ಭಾರತಕ್ಕೆ ಟ್ರಂಪ್ ಬೆದರಿಕೆ ಹಾಕಿದ್ದಾರೆ, ಇದು ದೇಶಕ್ಕೇ ಅವಮಾನ: ಯೆಚೂರಿ
Recommended Video
ನವದೆಹಲಿ, ಜೂನ್ 28: ಭಾರತ ಅಮೆರಿಕದ ಮೇಲೆ ವಿಧಿಸಿರುವ ದುಬಾರಿ ಆಮದು ಸುಂಕವನ್ನು ಹಿಂತಪಡೆಯಬೇಕು ಎಂದು ಆಜ್ಞೆಯ ಧಾಟಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಟ್ವೀಟ್ ಅನ್ನು ಸಿಪಿಐ ಮುಖಂಡ ಸೀತಾರಾಮ್ ಯೆಚೂರಿ ಖಂಡಿಸಿದ್ದಾರೆ.
"ಭಾರತ ಅಮೆರಿಕದ ಮೇಲೆ ವಿಧಿಸಿರುವ ಆಮದು ಸುಂಕ ಅತಿಯಾಯಿತು. ಅದು ಖಂಡಿತ ಸ್ವೀಕಾರಾರ್ಹವಲ್ಲ. ಕೂಡಲೇ ಭಾರತ ಅದನ್ನು ಹಿಂಪಡೆಯಬೇಕು" ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಯೆಚೂರಿ, 'ಎಂದಿಗೂ ಭಾರತ ಈ ರೀತಿ ಸಾರ್ವಜನಿಕವಾಗಿ ಅವಮಾನಕ್ಕೊಳಗಾಗಿರಲಿಲ್ಲ, ಭಾರತದ ಮೇಲೆ ಬೆದರಿಕೆ ಒಡ್ಡುವ ಕೆಲಸವನ್ನೂ ಯಾರೂ ಮಾಡಿರಲಿಲ್ಲ. ಆದರೆ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ನೋದಿದರೆ ಅವರು ನೇರವಾಗಿ ಭಾರತಕ್ಕೆ ಬೆದರಿಕೆ ಹಾಕುತ್ತಿರುವುದು ಕಂಡುಬರುತ್ತಿದೆ. ಇದು ಒಬ್ಬ ವ್ಯಕ್ತಿಗಲ್ಲ, ಇಡೀ ದೇಶಕ್ಕೇ ಅವಮಾನ. ಇಂಥ ನಡೆಯನ್ನು ವಿರೋಧಿಸಿ, ಒಂದು ದೇಶದ ಗೌರವ ಮತ್ತು ಪ್ರಧಾನಿ ಹುದ್ದೆಯ ಘನತೆಯನ್ನು ಕಾಪಾಡಬೇಕಾದ್ದು ಪ್ರಧಾನಿಯ ಕರ್ತವ್ಯ. ಆದರೆ ಅವರು ಹಾಗೆ ಮಾಡಲಿಲ್ಲ. ಈ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡಲಿಲ್ಲ' ಎಂದು ಯೆಚೂರಿ ಟ್ವೀಟ್ ಮಾಡಿದ್ದಾರೆ.

ಹಾರ್ಲೆ ಡೆವಿಡ್ಸನ್ ಮೋಟಾರ್‌ಸೈಕಲ್‌ಗಳ ಮೇಲಿನ ಆಮದು ಸುಂಕವನ್ನು ಭಾರತ ಇತ್ತೀಚೆಗೆ ಶೇ.100ರಿಂದ ಶೇ.50ಕ್ಕೆ ಇಳಿಸಿತ್ತು. ಆದರೆ ಅದೂ ತೀರಾ ಅತಿಯಾಗಿದೆ ಎಂದು ಟ್ರಂಪ್ ದೂರಿದ್ದರು. ಈ ಕುರಿತು ಗುರುವಾರ ಟ್ವೀಟ್ ಮಾಡಿದ್ದ ಟ್ರಂಪ್, ಇದು ಸ್ವೀಕಾರಾರ್ಹವಲ್ಲ. ಈ ಬಗ್ಗೆ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುತ್ತೇನೆ' ಎಂದಿದ್ದರು.












Click it and Unblock the Notifications