ಸ್ನಾಪ್ ಡೀಲ್ ದೀಪ್ತಿ: ದೆಹಲಿಯಲ್ಲಿ ನಾಪತ್ತೆ ಹರ್ಯಾಣದಲ್ಲಿ ಪತ್ತೆ

Posted By:
Subscribe to Oneindia Kannada

ನವದೆಹಲಿ, ಫೆ. 12: ಪ್ರಮುಖ ಇ ಕಾಮರ್ಸ್ ಸಂಸ್ಥೆ ಸ್ನಾಪ್ ಡೀಲ್ ನ ಮಹಿಳಾ ಉದ್ಯೋಗಿ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.ಗಾಜಿಯಾಬಾದಿನ ಕಚೇರಿಯಿಂದ ಮನೆಗೆ ತೆರಳುವಾಗ ಕಣ್ಮರೆಯಾಗಿದ್ದ ದೀಪ್ತಿ ಅವರು ಶುಕ್ರವಾರ ಬೆಳಗ್ಗೆ ತಮ್ಮ ಮನೆ ಸೇರಿದ್ದಾರೆ. ಅವರನ್ನು ಹುಡುಕಲು ಸಾಮಾಜಿಕ ಜಾಲ ತಾಣದಲ್ಲಿ ನೆರವು ಕೋರಲಾಗಿತ್ತು.

ದೀಪ್ತಿ ಸರ್ನಾ ಅವರು ಹರ್ಯಾಣದ ಪಾಣಿಪಟ್ ನಲ್ಲಿ ಕಂಡು ಬಂದಿದ್ದಾರೆ. ಶುಕ್ರವಾರ ಮನೆ ಸೇರಿದ್ದಾರೆ. ಅವರನ್ನು ಹುಡುಕಲು ಸಾಮಾಜಿಕ ಜಾಲ ತಾಣದಲ್ಲಿ ನೆರವಾದ ಎಲ್ಲರಿಗೂ ಥ್ಯಾಂಕ್ಸ್ ಎಂದು ಸ್ನಾಪ್ ಡೀಲ್ ಸಂಸ್ಥೆ ಹೇಳಿದೆ.

ಬುಧವಾರ ಸಂಜೆ ಕಚೇರಿಯಿಂದ ಮನೆಗೆ ಮರಳುವ ಮುನ್ನ ಮೆಟ್ರೋ ಸ್ಟೇಷನ್ ಗೆ ದೀಪ್ತಿ ಹೋಗಿದ್ದರು. ಆದರೆ, 7.45ರ ಸುಮಾರಿಗೆ ವೈಶಾಲಿ ರೈಲ್ವೆ ನಿಲ್ದಾಣವನ್ನು ತೊರೆದ ದೀಪ್ತಿ, ಆಟೋರಿಕ್ಷಾ ನಿಲ್ದಾಣಕ್ಕೆ ಬಂದಿದ್ದಾರೆ. ಅಲ್ಲಿಂದ ಆಟೋ ಏರಿ ಇನ್ನೊಬ್ಬರ ಜೊತೆ ಎಲ್ಲಿಗೋ ಹೋಗಿದ್ದಾರೆ. ರಾತ್ರಿ ಸುಮಾರು 8.30ಕ್ಕೆ ಗೆಳತಿಗೆ ನಿಮ್ರತ್ ಕೌರ್ ಗೆ ಕರೆ ಮಾಡಿ ಕಿರುಚಾಡಿದ್ದಾರೆ. ಆದರೆ, ಯಾವುದೇ ವಿಷಯ ಹಂಚಿಕೊಂಡಿಲ್ಲ. ನಂತರ ಫೋನ್ ಸ್ವಿಚ್ ಆಫ್ ಆಗಿದೆ. ಗಾಬರಿಗೊಂಡ ನಿಮ್ರತ್ ಅವರು ದೀಪ್ತಿ ಮನೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಮಗಳು ನಾಪತ್ತೆಯಾಗಿದ್ದಾಳೆ ಎಂದು ದೀಪ್ತಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ #HelpFindDipti ಎಂದು ಅಭಿಯಾನ ಆರಂಭಿಸಲಾಯಿತು.

