ಉಕ್ರೇನ್ ಗಡಿಯಲ್ಲಿ ಹಲ್ಲೆ: ಭಾರತೀಯ ವಿದ್ಯಾರ್ಥಿಗಳಿಂದ ಆರೋಪ
ನವ ದೆಹಲಿ ಫೆಬ್ರವರಿ 28: ಉಕ್ರೇನ್‌ನಿಂದ ಪಲಾಯನ ಮಾಡುತ್ತಿರುವ ಹಲವಾರು ಭಾರತೀಯ ವಿದ್ಯಾರ್ಥಿಗಳು ಪೋಲೆಂಡ್ ಗಡಿಯಲ್ಲಿ ಉಕ್ರೇನಿಯನ್ ಗಾರ್ಡ್‌ಗಳಿಂದ ಕಿರುಕುಳಕ್ಕೆ ಒಳಗಾಗುತ್ತಿರುವುದನ್ನು ಹೇಳಿಕೊಂಡಿದ್ದಾರೆ. ಮಾತ್ರವಲ್ಲದೆ ಅವರಿಂದ ಥಳಿತಕ್ಕೆ ಒಳಗಾಗಿರುವ ಬಗ್ಗೆ ಸಂದೇಶಗಳನ್ನು ಕಳುಹಿಸಿದ್ದಾರೆ. ಜೊತೆಗೆ ಗಡಿ ದಾಟಲು ಬಿಡಲಿಲ್ಲ ಎಂದು ಆರೋಪಿಸಿದ್ದಾರೆ.
ರಾತ್ರಿಯ ಸಮಯದಲ್ಲಿ ಚಿತ್ರೀಕರಿಸಲಾದ ವಿಡಿಯೊವೊಂದರಲ್ಲಿ, ವಿದ್ಯಾರ್ಥಿಯೊಬ್ಬನು ತನ್ನ ಸೂಟ್‌ಕೇಸ್ ನೊಂದಿಗೆ ಹೋಗುತ್ತಿರುವಾಗ ಸಮವಸ್ತ್ರದಲ್ಲಿರುವ ಗಾರ್ಡ್ ಕಾಲಿನಿಂದ ಒದೆಯುತ್ತಾನೆ. ವಿದ್ಯಾರ್ಥಿ ಭಾರತೀಯನೇ ಎಂಬುದು ಸ್ಪಷ್ಟವಾಗಿಲ್ಲ ಆದರೆ ಪೋಲೆಂಡ್-ಉಕ್ರೇನ್ ಗಡಿಯಲ್ಲಿ ಕ್ಯಾಂಪ್ ಮಾಡುತ್ತಿರುವ ಹಲವಾರು ಭಾರತೀಯ ವಿದ್ಯಾರ್ಥಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
"ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ಅವರು ನಮ್ಮನ್ನು ಪೋಲೆಂಡ್‌ಗೆ ದಾಟಲು ಬಿಡುತ್ತಿಲ್ಲ. ಮಹಿಳಾ ವಿದ್ಯಾರ್ಥಿಗಳಿಗೂ ಕಿರುಕುಳ ನೀಡಲಾಗುತ್ತಿದೆ. ವಿದ್ಯಾರ್ಥಿನಿಯರ ಕೂದಲನ್ನು ಎಳೆದಿದ್ದಾರೆ ಮತ್ತು ರಾಡ್‌ಗಳಿಂದ ಹೊಡೆದಿದ್ದಾರೆ. ಕೆಲವು ಮಹಿಳಾ ವಿದ್ಯಾರ್ಥಿಗಳು ಗಾಯಗಳಿಗೆ ಒಳಗಾಗಿದ್ದಾರೆ" ಎಂದು ಭಾರತೀಯ ವಿದ್ಯಾರ್ಥಿನಿ ಮಾನ್ಸಿ ಚೌಧರಿ ಉಕ್ರೇನ್‌ನಿಂದ NDTV ಗೆ ತಿಳಿಸಿದ್ದಾರೆ.
Urgent Advisory for Indians desiring to be evacuated from Ukraine via Poland.@MEAIndia @opganga @IndiainUkraine pic.twitter.com/evyCfCFWJz
— India in Poland and Lithuania (@IndiainPoland) February 27, 2022
"ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿಗಳು ನಮಗೆ ಆಹಾರ ಮತ್ತು ಆಶ್ರಯದಲ್ಲಿ ಸಹಾಯ ಮಾಡುತ್ತಿದ್ದಾರೆ. ಗಡಿ ಕಾವಲುಗಾರರು ನಮ್ಮನ್ನು ದಾಟಲು ಬಿಡುತ್ತಿಲ್ಲ. ಯಾರಾದರೂ ದಾಟಲು ಪ್ರಯತ್ನಿಸಿದರೆ ಅವರು ರಾಡ್‌ಗಳಿಂದ ದಾಳಿ ಮಾಡುತ್ತಾರೆ. ನಿನ್ನೆ ಕೂಡ ಅವರು ಗುಂಡು ಹಾರಿಸಿದ್ದಾರೆ" ಎಂದು ಹೇಳಿಕೊಂಡಿದ್ದಾರೆ.

