ಪ್ರಧಾನಿ ನರೇಂದ್ರ ಮೋದಿ ಹೊಗಳಿದ ಸೋನಿಯಾ ಗಾಂಧಿ!

ನವದೆಹಲಿ, ಮಾರ್ಚ್ 26: ಅಪರರೂಪ ಎಂಬಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. ಕೊರೊನಾ ವೈರಸ್ ಸೋಂಕು ದೇಶಾದ್ಯಂತ ಹರಡುವುದನ್ನು ತಡೆಯಲು ಪ್ರಧಾನಿ ಮೋದಿ ಹಾಗೂ ಅವರ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

Recommended Video

      Congress President Sonia Gandhi write a Letter To PM Modi | Oneindia Kannada

      ಈ ಕುರಿತು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ೨೧ ದಿನ ದೇಶವನ್ನು ಲಾಕ್‌ಡೌನ್ ಮಾಡಲು ನೀವು ಕೈಗೊಂಡಿರುವ ಕ್ರಮ ಅತ್ಯಂತ ಸೂಕ್ತವಾಗಿದೆ ಎಂದು ಪ್ರಶಂಸಿದ್ದಾರೆ.

      ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಕೆಲವೊಂದು ಸಲಹೆ ನೀಡಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ಮುಂದೆ ಓದಿ...

      ನ್ಯಾಯ ಪರಿಕಲ್ಪನೆಯಲ್ಲಿ ಹಣ ನೀಡಿ

      ನ್ಯಾಯ ಪರಿಕಲ್ಪನೆಯಲ್ಲಿ ಹಣ ನೀಡಿ

      ಕೊರೊನಾ ದೇಶದಲ್ಲಿ ಅಸಂಘಟಿತ ಕಾರ್ಮಿಕ ವಲಯವನ್ನು ತಲ್ಲಣಗೊಳಿಸಿದೆ. ಅವರಿಗೆ ಕಾಂಗ್ರೆಸ್‌ನ ನ್ಯಾಯ ಪರಿಕಲ್ಪನೆ ಆದಾರದಲ್ಲಿ ಪ್ರತಿ ತಿಂಗಳು 6000 ರುಪಾಯಿಯನ್ನು ಮುಂದಿನ ಮೂರು ತಿಂಗಳಾದರೂ ನೀಡಬೇಕು ಎಂದು ಸೋನಿಯಾ ಗಾಂಧಿ ಸಲಹೆ ನೀಡಿದ್ದಾರೆ. ಇದರಲ್ಲಿ ಹಿರಿಯ ನಾಗರಿಕರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಇನ್ನೂ ಹೆಚ್ಚಿನ ಹಣ ನೀಡಬೇಕು ಎಂದು ಮನವಿ ಮಾಡಿದ್ದಾರೆ.

      6 ತಿಂಗಳು ಮುಂದಕ್ಕೆ ಹಾಕಬೇಕು

      6 ತಿಂಗಳು ಮುಂದಕ್ಕೆ ಹಾಕಬೇಕು

      ಜನ ಬ್ಯಾಂಕುಗಳಿಗೆ ಮರುಪಾವತಿಸಬೇಕಿರುವ ಇಎಂಐಗಳಿಗೂ ವಿಸ್ತರಣೆ ನೀಡಬೇಕು. 6 ತಿಂಗಳು ಮುಂದಕ್ಕೆ ಹಾಕಬೇಕು. ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಅವರು ಸೋನಿಯಾ ಗಾಂಧಿ ಮನವಿ ಮಾಡಿಕೊಂಡಿದ್ದಾರೆ. ಇಂತಹ ಸಂದಿಗ್ದ ಸಮಯದಲ್ಲಿ ಆರ್ಥಿಕ ಹಾಗು ವೈದ್ಯಕೀಯ ಕ್ರಮಗಳನ್ನು ಹೆಚ್ಚು ಕೈಗೊಳ್ಳಬೇಕು ಎಂದಿದ್ದಾರೆ.

      ನೇರವಾಗಿ ಹಣ ಜಮಾ ಆಗಲಿ

      ನೇರವಾಗಿ ಹಣ ಜಮಾ ಆಗಲಿ

      ನೋಂದಾಯಿತ ನರೇಗಾ ಕೂಲಿ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ ಹಾಗೂ ದಿನಗೂಲಿ ನೌಕರರಿಗೆ ನೇರವಾಗಿ ಹಣ ಜಮಾ ಆಗುವ ರೀತಿ ಕ್ರಮ ಕೈಗೊಳ್ಳಬೇಕು. ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಅವರು ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

      ನಿಲ್ಲದ ಕೊರೊನಾ ಅಟ್ಟಹಾಸ

      ನಿಲ್ಲದ ಕೊರೊನಾ ಅಟ್ಟಹಾಸ

      ಭಾರದತಲ್ಲಿ ತೀವ್ರ ತಲ್ಲಣ ಸೃಷ್ಟಿಸಿರುವ ಕೊರೊನಾ ವೈರಸ್ ತನ್ನ ಅಟ್ಟಹಾಸ ಮುಂದುವರೆಸಿದೆ. ಇದುವರೆಗೆ ದೇಶದಲ್ಲಿ 600 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. 12 ಜನ ಮೃತಪಟ್ಟಿದ್ದಾರೆ. 21 ದಿನ ಲಾಕ್‌ಡೌನ್ ಘೋಷಣೆ ಆಗಿರುವುದರಿಂದ ಇಡೀ ದೇಶವೇ ಬಿಕೋ ಎನ್ನುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+