ನರೇಂದ್ರ ಮೋದಿ ಪತ್ನಿಗೆ ಎಸ್ ಪಿಜಿ ರಕ್ಷಣೆ

ನವದೆಹಲಿ, ಮೇ 12: ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವಡೋದರಾದಲ್ಲಿ ನಾಮಪತ್ರ ಸಲ್ಲಿಸುವಾಗ 'ತಾನು ಮದುವೆಯಾಗಿದ್ದು, ಪತ್ನಿಯ ಹೆಸರು ಜಶೋದಾಬೆನ್' ಎಂದು ಘೋಷಿಸಿದ್ದೇ ಮುಂದೆ ಕೇಂದ್ರ ಸರಕಾರಕ್ಕೆ ಪೀಕಲಾಟಕ್ಕೆ ಇಟ್ಟುಕೊಳ್ಳುವ ಸಾಧ್ಯತೆಯಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಗುಜರಾತಿನ ಹಾಲಿ ಮುಖ್ಯಮಂತ್ರಿ ನರೇಂದ್ರ ದಾಮೋದರದಾಸ್ ಮೋದಿ ಅವರು ಮೇ 16ರ ನಂತರ ಪ್ರಧಾನಿಯಾದರೆ ಕೇಂದ್ರ ಸರಕಾರವು ಪ್ರಸ್ತುತ ಗುಜರಾತಿನ ಗ್ರಾಮವೊಂದರಲ್ಲಿ ಜೀವನ ನಡೆಸುತ್ತಿರುವ ಜಶೋದಾಬೆನ್ ಅವರಿಗೆ ಶಿಷ್ಟಾಚಾರದ ಪ್ರಕಾರ ಎಸ್ ಪಿಜಿ ಭದ್ರತೆ ಒದಗಿಸುವುದು ಅನಿವಾರ್ಯವಾಗುತ್ತದೆ.

ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದರೆ ಸಾಂಸಾರಿಕ ಜೀವನದಿಂದ ದೂರವಾಗಿದ್ದರೂ ಪತ್ನಿ ಜಶೋದಾಬೆನ್ ಅವರಿಗೆ ಅತಿ ಗಣ್ಯ ವ್ಯಕ್ತಿಗಳಿಗೆ ಒದಗಿಸುವ ವಿಶೇಷ ರಕ್ಷಣಾ ಪಡೆ (SPG) ಭದ್ರತೆ ಸಿಗಲಿದೆ. ನರೇಂದ್ರ ಮೋದಿ ತಮ್ಮ 16ನೇ ವರ್ಷದಲ್ಲೇ ಜಶೋದಾಬೆನ್ ಅವರನ್ನು ವಿವಾಹವಾಗಿದ್ದರು ಎಂಬುದು ಗಮನಾರ್ಹ.

spg-protection-to-modi-wife-jashodaben-if-he-becomes-pm

ವೈಯಕ್ತಿಕ ಕಾರಣಗಳಿಂದ ಸಾಂಸಾರಿಕ ಜೀವನದಿಂದ ಪರಸ್ಪರ ಇಬ್ಬರೂ ದೂರವಾಗಿದ್ದರು. ಇದೀಗ ನರೇಂದ್ರ ಮೋದಿ ಅವರು ಜಶೋದಾಬೆನ್ ಅವರನ್ನು ವಿವಾಹವಾಗಿರುವುದಾಗಿ ಒಪ್ಪಿಕೊಂಡಿರುವುದು ಜಗಜ್ಜಾಹೀರಾಗಿದೆ. ಗುಜರಾತಿನ ಮೆಹಸಾನ ಜಿಲ್ಲೆಯ ಬ್ರಹ್ಮನವಾಡ ಗ್ರಾಮದಲ್ಲಿ ಜಶೋದಾಬೆನ್ ಅವರು ಸಾಮಾನ್ಯರಂತೆ ತಮ್ಮ ಸೋದರರೊಂದಿಗೆ ಜೀವನ ಸಾಗಿಸುತ್ತಿದ್ದಾರೆ.

ನರೇಂದ್ರ ಮೋದಿ ಅವರು ಉಗ್ರರ ಹಿಟ್‌ ಲಿಸ್ಟ್‌ ನಲ್ಲಿರುವುದರಿಂದ ಸಮಾಜಘಾತುಕ ಶಕ್ತಿಗಳಿಂದ ಜಶೋದಾಬೆನ್ ಅವರಿಗೆ ಪ್ರಾಣ ಬೆದರಿಕೆಯಿರುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ಗೃಹ ಇಲಾಖೆ ಈಗಾಗಲೇ ಮೋದಿ ಅವರ ಪತ್ನಿಗೆ ಎಸ್‌ ಪಿಜಿ ಒದಗಿಸಲು ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಗೃಹ ಇಲಾಖೆ ಮಾರ್ಗಸೂಚಿ ಪ್ರಕಾರ ಎಸ್‌ ಪಿಜಿ ಭದ್ರತೆಯನ್ನು ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಮಾತ್ರ ಇದನ್ನು ಒದಗಿಸಲಾಗುತ್ತದೆ. SPG, ದೇಶದಲ್ಲೇ ಅತ್ಯುನ್ನತ ಭದ್ರತಾ ವ್ಯವಸ್ಥೆಯನ್ನು ಹೊಂದಿದೆ.

ನಿವೃತ್ತ ಶಿಕ್ಷಕಿಯಾಗಿರುವ ಜಶೋದಾಬೆನ್ ಅವರು ತಮ್ಮ ಪತಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲಿ ಎಂದು ಚಾರ್ ಧಾಮ್ ವ್ರತ ನಡೆಸುತ್ತಿದ್ದಾರೆ. ಬೆಳಗ್ಗೆ ಹಾಲು, ಸಂಜೆ ಒಂದಿಷ್ಟು ಆಹಾರ ಹೊರತು ಪಡಿಸಿದರೆ ಉಳಿದ ಸಮಯದಲ್ಲಿ ಏನನ್ನೂ ಸೇವಿಸದೆ ಮೌನ ವ್ರತ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+