• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ನೆಗೆಟಿವ್: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಗಾಯಕಿ ಕನ್ನಿಕಾ ಕಪೂರ್

|

ನವದೆಹಲಿ, ಏಪ್ರಿಲ್ 06: ಬಾಲಿವುಡ್ ಚಿತ್ರರಂಗದ ಖ್ಯಾತ ಗಾಯಕಿ ಕನ್ನಿಕಾ ಕಪೂರ್ ರನ್ನು ಐದನೇ ಬಾರಿ ಪರೀಕ್ಷೆ ಮಾಡಿದ ನಂತರ ಕೊರೊನಾ ನೆಗೆಟಿವ್ ಎನ್ನುವುದು ದೃಢವಾಗಿದೆ. ಆ ನಂತರ ಇಂದು ಆಸ್ಪತ್ರೆಯಿಂದ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.

   ಪ್ರಧಾನಿಗಳ ಕರೆಗೆ ಕಿವಿಗೊಟ್ಟ ನಮ್ಮ ರಾಷ್ಟ್ರಪತಿ ರಾಮ್ ನಾಥ್ ಕೊವಿಂದ್ | President | Ramnath Kovind

   ಬ್ರಿಟನ್‌ನಿಂದ ಮರಳಿದ್ದ ಕನ್ನಿಕಾ ಕಪೂರ್‌ಗೆ ಕೊರೊನಾ ವೈರಸ್ ಹರಡಿರುವುದು ಪತ್ತೆಯಾಗಿತ್ತು. ಆದರೆ, ಇದನ್ನು ಮುಚ್ಚಿಟ್ಟಿದ್ದ ಕನ್ನಿಕಾ ರಾಜಕೀಯ ನಾಯಕರ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಆ ನಂತರ ಈ ಪ್ರಕರಣ ಇಡೀ ದೇಶದಲ್ಲಿ ದೊಡ್ಡ ಸುದ್ದಿ ಮಾಡಿತ್ತು.

   ಕನಿಕಾ ಕಪೂರ್ ವಿಚಾರದಲ್ಲಿ ತಪ್ಪು ಆಗಿದ್ದೆಲ್ಲಿ? ಕೊರೊನಾ ಸೋಂಕಿತೆ ಬಚ್ಚಿಟ್ಟ ಸತ್ಯ

   ನಂತರ ಕನ್ನಿಕಾರನ್ನು ಲಕ್ನೋದ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊರೊನಾ ಇದ್ದರೂ ಪಾರ್ಟಿಯಲ್ಲಿ ಭಾಗಿಯಾಗಿದ್ದರು, ಚಿಕಿತ್ಸೆ ನೀಡಿಲು ಸರಿಯಾಗಿ ಅವಕಾಶ ಮಾಡಿ ಕೊಡಲಿಲ್ಲ ಎಂದು ಕನ್ನಿಕಾ ವಿರುದ್ಧ ಆರೋಪಗಳು ಕೇಳಿ ಬಂದಿತ್ತು.

   ಮೂರ್ನಾಲ್ಕು ಬಾರಿಯ ಪರೀಕ್ಷೆಯ ನಂತರವೂ ಕನ್ನಿಕಾ ಕಪೂರ್‌ಗೆ ಕೊರೊನಾ ಪಾಸಿಟಿವ್ ಇತ್ತು. ಆದರೆ, ಐದನೇ ಬಾರಿ ಪರೀಕ್ಷೆ ಮಾಡಿದಾಗ ನೆಗೆಟಿವ್ ವರದಿ ಬಂದಿದೆ. ಆದರೂ ಸಹ ಮತ್ತೊಂದು ಪರೀಕ್ಷೆ ಮಾಡಿ ವೈದ್ಯರು ಖಚಿತ ಪಡಿಸಿಕೊಂಡರು. ಆಸ್ಪತ್ರೆಯಿಂದ ಇಂದು ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.

   ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೂ ಕೊರೊನಾ ಪರೀಕ್ಷೆ?

   ಭಾರತದಲ್ಲಿ ಸದ್ಯ ಕೊರೊನಾ ಪಾಸಿಟಿವ್ ಪ್ರಕರಣಗಳು 4 ಸಾವಿರದ ಗಡಿ ದಾಟಿದೆ. 109 ಜನರು ಪ್ರಾಣ ಕಳೆದುಕೊಂಡಿದ್ದಾರೆ.

   English summary
   Bollywood singer Kanika Kapoor discharge from hospital Sanjay Gandhi after tested coronavirus negative today (April 06).
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X