ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಒಪ್ಪಂದದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಎರಡು ಅರ್ಜಿ: ಬುಧವಾರ ವಿಚಾರಣೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 8: ದೇಶದಾದ್ಯಂತ ತೀವ್ರ ವಿವಾದದ ಬಿರುಗಾಳಿ ಎಬ್ಬಿಸಿರುವ ರಫೇಲ್ ಒಪ್ಪಂದದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಎರಡು ಪ್ರತ್ಯೇಕ ಅರ್ಜಿಗಳು ದಾಖಲಾಗಿವೆ. ಈ ಎರಡೂ ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್ 10ರಂದು (ಬುಧವಾರ) ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ರಫೇಲ್ ಒಪ್ಪಂದ ನಡೆಸುವಾಗ ಮತ್ತು ಎನ್‌ಡಿಎ ಸರ್ಕಾರ ಮಾಡಿಕೊಂಡ ಒಪ್ಪಂದದ ವೇಳೆ ಯುದ್ಧ ವಿಮಾನದ ದರಗಳು ಎಷ್ಟಿದ್ದವು ಎಂಬ ಹೋಲಿಕೆಯ ಬೆಲೆಯ ವಿವರವನ್ನು ಸುಪ್ರೀಂಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಬಹಿರಂಗಪಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ವಿನೀತ್ ದಂಡಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ರಫೇಲ್ ವಿಮಾನ ಖರೀದಿ ಪರವಾಗಿ ವಾಯುಸೇನೆ ಮುಖ್ಯಸ್ಥರು ಹೇಳಿದ್ದೇನು?ರಫೇಲ್ ವಿಮಾನ ಖರೀದಿ ಪರವಾಗಿ ವಾಯುಸೇನೆ ಮುಖ್ಯಸ್ಥರು ಹೇಳಿದ್ದೇನು?

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್ ಹಾಗೂ ಕೆ.ಎಂ. ಜೋಸೆಫ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಪಿಐಎಲ್‌ ವಿಚಾರಣೆ ನಡೆಸಲಿದೆ.

ಡಸಾಲ್ಟ್ ಕಂಪೆನಿಯು ರಿಲಯನ್ಸ್ ಡಿಫೆನ್ಸ್ ಸಂಸ್ಥೆಗೆ ನೀಡಿದ ಗುತ್ತಿಗೆ ಒಪ್ಪಂದದ ಕುರಿತಾದ ಮಾಹಿತಿಯನ್ನು ಸಹ ಒದಗಿಸಲು ಸೂಚಿಸುವಂತೆ ಅರ್ಜಿ ಮನವಿ ಮಾಡಿದೆ.

ತಡೆಯಾಜ್ಞೆ ನೀಡಲು ಕೋರಿಕೆ

ತಡೆಯಾಜ್ಞೆ ನೀಡಲು ಕೋರಿಕೆ

ಭಾರತ ಮತ್ತು ಫ್ರಾನ್ಸ್ ನಡುವೆ ನಡೆದಿರುವ ರಫೇಲ್ ಒಪ್ಪಂದಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ವಕೀಲ ಎಂಎಲ್ ಶರ್ಮಾ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯನ್ನು ಸೋಮವಾರ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ನವೀನ್ ಸಿನ್ಹಾ ಮತ್ತು ಕೆ.ಎಂ. ಜೋಸೆಫ್ ಅವರನ್ನು ಒಳಗೊಂಡ ನ್ಯಾಯಪೀಠ, ಶರ್ಮಾ ಅವರ ಮನವಿ ಮೇರೆಗೆ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

ರಫೇಲ್ ಡೀಲ್: ಏನೇನಾಯ್ತು ಎಂದು ಕಾಂಗ್ರೆಸ್ ನೀಡಿದ ಘಟನಾವಳಿ ರಫೇಲ್ ಡೀಲ್: ಏನೇನಾಯ್ತು ಎಂದು ಕಾಂಗ್ರೆಸ್ ನೀಡಿದ ಘಟನಾವಳಿ

ಮುಂದೂಡಲು ಕೋರಿದ ವಕೀಲ

ಮುಂದೂಡಲು ಕೋರಿದ ವಕೀಲ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಬೇಕಾಗಿದ್ದು, ಅದಕ್ಕಾಗಿ ವಿಚಾರಣೆಯನ್ನು ಮುಂದೂಡುವಂತೆ ಶರ್ಮಾ ನ್ಯಾಯಪೀಠವನ್ನು ಕೋರಿಕೊಂಡರು.