"ನಾನು ಕಾರಿನಲ್ಲಿದ್ದೇನೆ ಮತ್ತು ನನ್ನ ಹಾಸ್ಟೆಲ್‌ಗೆ ಹಿಂತಿರುಗುತ್ತಿದ್ದೇನೆ. ಮೂರು ದಿನಗಳಿಂದ ಕಾಯುತ್ತಿದ್ದೆವು, ಆದರೆ ನಮ್ಮನ್ನು ದಾಟಲು ಬಿಡಲಿಲ್ಲ. ನಮ್ಮನ್ನು ಪ್ರಾಣಿಗಳಂತೆ ಹಿಂಸಿಸಲಾಗಿದೆ. ಅವರು ತಮ್ಮ ಜನರನ್ನು ದಾಟಲು ಬಿಡುತ್ತಿದ್ದಾರೆ. ಆದರೆ ನಮ್ಮನ್ನು ಬಿಡುತ್ತಿಲ್ಲ" ಭಾರತೀಯ ರಾಯಭಾರಿ ಕಚೇರಿಯ ಪ್ರಯತ್ನಗಳನ್ನು ಶ್ಲಾಘಿಸಿದ ಚೌಧರಿ ಹೇಳಿದರು.
A dedicated Twitter handle has been set up to assist in the evacuation of Indians from Ukraine ➡️ OpGanga Helpline.
— Arindam Bagchi (@MEAIndia) February 27, 2022
Please direct all related queries to @opganga.
Ms ಚೌಧರಿ ಅವರು ತಮ್ಮ ಹಾಸ್ಟೆಲ್‌ಗೆ ಹಿಂತಿರುಗಿದ ನಂತರ ತಮ್ಮ ಪರ್ಯಾಯ ಮಾರ್ಗ ಪರಿಶೀಲಿಸಿದರು. ಸುಮಿ ನ್ಯಾಷನಲ್ ಯೂನಿವರ್ಸಿಟಿಯ ನರವಿಜ್ಞಾನದಲ್ಲಿ ಹಿರಿಯ ವಿದ್ಯಾರ್ಥಿಯಾಗಿರುವ ದೀಕ್ಷಾ ಪಾಂಡೆ ಅವರು ಎನ್‌ಡಿಟಿವಿಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇಲ್ಲಿನ ಸ್ಥಿತಿ ವಿನಾಶಕಾರಿ ಎಂದು ಹೇಳಿದ್ದಾರೆ. ಗಡಿ ಭಾಗದ ಜನರು ತೊಂದರೆಗೀಡಾಗಿದ್ದಾರೆ. ಅವರಿಗೆ ಕಿರುಕುಳ ನೀಡುತ್ತಿದ್ದಾರೆ, ಹುಡುಗಿಯರನ್ನು ಕೂದಲಿನಿಂದ ಎಳೆದು ಹಿಂಸಿಸಲಾಗುತ್ತಿದೆ, ಆಕ್ರಮಣಕ್ಕೆ ಕಾರಣವೇನು ಎಂದು ನನಗೆ ತಿಳಿದಿಲ್ಲ, "ಎಂದು ಅವರು ಹೇಳಿದರು.

ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಬಗ್ಗೆಯೂ ಪಾಂಡೆ ಕಠಿಣ ಮಾತುಗಳನ್ನಾಡಿದ್ದರು. "ಕೀವ್‌ನಿಂದ ಆಯಾ ಪಶ್ಚಿಮ ನಗರಗಳಿಗೆ ಕೆಲವು ರೈಲು ಹೊರಡುವ ವೇಳಾಪಟ್ಟಿಗಳಿವೆ. ಆದರೆ ಪ್ರಯಾಣಿಸಲು ಸೂಕ್ತವಾದ ಪರಿಸ್ಥಿತಿ ಇದೆ ಎಂದು ಸಲಹೆಗಾರರು ಹೇಳುತ್ತಾರೆ. ಆದರಿದು ತುಂಬಾ ಅಪಾಯಕಾರಿ. ನಮಗಾಗಿ ದಿನಸಿ ವಸ್ತುಗಳನ್ನು ಪಡೆಯಲು ನಮಗೆ ಸಾಧ್ಯವಾಗುತ್ತಿಲ್ಲ. ನಾವು ನಗರದಿಂದ ನಗರಕ್ಕೆ ಹೇಗೆ ಪ್ರಯಾಣಿಸುವುದು ಗೊತ್ತಾಗುತ್ತಿಲ್ಲ. ಇದು ಒಂದು ಸಂದಿಗ್ಧ ಪರಿಸ್ಥಿತಿ. ನಮ್ಮ ಜೀವನಕ್ಕೆ ಪ್ರಾಮುಖ್ಯತೆ ಇಲ್ಲವೇ? ಕೆಲವೊಮ್ಮೆ ಅವರು ನೀವು ಎಲ್ಲಿದ್ದರೂ ಅಲ್ಲೇ ಇರಿ ಎಂದು ಹೇಳುತ್ತಾರೆ. ನಾವು ಏನು ಮಾಡಬೇಕು. ನಾವು ಇಲ್ಲಿ ಯಾರನ್ನು ನಂಬಬೇಕು. ನಮಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಲು ಯಾರೂ ಇಲ್ಲ" Ms ಪಾಂಡೆ ಹೇಳಿದರು.
ಈ ಮದ್ಯೆ ಉಕ್ರೇನ್‌ನಿಂದ ಪೋಲೆಂಡ್ ಮೂಲಕ ಸ್ಥಳಾಂತರಿಸಲು ಬಯಸುವ ಭಾರತೀಯರಿಗೆ ಭಾರತವು ತುರ್ತು ಸಲಹೆ ನೀಡಿದೆ. "ನಾವು ಪೋಲೆಂಡ್‌ಗೆ ಸಾಗಣೆ ಪ್ರವೇಶಕ್ಕಾಗಿ ಗಡಿ ಚೆಕ್‌ಪೋಸ್ಟ್‌ಗಳಿಗೆ ಭಾರತೀಯರನ್ನು ಕರೆದೊಯ್ಯಲು ಗಡಿಯ ಉಕ್ರೇನ್ ಭಾಗದಲ್ಲಿ ಶೆಹಿನಿಯಲ್ಲಿ 10 ಬಸ್‌ಗಳನ್ನು ವ್ಯವಸ್ಥೆಗೊಳಿಸಿದ್ದೇವೆ" ಎಂದು ಅದು ಹೇಳಿದೆ.
ಗಂಗಾ ಕಾರ್ಯಾಚರಣೆಯ ಅಡಿಯಲ್ಲಿ ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಲು ಸಹಾಯ ಮಾಡಲು ಮೀಸಲಾದ ಟ್ವಿಟ್ಟರ್ ಹ್ಯಾಂಡಲ್ ಅನ್ನು ಸ್ಥಾಪಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ನಿನ್ನೆ ಸಂಜೆ ತಿಳಿಸಿದ್ದಾರೆ.
Twitter ಖಾತೆಯನ್ನು OpGanga ಸಹಾಯವಾಣಿ ಎಂದು ಕರೆಯಲಾಗುತ್ತದೆ. ಹಂಗೇರಿ, ಪೋಲೆಂಡ್, ರೊಮೇನಿಯಾ, ಸ್ಲೋವಾಕ್ ರಿಪಬ್ಲಿಕ್ ಉಕ್ರೇನ್‌ನೊಂದಿಗೆ ಗಡಿಯನ್ನು ಹಂಚಿಕೊಳ್ಳುವ ಎಲ್ಲಾ ರಾಷ್ಟ್ರಗಳಲ್ಲಿ ಈ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ರಷ್ಯಾ ಗುರುವಾರ ಬೆಳಗ್ಗೆ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಇಂದಿಗೂ ದಾಳಿಯನ್ನು ಮುಂದುವರೆಸಿದೆ.
ಇನ್ನೂ ಸುಮಾರು 16,000 ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಅನೇಕರು ಸಹಾಯಕ್ಕಾಗಿ ಹತಾಶ ಮನವಿಗಳನ್ನು ಮಾಡಿದ್ದಾರೆ. ಭೂಗತ ಬಂಕರ್‌ಗಳು ಮತ್ತು ಬಾಂಬ್ ಶೆಲ್ಟರ್‌ಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಲ್ಲಿ ಅವರು ರಷ್ಯಾದ ಬಾಂಬ್‌ಗಳು ಮತ್ತು ಕ್ಷಿಪಣಿಗಳಿಂದಾಗಿ ಆತಂಕಕ್ಕೆ ಒಳಗಾಗಿದ್ದಾರೆ.












Click it and Unblock the Notifications