ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು; ದೆಹಲಿಯ ರೈಲ್ವೆ ಭವನಕ್ಕೆ ಬೀಗ
ನವದೆಹಲಿ, ಮೇ 25 : ನವದೆಹಲಿಯಲ್ಲಿರುವ ರೈಲ್ವೆ ಭವನವನ್ನು ಮೇ 26 ಮತ್ತು 27ರಂದು ಮುಚ್ಚಲಾಗುತ್ತದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ. ರೈಲ್ವೆ ಬೋರ್ಡ್‌ನ ಕೆಲವು ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಕಚೇರಿಯನ್ನು ಸ್ಯಾನಿಟೈಸ್ ಮಾಡಬೇಕಿದೆ.
Recommended Video
ಸೋಮವಾರ ರೈಲ್ವೆ ಸಚಿವಾಲಯ ಈ ಕುರಿತು ಮಾಹಿತಿ ನೀಡಿದೆ. ಮೇ 29ರ ರೈಲ್ವೆ ಭವನದ 4ನೇ ಮಹಡಿಯಲ್ಲಿರುವ ಕಚೇರಿ ಮುಚ್ಚಿರುತ್ತದೆ ಎಂದು ಹೇಳಿದೆ. ಮೇ 26 ಮತ್ತು 27ರಂದು ಎಲ್ಲಾ ಸಂಪೂರ್ಣ ಕಚೇರಿ ಮುಚ್ಚಲಾಗುತ್ತದೆ.
ಭಾನುವಾರ ಕಚೇರಿಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದ ಹಿರಿಯ ಅಧಿಕಾರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ. ಅಧಿಕಾರಿ ಜೊತೆ ಕೆಲಸ ಮಾಡಿದ್ದ ಇನ್ನೂ 14 ಸಿಬ್ಭಂದಿಗಳಿಗೆ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗಿದೆ.

ಕಳೆದ 2 ವಾರದಲ್ಲಿ ರೈಲ್ವೆ ಭವನದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಐವರು ಸಿಬ್ಬಂದಿಗೆ ಸೋಂಕು ತಗುಲಿದೆ. ಆದ್ದರಿಂದ ಕಚೇರಿಯನ್ನು ಎರಡು ದಿನಗಳ ಕಾಲ ಮುಚ್ಚಿ ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಚೇರಿಯಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಗಳಿಗೆ ಐಸೋಲೇಷನ್‌ನಲ್ಲಿರಲು ಸೂಚನೆ ನೀಡಲಾಗಿದೆ. ಜೂನ್ 4ರ ತನಕ ಕಚೇರಿಗೆ ಆಗಮಿಸುವುದು ಬೇಡ ಎಂದು ತಿಳಿಸಲಾಗಿದೆ.
ಮೇ 13, ಮೇ 14, ಮೇ 15 ಮತ್ತು ಮೇ 20 ರಂದು ಕೊನೆಯದಾಗಿ ಕಚೇರಿಗೆ ಬಂದಿದ್ದ ನಾಲ್ವರು ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ.
ಕಚೇರಿಯ 4ನೇ ಮಹಡಿಯಲ್ಲಿ ಕೆಲಸ ನಿರ್ವಹಣೆ ಮಾಡುವ ರೈಲ್ವೆ ರಕ್ಷಣಾ ದಳದ ಜ್ಯೂನಿಯರ್ ಸಿಬ್ಬಂದಿಗೆ ಮೊದಲು ಸೋಂಕು ಕಾಣಿಸಿಕೊಂಡಿತ್ತು.












Click it and Unblock the Notifications