ಇದಕ್ಕೂ ಮುನ್ನ ಅವರು ತಮ್ಮ ಅನಾರೋಗ್ಯದ ಸಮಸ್ಯೆಯ ಆಧಾರದಲ್ಲಿ ವಿಚಾರಣೆ ಮುಂದೂಡಲು ಮನವಿ ಮಾಡಿದ್ದರು. ಬಳಿಕ ಹೆಚ್ಚುವರಿ ದಾಖಲೆಗಳ ಸಲ್ಲಿಕೆಗೆ ಕಾಲಾವಕಾಶ ನೀಡುವಂತೆ ಸ್ಪಷ್ಟನೆ ನೀಡಿದರು.

ಫ್ರಾನ್ಸ್ ಜತೆ ಮಾಡಿಕೊಂಡಿರುವ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ. ಹೀಗಾಗಿ ಅದಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಅವರು ಕೋರಿದ್ದಾರೆ.

ರಫೇಲ್ ಖರೀದಿ ಬಗ್ಗೆ ಮೋದಿಗೆ 6 ಪ್ರಶ್ನೆ ಮುಂದಿಟ್ಟ ಯಶವಂತ್ ಸಿನ್ಹಾರಫೇಲ್ ಖರೀದಿ ಬಗ್ಗೆ ಮೋದಿಗೆ 6 ಪ್ರಶ್ನೆ ಮುಂದಿಟ್ಟ ಯಶವಂತ್ ಸಿನ್ಹಾ

ಸಂಸತ್ ಅನುಮೋದನೆ ಪಡೆದಿಲ್ಲ

ಸಂಸತ್ ಅನುಮೋದನೆ ಪಡೆದಿಲ್ಲ

36 ರಫೇಲ್ ಜೆಟ್‌ಗಳ ಖರೀದಿಗಾಗಿ ಎರಡು ಸರ್ಕಾರಗಳ ನಡುವೆ ನಡೆದ ಒಪ್ಪಂದವು ಭ್ರಷ್ಟಾಚಾರದಿಂದ ಒಡಮೂಡಿದೆ ಮತ್ತು ಸಂವಿಧಾನದ 253ನೇ ವಿಧಿ (ಅಂತರ್ ಸರ್ಕಾರಿ ಒಪ್ಪಂದಗಳನ್ನು ಅನುಷ್ಠಾನಕ್ಕೆ ತರಲು ಸಂಸತ್ ಹೊಂದಿರುವ ಯಾವುದೇ ಕಾನೂರು ರಚಿಸುವ ಅಧಿಕಾರ) ಅಡಿ ಸಂಸತ್‌ನ ಅನುಮೋದನೆಗೆ ಒಳಪಟ್ಟಿಲ್ಲ. ಈ ಕಾರಣಗಳಿಂದ ಇದನ್ನು ರದ್ದುಗೊಳಿಸಬೇಕು ಎಂದು ಶರ್ಮಾ ಒತ್ತಾಯಿಸಿದ್ದಾರೆ.

ಅಧಿಕಾರಿಯ ಆಕ್ಷೇಪದ ನಡುವೆಯೇ 36 ರಫೇಲ್ ಖರೀದಿ ಒಪ್ಪಂದಕ್ಕೆ ಸಹಿ ಅಧಿಕಾರಿಯ ಆಕ್ಷೇಪದ ನಡುವೆಯೇ 36 ರಫೇಲ್ ಖರೀದಿ ಒಪ್ಪಂದಕ್ಕೆ ಸಹಿ

ಈ ಹಿಂದೆಯೂ ಅರ್ಜಿ ದಾಖಲು

ಈ ಹಿಂದೆಯೂ ಅರ್ಜಿ ದಾಖಲು

ಕಾಂಗ್ರೆಸ್‌ ಮುಖಂಡ ತೆಹ್ಸೀನ್ ಎಸ್ ಪೂನಾವಾಲಾ ಅವರು ಮಾರ್ಚ್‌ ತಿಂಗಳಿನಲ್ಲಿ ಇದೇ ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 2016ರ ಸೆಪ್ಟೆಂಬರ್ 23ರಂದು ಫ್ರಾನ್ಸ್ ಜತೆ ಖರೀದಿ ಒಪ್ಪಂದ ನಡೆಸುವ ಮುನ್ನ ಕೇಂದ್ರ ಸಂಪುಟವು ರಕ್ಷಣಾ ಖರೀದಿ ಪ್ರಕ್ರಿಯೆಯ (ಡಿಪಿಪಿ) ಅನುಮೋದನೆಯನ್ನು ಏಕೆ ಪಡೆದುಕೊಳ್ಳಲಿಲ್ಲ ಎಂದು ಸ್ವತಂತ್ರ ತನಿಖೆ ನಡೆಸುವಂತೆ ಕೋರಿದ್ದರು.

English summary
The Supreme Court will hear two petitions against Rafale deal on October 10 by advocate ML Sharma and Vineet Dhanda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X