• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಸಂಪುಟದಲ್ಲಿ 6 ಮಹಿಳೆಯರಿಗೆ ಸಚಿವ ಸ್ಥಾನ, ಮೂವರಿಗೆ ಸಂಪುಟ ದರ್ಜೆ

|
   ದೇಶದ ಎಲ್ಲ ಮಹಿಳೆಯರ ಮನ ಗೆದ್ದ ನರೇಂದ್ರ ಮೋದಿ..! | Oneindia kannada

   ನವದೆಹಲಿ, ಮೇ 31: ಲೋಕಸಭೆ ಇತಿಹಾಸದಲ್ಲಿ ಅತಿ ಹೆಚ್ಚು ಮಹಿಳಾ ಸಂಸದರನ್ನು ಹೊಂದಿರುವ ಬೆನ್ನಲ್ಲೇ ಈ ಬಾರಿ ನರೇಂದ್ರ ಮೋದಿ ಸಂಪುಟಕ್ಕೆ ಆರು ಮಹಿಳಾ ಸಚಿವರನ್ನು ಸೇರಿಸಿಕೊಳ್ಳಲಾಗಿದೆ.

   ಕಳೆದ ಬಾರಿಗಿಂತ ಒಬ್ಬರಿಗೆ ಹೆಚ್ಚಿನ ಅವಕಾಶ ದೊರೆತಿದೆ. ಆದರೆ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಹಾಗೂ ಮೇನಕಾ ಗಾಂಧಿಯನ್ನು ಸಂಪುಟದಿಂದ ಕೈಬಿಡಲಾಗಿದೆ.

   ಇಂದು ಸಂಜೆ ಮೊದಲ ಕೇಂದ್ರ ಸಂಪುಟ ಸಭೆ, ಮೊದಲ ನಿರ್ಣಯವೇನು?

   ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಹಾಗೂ ಹರ್ಸಿಮೃತ್ ಕೌರ್, ಸಾಧ್ವಿ ನಿರಂಜನ್ ಜ್ಯೋತಿ, ರೇಣುಕಾ ಸಿಂಗ್ ಹಾಗೂ ದೇಬಶ್ರೀ ಚೌದರಿ ಹೊಸ ಸಂಪುಟದಲ್ಲಿ ಮಹಿಳಾ ಸಚಿವರಾಗಿದ್ದಾರೆ. ಇವರಲ್ಲಿ ನಿರ್ಮಲಾ, ಸ್ಮೃತಿ ಹಾಗೂ ಹರ್ಸಿಮೃತ್ ಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಉಳಿದ ಮೂವರಿಗೆ ರಾಜ್ಯ ಖಾತೆಗಳು ದೊರೆತಿವೆ.

   ನಿರ್ಮಲಾ ಸೀತಾರಾಮನ್‌ಗೆ ರಕ್ಷಣಾ ಖಾತೆ ಮುಂದುವರೆಯುವ ಸಾಧ್ಯತೆ ಇದ್ದು, ಸ್ಮೃತಿ ಇರಾನಿಗೆ ಮೇನಕಾ ಗಾಂಧಿ ನಿವೃಹಿಸುತ್ತಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಖಾತೆ ದೊರೆಯುವ ಸಾಧ್ಯತೆ ಇದೆ. ಇಂದು ಸಂಜೆ ನಡೆಯಲಿರುವ ಮೊದಲ ಸಂಪುಟ ಸಭೆ ಬಳಿಕ ಯಾರಿಗೆ ಯಾವ ಖಾತೆ ಎನ್ನುವ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

   English summary
   A number of women ministers were inducted into Prime Minister Narendra Modi’s new Cabinet at a glittering ceremony in Rashtrapati Bhawan on Thursday evening.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X