15 ಕ್ಷೇತ್ರಗಳ ಉಪಚುನಾವಣೆಗೆ ತಡೆ ನೀಡಿದ ಸುಪ್ರೀಂಕೋರ್ಟ್‌

Recommended Video

      ಡ್ಯಾನ್ಸ್ ಮೂಡ್ ನಲ್ಲಿದ್ದಾರೆ ಅನರ್ಹ ಶಾಸಕರು..! | Rebel MLA's | Oneindia Kannada

      ನವದೆಹಲಿ, ಸೆಪ್ಟೆಂಬರ್ 26: ಅನರ್ಹ ಶಾಸಕರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಉಪಚುನಾವಣೆಗೆ ತಡೆ ನೀಡಿ ಆದೇಶ ಹೊರಡಿಸಿದೆ.

      ಉಚ್ಛ ನ್ಯಾಯಾಲಯದ ಆದೇಶದಿಂದಾಗಿ ಅಕ್ಟೋಬರ್ 21 ರಂದು ನಡೆಯಬೇಕಿದ್ದ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ರದ್ದು ಮಾಡಲಾಗಿದೆ.

      ಪ್ರಕರಣದ ಪೂರ್ಣ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬಯಸಿದ ಕಾರಣದಿಂದ ಉಪಚುನಾವಣೆಗೆ ತಡೆ ನೀಡಿದೆ. ಪ್ರಕರಣದ ಪೂರ್ಣ ವಿಚಾರಣೆ ಮಾಡಿ ತೀರ್ಪು ನೀಡಲು ಸುಪ್ರೀಂಕೋರ್ಟ್ ಬಯಸಿದೆ.

      ಇಂದು ವಿಚಾರಣೆ ನಡೆಸಿದ ನ್ಯಾಯಾಲಯವು ಉಪಚುನಾವಣೆಗೆ ತಡೆ ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 22 ಕ್ಕೆ ಮುಂದೂಡಿದೆ.

      Supreme Court Put Stay On Karnataka By Elections

      ಅಕ್ಟೋಬರ್ 22 ರಂದು ವಿಚಾರಣೆ ನಡೆಸುವುದಾಗಿ ಹೇಳಿರುವ ಕಾರಣ ಉಪಚುನಾವಣೆಯು ಕನಿಷ್ಟ ಒಂದು ತಿಂಗಳು ತಡವಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಅನರ್ಹತೆಯಿಂದ 17 ಕ್ಷೇತ್ರಗಳಲ್ಲಿ ಈಗ ಪ್ರತಿನಿಧಿಗಳಿಲ್ಲ.

      ಸೆ. 21ರಂದು ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗಳಿಗೆ ಚುನಾವಣೆಯ ದಿನಾಂಕ ಪ್ರಕಟಿಸಿದ್ದ ಚುನಾವಣಾ ಆಯೋಗ ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಿಸಿತ್ತು. ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ನ್ಯಾಯಾಲಯದಲ್ಲಿ ಇರುವ ಕಾರಣ ಈ ಎರಡು ಕ್ಷೇತ್ರಗಳಿಗೆ ಚುನಾವಣೆ ಘೋಷಿಸಿರಲಿಲ್ಲ.

      ಎಲ್ಲೆಲ್ಲಿ ಚುನಾವಣೆ ನಿಗದಿಯಾಗಿತ್ತು?:
      ಕೆಆರ್ ಪುರ, ಹುಣಸೂರು, ಯಲ್ಲಾಪುರ, ಕೆಆರ್ ಪೇಟೆ, ಮಹಾಲಕ್ಷ್ಮೀ ಲೇಔಟ್, ಹೊಸಕೋಟೆ, ಶಿವಾಜಿನಗರ, ವಿಜಯನಗರ, ಯಶವಂತಪುರ, ರಾಣೆಬೆನ್ನೂರು, ಹಿರೇಕೆರೂರು, ಗೋಕಾಕ್, ಅಥಣಿ, ಕಾಗವಾಡ, ಚಿಕ್ಕಬಳ್ಳಾಪುರ.

      ಉಪ ಚುನಾವಣೆಗೆ ತಡೆ ನೀಡಬೇಕು, ಇಲ್ಲವೇ ತಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಅನರ್ಹ ಶಾಸಕರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅನರ್ಹ ಶಾಸಕರ ಪರ ವಕೀಲರು ಮತ್ತು ಕಾಂಗ್ರೆಸ್ ಪರ ವಕೀಲರ ಸುದೀರ್ಘ ವಾದ ಆಲಿಸಿದ ನ್ಯಾಯಾಲಯ, ಅ. 22ಕ್ಕೆ ವಿಚಾರಣೆ ಮುಂದೂಡಿದೆ. ಅಲ್ಲಿಯವರೆಗೂ ಉಪ ಚುನಾವಣೆ ನಡೆಸದಂತೆ ಸೂಚನೆ ನೀಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+