ಅತ್ಯಾಚಾರ ಸಂತ್ರಸ್ತರ ಮಾಹಿತಿ ಬಹಿರಂಗಕ್ಕೆ ಸುಪ್ರೀಂ ಕಡಿವಾಣ

ನವದೆಹಲಿ, ಡಿಸೆಂಬರ್ 11: ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರ ಹೆಸರು ಬಹಿರಂಗಕ್ಕೆ ಸುಪ್ರೀಂಕೋರ್ಟ್ ಕಡಿವಾಣ ಹಾಕಿದೆ.

ಒಂದೊಮ್ಮೆ ಸಂತ್ರಸ್ತೆ ಮೃತಪಟ್ಟಿದ್ದರೂ ಕೂಡ ಅವರ ಹೆಸರನ್ನು ಅಥವಾ ಯಾವುದೇ ಗುರುತನ್ನು ಬಹಿರಂಗಪಡಿಸುವಂತಿಲ್ಲ ಎಂದು ಸುಪ್ರೀಂ ಹೇಳಿದೆ.ಪಾಲಕರು ಒಪ್ಪಿಗೆ ಸೂಚಿಸಿದ್ದರೂ ಕೂಡ ಪೊಲೀಸರು ಅಥವಾ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳೂ ಅತ್ಯಾಚಾರ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸುವಂತಿಲ್ಲ.

ಅಲ್ಲದೆ, ಲೈಂಗಿಕ ದೌರ್ಜನ್ಯ ಪ್ರಕರಣಗಳ ಎಫ್‌ಐಆರ್‌ಗಳನ್ನು ವಿಶೇಷವಾಗಿ ಅಪ್ರಾಪ್ತರು ಒಳಗೊಂಡಿರುವ ಪ್ರಕರಣಗಳ ವಿವರವನ್ನು ಸಾರ್ವಜನಿಕಗೊಳಿಸಬಾರದು ಎಂದು ನ್ಯಾಯಾಲಯ ಆದೇಶಿಸಿದೆ.ಸುಪ್ರೀಂ ಕೋರ್ಟ್​ನಿಂದ ಹೊರಡಿಸಲಾದ ಮಾರ್ಗದರ್ಶಿ ಸೂತ್ರಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಳವಡಿಸಿಕೊಳ್ಳಬೇಕು.

Supreme Court put a ban on media to reveal identity of rape victims

ಅತ್ಯಾಚಾರದ ಬಳಿಕ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುವ ಸಂತ್ರಸ್ತರ ಕುರಿತು ಕಳವಳ ವ್ಯಕ್ತಪಡಿಸಿರುವ ಕೋರ್ಟ್‌, ಅತ್ಯಾಚಾರದಿಂದ ಬದುಕುಳಿದವರನ್ನು ಸಮಾಜದಲ್ಲಿ ಅಸ್ಪೃಷ್ಯರಂತೆ ಪರಿಗಣಿಸುವುದು ದುರದೃಷ್ಟಕರ ಯಾವುದೇ ಕಾರಣಕ್ಕೂ ಆ ರೀತಿ ನಡೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+