ಸುನಂದಾ ಸಾಯುವ ಮೊದಲು ಭೇಟಿಯಾಗಿದ್ದ ಸುನಿಲ್ ಯಾರು?
ನವದೆಹಲಿ, ಜ. 9: ಸುನಂದಾ ಪುಷ್ಕರ್ ಹತ್ಯೆ ಪ್ರಕರಣದಲ್ಲಿ ಹೊಸ ವಿಷಯವೊಂದು ಬಹಿರಂಗಗೊಂಡಿದೆ. ಸುನಂದಾ ತಾವು ಸಾಯುವುದಕ್ಕಿಂತ ಎರಡು ದಿನ ಮೊದಲು ಲೀಲಾ ಹೋಟೆಲ್‌ನಲ್ಲಿ ಓರ್ವನನ್ನು ಭೇಟಿಯಾಗಿದ್ದರು. ಅಲ್ಲದೆ, ಪತಿಯೊಂದಿಗೆ ತೀವ್ರ ಜಗಳವಾಡಿದ್ದರು ಎಂದು ಅವರ ಅಡುಗೆ ಸಹಾಯಕ ತಿಳಿಸಿದ್ದಾರೆ.
ಸುನಂದಾ ಅವರು ಶಶಿ ತರೂರ್‌ಗೆ ಕರೆ ಮಾಡಿ "ನಿನ್ನ ಕತೆ ಮುಗೀತು. ನಾನು ಮಾಧ್ಯಮಗಳ ಎದುರು ವಿಷಯ ಬಹಿರಂಗಪಡಿಸುತ್ತೇನೆ" ಎಂದು ಎಚ್ಚರಿಕೆ ನೀಡಿದ್ದರೆಂದು ಪುಷ್ಕರ್ ಹಾಗೂ ತರೂರ್ ದಂಪತಿ ಮನೆಯಲ್ಲಿ ಅಡುಗೆ ಸಹಾಯಕನಾಗಿದ್ದ ನಾರಾಯಣ ಸಿಂಗ್ ಹೇಳಿಕೆ ನೀಡಿದ್ದಾರೆ.
ಅಲ್ಲದೆ, ಸುನಂದಾ ಸಾವಿಗೀಡಾಗುವ ಮೊದಲು ಅವರ ಮೊಬೈಲ್‌ನಿಂದ ಕೆಲವು ಮೆಸೇಜ್‌ಗಳು ಹಾಗೂ ಟ್ವೀಟ್‌ಗಳನ್ನು ಕಾಪಿ ಮಾಡಿಕೊಳ್ಳಲು ಸುನಿಲ್ ಎಂಬುವರು ಸಹಾಯ ಮಾಡಿದ್ದರು. [ಸುನಂದಾ ಕೊಲೆ ದೃಢಪಡಿಸಿದ್ದು ಗಾಯ ಸಂ. 10]

ಸುನಂದಾ ಪುಷ್ಕರ್ ಹಾಗೂ ಶಶಿ ತರೂರ್ ಇಬ್ಬರೂ ದುಬೈನಲ್ಲಿ ಪರಸ್ಪರ ದೈಹಿಕ ದಾಳಿ ನಡೆಸಿದ್ದರು. ಆಗ ತರೂರ್ ಕಾಲಿಗೆ ಗಾಯವಾಗಿತ್ತು. ಸುನಂದಾ ಸಾಯುವ ಒಂದು ದಿನ ಮೊದಲು ಬೆಳಗ್ಗೆ ಇಬ್ಬರೂ ಜಗಳವಾಡಿದ್ದರು ಎಂದು ನಾರಾಯಣ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ. [ಸುನಂದಾ ಪ್ರಕರಣ ಎಸ್ಐಟಿಯಿಂದ ವಿಚಾರಣೆ]
ಪ್ರಸ್ತುತ ಶಶಿ ತರೂರ್ ಭುಜದ ಸಮಸ್ಯೆಯಿಂದ ನರಳುತ್ತಿದ್ದು, ಚಿಕಿತ್ಸೆಗಾಗಿ ಕೇರಳದ ಆಯುರ್ವೇದಿಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ನವದೆಹಲಿಗೆ ವಾಪಸ್ ಬಂದ ಮೇಲೆ ವಿಚಾರಣೆ ನಡೆಸಲಾಗುವುದು ಎಂದು ನವದೆಹಲಿ ಪೊಲೀಸರು ತಿಳಿಸಿದ್ದಾರೆ. [ಸುನಂದಾ ಪ್ರಕರಣಕ್ಕೆ ಹೊಸ ಟ್ವಿಸ್ಟ್]
ಸುನಂದಾ ಸಾವಿಗೀಡಾಗಿ ಸುಮಾರು ಒಂದು ವರ್ಷದ ನಂತರ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿದ್ದಾರೆ. ಅಂದಿನಿಂದ ಸುನಂದಾ ಸಾವು ಹಲವು ತಿರುವುಗಳನ್ನು ಪಡೆಯುತ್ತಿದೆ. [ಸುನಂದಾ ಸಾವು ಹುಟ್ಟುಹಾಕಿದ 5 ಪ್ರಶ್ನೆಗಳು]












Click it and Unblock the Notifications