶುಕ್ರವಾರದಂದು ಈ ಲಾಕ್‌ಡೌನ್ ಅವಧಿಯ ವೇತನಕ್ಕೆ ಕುರಿತಂತೆ ಸುಪ್ರೀಂಕೋರ್ಟ್ ಆದೇಶ ನೀಡಲಿದೆ. ಇಂದಿನ ತೀರ್ಪು ಕಾರ್ಮಿಕರು ಮತ್ತು ಕಂಪನಿ ಮಾಲೀಕರ ಪಾಲಿಗೆ ಬಹಳ ಮುಖ್ಯವಾಗಿದೆ.

English summary
supreme court will announce verdict friday on petition challenging MHA order to pay full salary to staff during lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X