ಶಾಹಿನ್‌ಬಾಗ್‌ನಲ್ಲಿ ಗುಂಡು ಹಾರಿಸಲು ಇದ್ದ ಕಾರಣ ಬಾಯ್ಬಿಟ್ಟ ಆರೋಪಿ

ನವದೆಹಲಿ, ಫೆಬ್ರವರಿ 2: ಶಾಹಿನ್‌ಬಾಗ್‌ನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲು ಇದ್ದ ಕಾರಣವನ್ನು ವ್ಯಕ್ತಿ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟಿದ್ದಾನೆ.

ತನ್ನ ಸೋದರ ಸಂಬಂಧಿಯ ಮದುವೆ ನಡೆಯುತ್ತಿತ್ತು. ಮೆರವಣಿಗೆ ಹೋಗಲಾಗದಂತೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜನರನ್ನು ರಸ್ತೆಯಿಂದ ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದೆ ಎಂದು ಆತ ಹೇಳಿದ್ದಾನೆ.

ವ್ಯಕ್ತಿಯನ್ನು ಕಪಿಲ್ ಗುಜ್ಜಾರ ಎಂದು ಗುರುತಿಸಲಾಗಿದೆ. ದೆಹಲಿ-ನೊಯ್ಡಾ ಗಡಿಯ ದಲ್ಲುಪುರ ಪ್ರದೇಶವನಾಗಿದ್ದಾನೆ.ಆತ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ಸಂದರ್ಭದಲ್ಲೇ ಆತನನ್ನು ಬಂಧಿಸಲಾಗಿದೆ.ಆತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿಚಾರಣೆ ಪ್ರಗತಿಯಲ್ಲಿದೆ.

Shooter Was Miffed At Road Blockade Ahead Of His Cousins Wedding

ಲಜ್‌ಪತ್ ನಗರದಲ್ಲಿ ಕಸಿನ್ ಸಹೋದರಿಯ ಮದುವೆ ನಡೆಯುತ್ತಿತ್ತು. ಮೆರವಣಿಗೆ ಬರುತ್ತಿದ್ದ ಜಾಗದಲ್ಲಿ ವಿಪರೀತ ಟ್ರಾಫಿಕ್ ಉಂಟಾಗಿತ್ತು. ಅದನ್ನು ಕಡಿಮೆ ಮಾಡಲು ಈ ರೀತಿ ಮಾಡಿರುವುದಾಗಿ ಆತ ತಿಳಿಸಿದ್ದಾನೆ. ಘಟನೆಯಲ್ಲಿ ಯಾರೊಬ್ಬರಿಗೂ ಗಾಯವಾಗಿಲ್ಲ. ಶಾಹಿನ್‌ಬಾಗ್‌ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.

ಇನ್ನು, ಶನಿವಾರ ನಡೆದ ಗುಂಡಿನ ದಾಳಿಯಿಂದ ಶಾಹಿನ್ ಬಾಗ್ ಪ್ರತಿಭಟನಾ ಸ್ಥಳ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಹಿನ್ ಬಾಗ್ ನಲ್ಲಿ ದೆಹಲಿ ಪೊಲೀಸರು ಮತ್ತಷ್ಟು ಭದ್ರತೆಯನ್ನು ಹೆಚ್ಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+