ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಸಂಸತ್ ಕಟ್ಟಡ ಯೋಜನೆ: ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ

|
Google Oneindia Kannada News

ನವದೆಹಲಿ, ಜನವರಿ 5: ಬೃಹತ್ ಸಂಸತ್ ಭವನ ಒಳಗೊಂಡಂತೆ ವಿವಿಧ ಯೋಜನೆಗಳನ್ನು ನಿರ್ಮಿಸುವ ಕೇಂದ್ರ ಸರ್ಕಾರದ ವಿಸ್ಟಾ ಪ್ರಾಜೆಕ್ಟ್‌ಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಸರ್ಕಾರ ನಿರ್ಮಾಣ ಕಾರ್ಯ ನಡೆಸಲು ಅಡ್ಡಿಯಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆದರೆ ಕೆಲವು ಷರತ್ತುಗಳನ್ನು ವಿಧಿಸಿದೆ.

ಸರ್ಕಾರ ಮತ್ತು ಸೆಂಟ್ರಲ್ ವಿಸ್ಟಾ ಸಮಿತಿಯ ಯೋಜನೆಗೆ ಅನುಮತಿ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅನೇಕರು, ಅದರ ಪಾರದರ್ಶಕತೆಯನ್ನು ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಿದ್ದರು. ನ್ಯಾಯಮೂರ್ತಿ ಎಎಂ ಖನ್ವಿಲ್ಕರ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರನ್ನು ಒಳಗೊಂಡ ಮೂವರು ಸದಸ್ಯರ ನ್ಯಾಯಪೀಠ ಈ ಆದೇಶ ನೀಡಿದೆ.

ನೂತನ ಸಂಸತ್ ಭವನ ನಿರ್ಮಾಣವೇಕೆ? ಇಲ್ಲಿದೆ ಉತ್ತರನೂತನ ಸಂಸತ್ ಭವನ ನಿರ್ಮಾಣವೇಕೆ? ಇಲ್ಲಿದೆ ಉತ್ತರ

ಪರಿಸರ ಸಂಬಂಧಿ ಅನುಮೋದನೆ, ಶಾಸನ ಮತ್ತು ಮುನಿಸಿಪಲ್ ಕಾನೂನುಗಳ ಉಲ್ಲಂಘನೆ, ಪಾರಂಪರಿಕ ತಾಣ ಸಂರಕ್ಷಣೆ, ದೆಹಲಿ ಅಭಿವೃದ್ಧಿ ಕಾಯ್ದೆಯಡಿ ಭೂಮಿಯ ಬದಲಾವಣೆ ಮತ್ತು ಸಾರ್ವಜನಿಕ ಅಹವಾಲು ಆಲಿಕೆಗೆ ಆಹ್ವಾನಿಸುವ ಸ್ವರೂಪ ಹಾಗೂ ಸೆಂಟ್ರಲ್ ವಿಸ್ಟಾ ಮರು ಅಭಿವೃದ್ಧಿ ಯೋಜನೆ ಕುರಿತಾದ ಆಕ್ಷೇಪಣೆಗಳು ಸೇರಿದಂತೆ ವಿವಿಧ ಬಗೆಯ ಅರ್ಜಿಗಳು ಸಲ್ಲಿಕೆಯಾಗಿದ್ದವು.

Supreme Court Allows Central Vista Project With Conditions

ಯೋಜನೆಯ ಬಿಡ್ಡಿಂಗ್, ನೇಮಕಾತಿ ಮತ್ತು ಸಲಹೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ನೋಟಿಸ್‌ಗಳನ್ನು ಸುಪ್ರೀಂಕೋರ್ಟ್ ಅನುಮೋದಿಸಿತು.

ನೂತನ ಸಂಸತ್ ಭವನ ಕಟ್ಟಡ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆನೂತನ ಸಂಸತ್ ಭವನ ಕಟ್ಟಡ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ

ನಿರ್ಮಾಣ ಸ್ಥಳಗಳಲ್ಲಿ ದೂಳು ಮತ್ತು ಹೊಗೆ ನಿಗ್ರಹ ಗನ್‌ಗಳನ್ನು ಅಳವಡಿಸಬೇಕು ಮತ್ತು ಸ್ಮಾಗ್ ಟವರ್‌ ಸ್ಥಾಪಿಸಬೇಕು ಎಂದು ನ್ಯಾಯಮೂರ್ತಿಗಳಾದ ಖನ್ವಿಲ್ಕರ್ ಮತ್ತು ದಿನೇಶ್ ಮಾಹೇಶ್ವರಿ ಹೇಳಿದರು. ಯೋಜನೆ ನಡೆಸುವ ವಿಚಾರಕ್ಕೆ ಸಂಜೀವ್ ಖನ್ನಾ ಕೂಡ ಅನುಮತಿ ನೀಡಿದರು. ಆದರೆ ಭೂಮಿ ಬಳಕೆಯ ಬದಲಾವಣೆ ಹಾಗೂ ಯೋಜನೆಗೆ ಪರಿಸರ ಅನುಮತಿ ನೀಡುವ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದರು.

ನೂತನ ಸಂಸತ್ ಭವನ ಆತ್ಮನಿರ್ಭರ ಭಾರತ ಸೃಷ್ಟಿಗೆ ಸಾಕ್ಷಿ: ಮೋದಿನೂತನ ಸಂಸತ್ ಭವನ ಆತ್ಮನಿರ್ಭರ ಭಾರತ ಸೃಷ್ಟಿಗೆ ಸಾಕ್ಷಿ: ಮೋದಿ

ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ಕಾಮಗಾರಿ ಆರಂಭಿಸಲು ಪಾರಂಪರಿಕ ತಾಣ ಸಮಿತಿಯ ಅನುಮತಿ ಅಗತ್ಯವಾಗಿದೆ ಎಂದೂ ಕೋರ್ಟ್ ಆದೇಶದಲ್ಲಿ ತಿಳಿಸಿದೆ.

English summary
The Supreme Court of India has allowed Central Vista Project with 2:1 verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X