ಹರ್ಯಾಣ ಪೊಲೀಸರಿಂದ ಹುಡುಕಾಟ ನಡೆಸಲಾಯಿತು

ಹರ್ಯಾಣ ಪೊಲೀಸರಿಂದ ಹುಡುಕಾಟ ನಡೆಸಲಾಯಿತು

ಹರ್ಯಾಣ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ 200 ಜನ ಪೊಲೀಸರನ್ನು ಹುಡುಕಾಟಕ್ಕೆ ನಿಯೋಜಿಸಿದರು.

ದೀಪ್ತಿ ನಾಪತ್ತೆ ಬಗ್ಗೆ ಸಂಸ್ಥೆ ಹೊರಡಿಸಿದ ಪ್ರಕಟಣೆ

ದೀಪ್ತಿ ನಾಪತ್ತೆ ಬಗ್ಗೆ ಸಂಸ್ಥೆ ಹೊರಡಿಸಿದ ಪ್ರಕಟಣೆ

ದೀಪ್ತಿ ನಾಪತ್ತೆ ಬಗ್ಗೆ ಸ್ನಾಪ್ ಡೀಲ್ ಸಂಸ್ಥೆ ಹೊರಡಿಸಿದ ಪ್ರಕಟಣೆ ಹೊರಡಿಸಿತು

ದೀಪ್ತಿ ಸೇಫ್ ಎಂದು ಖಚಿತಪಡಿಸಿದ ಸ್ನಾಪ್ ಡೀಲ್

ದೀಪ್ತಿ ಸೇಫ್ ಎಂದು ಖಚಿತಪಡಿಸಿದ ಸ್ನಾಪ್ ಡೀಲ್ ಸಂಸ್ಥೆ

ಶುಕ್ರವಾರ ಮನೆಗೆ ಮರಳಿದ ದೀಪ್ತಿ

ಶುಕ್ರವಾರ ಬೆಳಗ್ಗೆ ತನ್ನ ತಂದೆಗೆ ಅಪರಿಚಿತ ದೂರವಾಣಿ ಸಂಖ್ಯೆಯಿಂದ ಕರೆ ಮಾಡಿದ್ದ ದೀಪ್ತಿ ಅವರು ವೈಶಾಲಿ ರೈಲ್ವೆ ನಿಲ್ದಾಣಕ್ಕೆ ಬರಲು ಹೇಳಿದ್ದಾರೆ. ಅಲ್ಲಿಗೆ ಬಂದ ದೀಪ್ತಿ ಪೋಷಕರು ತಮ್ಮ ಮಗಳನ್ನು ಮನೆಗೆ ಕರೆ ತಂದಿದ್ದಾರೆ.

ಸ್ನಾಪ್ ಡೀಲ್ ಕಾಳಜಿ ಬಗ್ಗೆ ಪ್ರಶಂಸೆ

ಭಾರತೀಯ ಕಂಪನಿ ಸ್ನಾಪ್ ಡೀಲ್ ಕಾಳಜಿ ಬಗ್ಗೆ ಪ್ರಶಂಸೆ

ಉತ್ತರ ಪ್ರದೇಶ ಸಿಎಂ ಅಖಿಲೇಶ್ ಟ್ವೀಟ್

ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಟ್ವೀಟ್ ಮಾಡಿ ಸುದ್ದಿ ಖಚಿತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Snapdeal employee Dipti Sarna reunited with familyA young woman employee of e-commerce giant Snapdeal who went missing near Delhi while on her way home from work is safe and has been traced in Panipat in Haryana, said police.
Please Wait while comments are loading...