ನಟರಾಜ್ ವಾದ: ಡಿಕೆಶಿ ವಿಚಾರಣೆ ಕುರಿತ ಕೆಲವು ಇಂಟರೆಸ್ಟಿಂಗ್ ಸಂಗತಿಗಳು
ನವದೆಹಲಿ, ಸೆಪ್ಟೆಂಬರ್ 21: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಕೆಲವು ಇಂಟರೆಸ್ಟಿಂಗ್ ಸಂಗತಿಗಳನ್ನು ಇ.ಡಿ. ಪರ ವಕೀಲ ನಟರಾಜ್ ನ್ಯಾಯಾಲಯದ ಮುಂದಿಟ್ಟಿದ್ದಾರೆ.
ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರನ್ನು ಸೆ.3ರಂದು ಇ.ಡಿ. ಅಧಿಕಾರಿಗಳು ಬಂಧಿಸಿದರೂ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ವಿಚಾರಣೆ ದಿನಗಳನ್ನು ಆಸ್ಪತ್ರೆಯಲ್ಲೇ ಕಳೆದಿದ್ದರು.
ಈಗ ಎರಡು ದಿನಗಳ ಹಿಂದೆ ಅವರು ಗುಣಮುಖರಾಗಿದ್ದಾರೆ ಎನ್ನುವ ಆರ್‌ಎಂಎಲ್ ಆಸ್ಪತ್ರೆ ವರದಿ ಮೇರೆಗೆ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. ಜಾರಿ ನಿರ್ದೇಶನಾಲಯ ಪರ ವಕೀಲ ನಟರಾಜ್ ಮಾಡಿರುವ ವಾದದಲ್ಲಿದ್ದ ಕೆಲವು ಆಶ್ವರ್ಯಕರ ಸಂಗತಿಗಳು ಹೀಗಿತ್ತು.

ಅಕ್ರಮವಾಗಿ ಗಳಿಸಿದ ಹಣ ಅನುಭವಿಸಲು ಸಾಧ್ಯವಿಲ್ಲ
ಗಳಿಸಿದ ಹಣ ಅಕ್ರಮವಾಗಿದ್ದರೆ ಅದನ್ನು ಖಂಡಿತವಾಗಿಯೂ ಅನುಭವಿಸಲು ಸಾಧ್ಯವಿಲ್ಲ. ಕಪ್ಪು ಹಣ ಯಾವಾಗಲೂ ಕಪ್ಪು ಹಣವೇ, ಆ ಹಣ ಅಥವಾ ಆಸ್ತಿಯನ್ನು ಸಕ್ರಮವಾಗಿಸಲು ನಾವು ಬಿಡುವುದಿಲ್ಲ ಎಂದು ವಾದಿಸಿದ್ದಾರೆ.

ಡಿಕೆಶಿ ಪ್ರಶ್ನೆಗೆ ಉತ್ತರಿಸಿದ್ದು ಕೇವಲ 4 ಗಂಟೆ ಮಾತ್ರ
ಇ.ಡಿ. ಅಧಿಕಾರಿಗಳು 8-9 ತಾಸುಗಳ ಕಾಲ ತನ್ನನ್ನು ಕೂರಿಸಿಕೊಂಡು ಪ್ರಶ್ನೆ ಮಾಡುತ್ತಿದ್ದರು ಎಂದು ಡಿಕೆಶಿ ಆರೋಪಿಸಿದ್ದಾರೆ. ಆದರೆ ನಿಜವಾಗಿಯೂ ಅವರು ಉತ್ತರ ಕೊಟ್ಟಿದ್ದು ಕೇವಲ ನಾಲ್ಕು ಗಂಟೆ ಮಾತ್ರ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಉತ್ತರ ನೀಡಿಲ್ಲವೆಂದೇ ಚಿದಂಬರಂಗೆ ಜಾಮೀನು ಅರ್ಜಿ ನಿರಾಕರಣೆ
ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಕೂಡ ಇ.ಡಿ ವಿಚಾರಣೆ ವೇಳೆ ಸರಿಯಾದ ಉತ್ತರ ನೀಡದ ಕಾರಣ ಅವರಿಗೆ ಜಾಮೀನು ಸಿಕ್ಕಿಲ್ಲ. ಡಿಕೆ ಶಿವಕುಮಾರ್ ಕೂಡ ಇ.ಡಿ.ಯೊಂದು ಪ್ರಶ್ನೆ ಕೇಳಿದರೆ ಡಿಕೆಶಿಯೊಂದು ಉತ್ತರ ನೀಡುತ್ತಿದ್ದರು ಒಂದಕ್ಕೊಂದು ಸಂಬಂಧವೇ ಇರುತ್ತಿರಲಿಲ್ಲ ಎಂದರು.

ಪಿಎಂಎಲ್ ಕಾಯ್ದೆ ಸೆಕ್ಷನ್ 3 ಪ್ರಕಾರ ಆರೋಪಿ ಉತ್ತರ ನೀಡಲೇಬೇಕು
ಪಿಎಂಎಲ್ ಕಾಯ್ದೆ 53ರ ಪ್ರಕಾರ ಆರೋಪಿ ಉತ್ತರ ನೀಡುವುದರಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ. ಸೆಕ್ಷನ್ 3ರ ಪ್ರಕಾರ ಆರೋಪಿ ಸತ್ಯ ಹೇಳಲೇಬೇಕು.

ಐಟಿ ಕೇಸಿನಲ್ಲಿ ಕೆಲವರು ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ
ಐಟಿ ಕೇಸಿನಲ್ಲಿ ಕೆಲವರು ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ. ಅವರ ಮೇಲೆ ಪ್ರಭಾವ ಬೀರಲಾಗಿತ್ತು. ಇಡಿ ಸಾಕ್ಷ್ಯಗಳ ಮೇಲೂ ಕೂಡ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ನ್ಯಾಯಾಲಯಕ್ಕೆ ವಕೀಲ ನಟರಾಜ್ ಮನವಿ ಮಾಡಿದ್ದಾರೆ.

ಡಿಕೆಶಿ ಸಹೋದರ ಸುರೇಶ್ ಬಳಿ 27 ಆಸ್ತಿಗಳಿವೆ
ಡಿಕೆಶಿ ಸಹೋದರ ಡಿಕೆ ಸುರೇಶ್ ಹೆಸರಿನಲ್ಲಿ 27 ಆಸ್ತಿಗಳಿವೆ, 10 ಕೃಷಿ ಭೂಮಿ ಇದ್ದು ನಗದು ಮೂಲಕವೇ ಖರೀದಿಸಲಾಗಿದೆ. ಡಿಕೆ ಶಿವಕುಮಾರ್ ಅವರು ಹಣವನ್ನು ತಮ್ಮ ತಂದೆಯಿಂದ ಪಡೆದಿದ್ದಾಗಿ ಹೇಳಿದ್ದಾರೆ ಆದರೆ ತಂದೆಗೆ ಹಣ ಎಲ್ಲಿಂದ ಬಂತು ಎನ್ನುವುದೇ ಪ್ರಶ್ನೆಯಾಗಿದೆ. ಡಿಕೆಶಿ ಕೃಷಿ ಜಮೀನು ಜೊತೆಗೆ ಕೃಷಿಯೇತರ ಭೂಮಿ ಬಗ್ಗೆಯೂ ತನಿಖೆ ನಡೆಯಬೇಕಿದೆ.












Click it and Unblock the Notifications