ದಕ್ಷಿಣ ಭಾರತಕ್ಕಿಂತಲೂ ಪಾಕಿಸ್ತಾನ ಹೆಚ್ಚು ಆಪ್ತ ಎಂದ ಸಿಧು

ನವದೆಹಲಿ, ಅಕ್ಟೋಬರ್ 14: ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ದಕ್ಷಿಣ ಭಾರತಕ್ಕಿಂತ ಪಾಕಿಸ್ತಾನವೇ ನನಗೆ ಹೆಚ್ಚು ಆಪ್ತ ಎಂದು ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದ್ದಾರೆ. ದಕ್ಷಿಣ ಭಾರತದ ಆಹಾರ ಹಾಗೂ ಸಂಸ್ಕೃತಿ, ಭಾಷೆಗೆ ಒಗ್ಗಿಕೊಳ್ಳುವುದು ಕಷ್ಟ ಎಂದಿದ್ದಾರೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮಾರ್ ಬಾಜ್ವಾ ಅವರನ್ನು ಆಲಂಗಿಸಿದ್ದರ ಬಗ್ಗೆ ನನಗೆ ಖೇದವಿಲ್ಲ ಎಂದು ಹೇಳಿದ ಸಿಧು, ದಕ್ಷಿಣ ಭಾರತದ ಬಗ್ಗೆ ಅನಿಸಿಕೆ, ಅಭಿಪ್ರಾಯ, ಕಷ್ಟಗಳನ್ನು ಹಂಚಿಕೊಂಡಿದ್ದಾರೆ.

Sidhu loves Pakistan more than South

ದಕ್ಷಿಣ ಭಾರತದ ರಾಜ್ಯಗಳಿಗೆ ಹೋದರೆ ನನಗೆ ಒಂದೆರಡು ಪದ ಬಿಟ್ಟರೆ ಬೇರೆ ಏನು ಅರ್ಥವಾಗಲ್ಲ. ಭಾಷೆ ಅರ್ಥ ಮಾಡಿಕೊಳ್ಳಲು, ಅಲ್ಲಿನ ಆಹಾರ ಪದ್ಧತಿಗೆ ಹೊಂದಿಕೊಳ್ಳಲು ಕಷ್ಟ ಎಂದಿದ್ದಾರೆ.

ನನಗೆ ಅಲ್ಲಿನ ತಿನಿಸುಗಳು ಇಷ್ಟವಾಗುತ್ತವೆ. ಇಡ್ಲಿ ತಿನ್ನುತ್ತೇನೆ. ಆದರೆ, ತುಂಬಾ ದಿನ ಅದನ್ನು ತಿನ್ನಲು ಸಾಧ್ಯವಿಲ್ಲ. ಅಲ್ಲಿನ ಸಂಸ್ಕೃತಿ ತುಂಬಾ ವಿಭಿನ್ನ.

ಆದರೆ, ಪಾಕಿಸ್ತಾನಕ್ಕೆ ಹೋದರೆ ಅಲ್ಲಿ ಪಂಜಾಬಿ ಮತ್ತು ಇಂಗ್ಲಿಷ್​ನಲ್ಲಿ ಮಾತನಾಡುತ್ತಾರೆ. ಉತ್ತರ ಭಾರತದಲ್ಲಿ ಸಿಗುವ ತಿನಿಸುಗಳು ಸುಲಭವಾಗಿ ಸಿಗುತ್ತವೆ. ಹಾಗಾಗಿ ದಕ್ಷಿಣ ಭಾರತಕ್ಕಿಂತ ಪಾಕಿಸ್ತಾನವೇ ನನಗೆ ಹೆಚ್ಚು ಆಪ್ತ ಎಂದು ಕಸೌಲಿ ಸಾಹಿತ್ಯ ಹಬ್ಬದಲ್ಲಿ ಸಿಧು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+