ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣ, ಊಟ ಕೊಡಿ: ಸುಪ್ರೀಂಕೋರ್ಟ್

ನವದೆಹಲಿ, ಮೇ 28: ಕೊರೊನಾವೈರಸ್ ಲಾಕ್‌ಡೌನ್‌ನಿಂದ ತತ್ತರಿಸಿ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ವಾಪಸ್ ಹೋಗುತ್ತಿದ್ದಾರೆ. ಇದರಿಂದ ಬಹುತೇಕ ವಲಸೆ ಕಾರ್ಮಿಕರು ಪ್ರಯಾಣ, ಅನ್ನ, ಆಹಾರ, ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ.

Recommended Video

      BJP ಅಂಗೈಯಲ್ಲಿ ಅರಮನೆ, ಮಾಯಾ ಬಜಾರ್ ತೋರಿಸಿದ್ದಾರೆ ಎಂದ ಈಶ್ವರ ಖಂಡ್ರೆ | Oneindia Kannada

      ಈ ಕುರಿತು ಗುರುವಾರ ಸುಪ್ರೀಂಕೋರ್ಟ್‌ ಮಹತ್ವದ ನಿರ್ದೇಶನ ನೀಡಿದೆ. ಲಾಕ್‌ಡೌನ್‌ನಿಂದ ತೊಂದರೆಗೊಳಾಗಿ ತವರಿಗೆ ತೆರಳುವ ಕಾರ್ಮಿಕರ ರೈಲು, ಬಸ್‌ನ ಪ್ರಯಾಣ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ನೋಡಿಕೊಳ್ಳಬೇಕು. ಅವರಿಗೆ ಉಚಿತ ಆಹಾರ ನೀರು ಒದಗಿಸಬೇಕು ಎಂದಿದೆ.

      ಅಷ್ಟೇ ಅಲ್ಲದೇ ರೈಲು ಪ್ರಯಾಣದಲ್ಲಿ ಕಾರ್ಮಿಕರಿಗೆ ಅನ್ನ ಆಹಾರದ ಕೊರತೆಯಾಗದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರಗಳ ಹೊಣೆಗಾರಿಕೆಯೂ ಇದೆ ಎಂದು ಆದೇಶ ನೀಡಿದೆ.

      ಅಶೋಕ್ ಭೂಷಣ್ ನೇತೃತ್ವದ ತ್ರಿ ಸದಸ್ಯ ಪೀಠದಿಂದ ನಿರ್ದೇಶನ

      ಅಶೋಕ್ ಭೂಷಣ್ ನೇತೃತ್ವದ ತ್ರಿ ಸದಸ್ಯ ಪೀಠದಿಂದ ನಿರ್ದೇಶನ

      ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ತ್ರಿ ಸದಸ್ಯ ಪೀಠ ಈ ಮಹತ್ವದ ನಿರ್ದೇಶನ ನೀಡಿದೆ. ಈ ಬಗ್ಗೆ ಒಂದು ವಾರದೊಳಗೆ ವಿವರವಾದ ವರದಿ ನೀಡುವಂತೆಯೂ ಕೇಂದ್ರಕ್ಕೆ ತಾಕೀತು ಮಾಡಿದೆ.

      ಕಳಸು, ಬರಲು ವ್ಯವಸ್ಥೆ ಮಾಡಬೇಕು

      ಕಳಸು, ಬರಲು ವ್ಯವಸ್ಥೆ ಮಾಡಬೇಕು

      ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಬಯಸಿದರೆ ಅವರನ್ನು ಕಳುಹಿಸಿ ಕೊಡಬೇಕು, ವಾಪಸ್ ಕೆಲಸಕ್ಕೆ ಹೋಗುತ್ತೇವೆ ಎಂದರೆ ಅದಕ್ಕೂ ಅನುವು ಮಾಡಿಕೊಡಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹತಾ ಅವರು ನ್ಯಾಯಾಲಯಕ್ಕೆ ಕೇಂದ್ರದ ಪರವಾಗಿ ಹಾಜರಾಗಿದ್ದರು.

      ಕಾಲ್ನಡಿಗೆಯ ಕಾರ್ಮಿಕರಿಗೂ ಊಟ ನೀಡಿ

      ಕಾಲ್ನಡಿಗೆಯ ಕಾರ್ಮಿಕರಿಗೂ ಊಟ ನೀಡಿ

      ಕಾಲ್ನಡಿಗೆಯಲ್ಲಿ ಹೋಗುವ ಕಾರ್ಮಿಕರ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್‌, ಔರಾಂಗಾಬಾದ್‌ನ ರೈಲು ಹಳಿ ಮೇಲೆ ಮಲಗಿ ಮೃತಪಟ್ಟ ಕಾರ್ಮಿಕರ ವಿಷಯದಲ್ಲಿ ಏನು ಕ್ರಮ ಕೈಗೊಂಡಿದಿರಿ ಎಂದು ಪ್ರಶ್ನಿಸಿದೆ. ಕಾಲ್ನಡಿಗೆಯಲ್ಲಿ ಹೋಗುವ ಕಾರ್ಮಿಕರಿಗೆ ಆಹಾರದ ವ್ಯವಸ್ಥೆ ಮಾಡಿಸಬೇಕು ಎಂದು ಹೇಳಿದೆ.

      ರಾಜ್ಯಗಳು ಸರಿಯಾಗಿ ಸ್ಪಂದಿಸಿಲ್ಲ

      ರಾಜ್ಯಗಳು ಸರಿಯಾಗಿ ಸ್ಪಂದಿಸಿಲ್ಲ

      ವಿಚಾರಣೆ ವೇಳೆ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರ ವಿಚಾರದಲ್ಲಿ ಕೆಲ ರಾಜ್ಯಗಳು ರಾಜಕೀಯ ಮಾಡಿವೆ. ನಾವು ರೈಲುಗಳನ್ನು ಒದಗಿಸಿದರೂ ಅವರು ವಲಸೆ ಕಾರ್ಮಿಕರ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದು ಸಾಲಿಸಿಟರ್ ಜನರಲ್ ಆರೋಪಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+