15 ನಿಮಿಷ ಸೂರ್ಯನ ಶಾಖ ಪಡೆಯಿರಿ, ಕೊರೊನಾ ಓಡಿಸಿ- ಸಚಿವರ ಹೇಳಿಕೆ
ನವ ದೆಹಲಿ, ಮಾರ್ಚ್ 19: 15 ನಿಮಿಷ ಸೂರ್ಯನ ಶಾಖ ಪಡೆಯಿರಿ ಇದರಿಂದ ವಿಟಮಿನ್ ಡಿ ಸಿಗುತ್ತದೆ. ಅಲ್ಲದೆ ಕೊರೊನಾವನ್ನು ಇದು ಕೊಲ್ಲುತ್ತದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿಕೆ ನೀಡಿದ್ದಾರೆ.
ಇಂದು ಸಂಸತ್ತಿನ ಆವರಣದಲ್ಲಿ ಕೊರೋನಾ ವೈರಸ್ ತಡೆಯ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಮಾತನಾಡಿದ್ದಾರೆ. ''ಮಧ್ಯಾಹ್ನ 11 ಗಂಟೆಯಿಂದ 2 ಗಂಟೆವರೆಗೆ ಹೆಚ್ಚು ಬಿಸಿಲಿರುತ್ತದೆ. ಆಗ ಸೂರ್ಯನ ಕಿರಣಗಳು ಹೆಚ್ಚು ಪ್ರಖರವಾಗಿರುತ್ತವೆ. ಆ ಸಮಯದಲ್ಲಿ 15 ನಿಮಿಷ ಸೂರ್ಯನ ಶಾಖ ಪಡೆದರೆ, ವಿಟಮಿನ್ ಡಿ ಸಿಗುತ್ತದೆ. ಇದರಿಂದ ಎಲ್ಲ ರೀತಿಯ ವೈರಸ್‌ಗಳು ನಾಶ ಆಗುತ್ತದೆ ಎಂದಿದ್ದಾರೆ.

ಅಶ್ವಿನಿ ಕುಮಾರ್ ಚೌಬೆ ಅವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಸಾಕಷ್ಟು ಕಾಮೆಂಟ್ಸ್ ಗಳು ಬರುತ್ತಿದೆ. ಕೆಲವರು ಅಶ್ವಿನಿ ಕುಮಾರ್ ಚೌಬೆ ಹೇಳಿಕೆ ಸರಿ ಎಂದರೆ, ಇನ್ನು ಕೆಲವರು ತಪ್ಪು ಎನ್ನುತ್ತಿದ್ದಾರೆ. ಸೂರ್ಯನ ಶಾಖದಿಂದ ಕೊರೊನಾ ಹೋಗುತ್ತದೆಯೇ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಅಶ್ವಿನಿ ಕುಮಾರ್ ಚೌಬೆ ಸೂರ್ಯನ ಶಾಖದಿಂದ ವಿಟಮಿನ್ ಡಿ ಸಿಗುತ್ತದೆ. ವಿಟಮಿನ್ ಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಎಂದು ಹೇಳಿದ್ದಾರೆ. ಅದು ನಿಜವೇ. ಆದರೆ, ಕೊರೊನಾ ಬಿಸಿಗೆ ಬರುವುದಿಲ್ಲ ಎನ್ನುವುದು ಎಲ್ಲಿಯೂ ಸಾಬೀತಾಗಿಲ್ಲ.
#WATCH Union Minister of State for Health and Family Welfare Ashwini Kumar Choubey: People should spend at least 15 minutes in the sun. The sunlight provides Vitamin D, improves immunity and also kills such (#Coronavirus) viruses. pic.twitter.com/F80PX6VOmy
— ANI (@ANI) March 19, 2020
ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಕೂಡ ಬಿಸಿಲಿನ ಭಾಗದಲ್ಲಿ ಕೊರೊನಾ ಬರುವುದಿಲ್ಲ ಎಂದು ಮೊದಲು ಹೇಳಿದ್ದರು. ಆದರೆ, ಅದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಆ ಬಗ್ಗೆ ಆಧಾರ ದೊರೆತಿಲ್ಲ.












Click it and Unblock the Notifications