ಜೂಮ್ ವಿಡಿಯೋ ಕಾಲಿಂಗ್ ಬಂದ್ ಆಗುವ ಸಮಯ ಹತ್ತಿರ

ನವದೆಹಲಿ, ಮೇ 23: ಕೊರೊನಾ ಲಾಕ್‌ಡೌನ್ ಬಳಿಕ ಸಾಕಷ್ಟು ಜನಪ್ರಿಯವಾಗಿರುವ ಜೂಮ್ ವಿಡಿಯೋ ಕಾಲಿಂಗ್ ಆಪ್ (Zoom Mobile Application) ನಿಷೇಧಿಸುವ ಬಗ್ಗೆ ಸಲ್ಲಿಸಲಾಗಿದ್ದ ಪಿಟಿಷನ್ ವಿಚಾರಣೆಯನ್ನು ಸುಪ್ರೀಕೋರ್ಟ್ ಇಂದು ನಡೆಸಿತು.

Recommended Video

      HD Deve Gowda From a villager to PM of India : ಹಳ್ಳಿಯಿಂದ ದಿಲ್ಲಿವರೆಗೆ ಸಾಗಿ ಬಂದ ದೇವೇಗೌಡರ ರಾಜಕೀಯ

      ವಿಚಾರಣೆ ನಡೆಸಿದ ನ್ಯಾಯಾಲಯ, ಈ ವಿಚಾರವಾಗಿ ಉತ್ತರಿಸಲು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲ ಸಮಯಾವಕಾಶವನ್ನು ನೀಡಿದೆ.

      ನವದೆಹಲಿಯ ಹರ್ಷಾ ಚಾಗ್ ಎನ್ನುವ ಟ್ಯೂಟೊರ್ ಒಬ್ಬರು, 'ಜೂಮ್ ಆಪ್ ಸುರಕ್ಷಿತವಲ್ಲ, ಹಾಗಾಗಿ ಈ ಆಪ್‌ನ್ನು ನಿಷೇಧಿಸಬೇಕು' ಎಂದು ಅವರು ಕಳೆದ ವಾರ ಸುಪ್ರೀಕೋರ್ಟ್ ಗೆ ಪಿಟಿಷನ್ ಸಲ್ಲಿಸಿದ್ದರು.

      Supreme Court Seeks Central Government Reply On Ban Zoom Video Calling App

      ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರ ನೇತೃತ್ವದ ಪೀಠ ಅರ್ಜಿಯನ್ನು ವಿಚಾರಣೆ ನಡೆಸಿತು. ಜೂಮ್ ಆಪ್ ಬಳಕೆದಾರರ ದತ್ತಾಂಶಗಳನ್ನು ಕಾಪಾಡುವಲ್ಲಿ ಸಮರ್ಥವಾಗಿಲ್ಲ ಎಂಬುದಕ್ಕೆ ಕೇಂದ್ರದ ಪ್ರತಿಕ್ರಿಯೆ ಕೇಳಿದ್ದಾರೆ.

      ಈ ಹಿಂದೆ ಕೇಂದ್ರ ಸರ್ಕಾರ, ಜೂಮ್ ಆಪ್ ನ್ನು ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಬಳಸಬಾರದು. ಅದು ಸುರಕ್ಷಿತವಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+