• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಲಪಂಥೀಯರ ವಿರೋಧಕ್ಕೆ ಹೆದರಿ ಟಿಎಂ ಕೃಷ್ಣ ಗಾನಕಚೇರಿ ರದ್ದು

|

ನವದೆಹಲಿ, ನವೆಂಬರ್ 15: ಜನಪ್ರಿಯ ಶಾಸ್ತ್ರೀಯ ಸಂಗೀತ ಗಾಯಕ ಟಿಎಂ ಕೃಷ್ಣಪ್ಪ ಅವರಿಗೆ ಬಲಪಂಥೀಯರ ಬೆದರಿಕೆ, ಪ್ರತಿಭಟನೆಯ ಬಿಸಿ ತಟ್ಟಿದೆ. ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಆಯೋಜನೆಯ ಸಂಗೀತ ಕಾರ್ಯಕ್ರಮ ರದ್ದು ಪಡಿಸಲಾಗಿದೆ.

ಈ ಕುರಿತಂತೆ ಎಎಐ ಹಾಗೂ SPICMACAY ಸ್ಪಷ್ಟನೆ ನೀಡಿದ್ದು, ಡ್ಯಾನ್ಸ್ ಅಂಡ್ ಮ್ಯೂಸಿಕ್ ಇನ್ ದಿ ಪಾರ್ಕ್ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ನವೆಂಬರ್ 17 ಹಾಗೂ 18ರಂದು ಯಾವುದೇ ಪೋಗ್ರಾಂ ಇರುವುದಿಲ್ಲ. ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದಿದೆ.

ಟಿಎಂ ಕೃಷ್ಣ ಅವರಲ್ಲದೆ, ಸೋನಾಲ್ ಮಾನ್ ಸಿಂಗ್, ಪ್ರಿಯದರ್ಶಿನಿ ಗೋವಿಂದ್ ಹಾಗೂ ಶಹೀದ್ ಪರ್ವೇಜ್ ಖಾನ್ ಅವರು ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಆಹ್ವಾನಿಸಲಾಗಿತ್ತು.

ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಕೃಷ್ಣ ಅವರು ಯೇಸುಕ್ರಿಸ್ತನ ಸ್ತುತಿ ಹಾಗೂ ಅಲ್ಲಾಹ್ ಕುರಿತು ಕೀರ್ತನೆಗಳನ್ನು ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ ಸಂಯೋಜಿಸಿದ್ದರು.

ಆಗಸ್ಟ್ ತಿಂಗಳಿನಲ್ಲಿ ಕೃಷ್ಣ ವಿರುದ್ಧ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಕೃಷ್ಣ ಅವರ ಸಂಯೋಜನೆಯ ಅಲ್ಲಾಹ್ , ಕ್ರಿಸ್ತ ಸ್ತುತಿಗಳು ವಾಟ್ಸಾಪ್ ನಲ್ಲಿ ಹಂಚಿಕೆಯಾಗಿ ಜನಪ್ರಿಯಗೊಂಡಿತ್ತು. ಪ್ರತಿಭಟನೆ, ಬೆದರಿಕೆಗೆ ಜಗ್ಗದ ಕೃಷ್ಣ ಅವರು ಪ್ರತಿ ತಿಂಗಳು ಈ ರೀತಿ ಸ್ತುತಿಗಳನ್ನು ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿದ್ದರು.

ಚೆನ್ನೈನಲ್ಲಿ ಜನಿಸಿರುವ ಟಿಎಂ ಕೃಷ್ಣ ಅವರು ಮದ್ರಾಸ್ ವಿವಿನಿಂದ ಬಿ.ಎ(ಎಕಾನಾಮಿಕ್ಸ್) ಗಳಿಸಿದ್ದಾರೆ. ತಮ್ಮ 6ನೇ ವಯಸ್ಸಿನಲ್ಲೇ ಸಂಗೀತ ಕ್ಷೇತ್ರಕ್ಕೆ ಪರಿಚಿತರಾದ ಕೃಷ್ಣ ಅವರು ವಿದ್ವಾನ್ ಸೀತಾರಾಮ ಶರ್ಮ, ಶೆಮ್ಮಂಗುಡಿ ಶ್ರೀನಿವಾಸರ್, ಚಿಂಗ್ಲ್ ಪುಟ್ ರಂಗನಾಥನ್ ಅವರಿಂದ ಸಂಗೀತ ಪಾಠ ಕಲಿತರು. Carnatic Music - Passing on an Inheritance, 'A Southern Music - The Karnatik Story and 'Reshaping Art'. ಎಂಬ ಕೃತಿಗಳನ್ನು ರಚಿಸಿದ್ದಾರೆ.

English summary
Singer TM Krishna's Concert Called Off Allegedly After He Was Trolled. A weekend concert where award winning Carnatic singer TM Krishna was scheduled to perform has been called off by the Airport Authority of India, the sponsors of the show, allegedly after the singer was targeted by right wing trolls on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X