ಭ್ರಷ್ಟಾಚಾರದ ಅಸಲಿಮುಖ ಎಂದರೆ ರಾಹುಲ್ ಗಾಂಧಿ: ಸ್ಮೃತಿ ಟಾಂಗ್
ನವದೆಹಲಿ, ಮಾರ್ಚ್ 13: ಭ್ರಷ್ಟಾಚಾರದ ಅಸಲಿ ಮುಖ ಎಂದರೆ ರಾಹುಲ್ ಗಾಂಧಿ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಟಾಂಗ್ ನೀಡಿದ್ದಾರೆ. ನವದೆಹಲಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಇರಾನಿ, ರಾಹುಲ್ ಗಾಂಧಿ ಅವರಿಗೂ ಆರ್ಮ್ಸ್ ಡೀಲರ್ ಸಂಜಯ್ ಭಂಡಾರಿ ಅವರಿಗೂ ಇರುವ ಸಂಬಂಧವೇನು ಎಂದು ಹೇಳಿ ಎಂದು ಪ್ರಶ್ನಿಸಿದರು.
ಸಂಜಯ್ ಭಂಡಾರಿ, ಸಿಸಿ ತಂಪಿ, ಎಚ್ ಎಲ್ ಪಾವ್ಹಾ ಅವರೊಂದಿಗೆ ಡೀಲ್ ಮಾಡಿಕೊಂಡು ರಾಷ್ಟ್ರದ ರಕ್ಷಣಾ ಇಲಾಖೆಯ ಗೌಪ್ಯತೆಯನ್ನು ರಾಹುಲ್ ಗಾಂಧಿ ಹೇಗೆ ಪಣಕ್ಕಿಟ್ಟರು ಎಂಬುದಕ್ಕೆ ಅವರೇ ಉತ್ತರಿಸಲಿ ಎಂದು ಸ್ಮೃತಿ ಇರಾನಿ ಆಗ್ರಹಿಸಿದರು.
ರಫೇಲ್ ಮತ್ತು ಭೂ ಹಗರಣದಲ್ಲಿ ಗಾಂಧಿ ಕುಟುಂಬದ ಭಾಗಿಯಾಗಿದೆ ಎಂದು ಸ್ಮೃತಿ ಇರಾನಿ ಆರೋಪಿಸಿದರು.

ರಾಹುಲ್ ಗಾಂಧಿ ತಮ್ಮ ಭಾಮೈದ ರಾಬರ್ಟ್ ವಾದ್ರಾ ಅವರಿಗಾಗಿ ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಉತ್ತರಿಸಲಿ. ರಾಹುಲ್ ಗಾಂಧಿ ಅವರ ಅಸಲಿ ಮುಖವೆಂದರೆ ಅದು ಭ್ರಷ್ಟಾಚಾರ ಎಂದು ಇರಾನಿ ಹೇಳಿದರು.












Click it and Unblock the Notifications