• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಕೆ ಜೈಲಿನಿಂದ ಬಿಡಿಸಿದವನೇ ಆಕೆಯನ್ನು ಬರ್ಬರವಾಗಿ ಕೊಂದ!

|

ನವದೆಹಲಿ, ನವೆಂಬರ್ 17: ದೆಹಲಿಯಲ್ಲಿ ಗುರುವಾರ ನಡೆದ ಫ್ಯಾಶನ್ ಡಿಸೈನರ್ ಮಾಲಾ ಲಖನಿ ಹತ್ಯೆಗೆ ರೋಚಕ ತಿರುವು ಸಿಕ್ಕಿದೆ. ಮಾಲಾ ಲಖನಿ ಅವರೇ ಜೈಲಿನಿಂದ ಬಿಡಿಸಿದ್ದ ವ್ಯಕ್ತಿಯೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂಬ ಆಘಾತಕಾರಿ ಸತ್ಯವನ್ನು ಲಖನಿ ಅವರ ಸಹೋದರಿ ಹೊರಹಾಕಿದ್ದಾರೆ!

ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿದ್ದ ರಾಹುಲ್ ಅನ್ವರ್ ಎಂಬುವವನನ್ನು ಪೊಲಿಸರು ಬಂಧಿಸಿದ್ದರು. ಆತನನ್ನು ಮಾಲಾ ಲಖನಿ ಜಾಮೀನು ಕೊಟ್ಟು ಬಿಡಿಸಿದ್ದರು. ರಾಹುಲ್ ಮೇಲೆ ಸುಮ್ಮನೇ ಆರೋಪ ಮಾಡಲಾಗಿದೆ ಆತ ನನ್ನ ಮಗನಿದ್ದಂತೆ ಎಂದು ಮಾಲಾ ಹಲವು ಬಾರಿ ಹೇಳಿಕೊಂಡಿದ್ದರು. ಆದರೆ ಮಾಲಾ ಅವರೆದುರು ಸಭ್ಯನಂತೇ ವರ್ತಿಸುತ್ತಿದ್ದ ರಾಹುಲ್, ತಾಯಿಯೆಂಬಂತೆ ಇದ್ದ ಮಾಲಾ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ.

ಸ್ಫೋಟಕ ಮಾಹಿತಿ: ದೆಹಲಿಯ ಫ್ಯಾಶನ್ ಡಿಸೈನರ್ ನನ್ನು ಕೊಂದಿದ್ದು ಆಕೆಯ ಟೈಲರ್!

ಮಾಲಾ ಅವರ ಮನೆಯಲ್ಲಿದ್ದ ಹಣವನ್ನು ದೋಚುವ ಸಲುವಾಗಿಯೇ ಈ ಕೊಲೆ ನಡೆದಿದೆ ಎನ್ನಲಾಗಿದೆ.

ಅಕ್ಕನ ಫೋನ್ ಗಾಗಿ ಕಾಯುತ್ತಲೇ ಇದ್ದೇನೆ..!

ಅಕ್ಕನ ಫೋನ್ ಗಾಗಿ ಕಾಯುತ್ತಲೇ ಇದ್ದೇನೆ..!

"ಕೊಲೆಯಾಗುವ ದಿನ ನಾನು ಅಕ್ಕನಿಗೆ ಫೋನ್ ಮಾಡಿದ್ದೆ. ಆಕೆ ನನ್ನ ಮಗಳಿಂದಿಗೆ ಆತನಾಡಬೇಕು ಎಂದರು. ನಂತರ, ಬಿಗ್ ಬಾಸ್ ನೋಡುತ್ತಿದ್ದೇನೆ. ಮುಗಿದ ಮೇಲೆ ಫೋನ್ ಮಾಡುತ್ತೇನೆ ಎಂದರು. ನಾನು ಸರಿ ಎಂದು ಫೋನ್ ಇಟ್ಟೆ. ಆದರೆ ಅವರ ಫೋನ್ ಬರಲೇ ಇಲ್ಲ. ಬೆಳಗ್ಗಿನ ಜಾವದ ಹೊತ್ತಿಗೆ ಅವರು ಕೊಲೆಯಾಗಿದ್ದಾರೆ ಅನ್ನೋದು ಗೊತ್ತಾಯ್ತು" ಎಂದು ಬಿಕ್ಕುತ್ತಾರೆ ಮಾಲಾ ಅವರ ಸಹೋದರಿ ಆರತಿ ಶರ್ಮಾ.

ನಮ್ಮ ಮಕ್ಕಳಿಗಾಗಿಯಾದರೂ ನನ್ನ ಕೊಲ್ಲಬೇಡಿ ಎಂದು ಬೇಡಿಕೊಂಡರೂ ಕರುಣೆಯೇ ಬರಲಿಲ್ಲ

ಜೈಲಿಂದ ಬಿಡಿಸಿದ್ದರು

ಜೈಲಿಂದ ಬಿಡಿಸಿದ್ದರು

ಮಾಲಾ ಅವರೇ ಆರೋಪಿ ರಾಹುಲ್ ನನ್ನು ಜೈಲಿನಿಂದ ಬಿಡಿಸಿದ್ದರು. 53 ವರ್ಷದ ಮಾಲಾ, ರಾಹುಲ್ ನನ್ನು ಬಚ್ಚಾ ಎಂದೇ ಕರೆಯುತ್ತಿದ್ದರು. ಎರಡು ಕಡೆ ಹೊಲಿಗೆ ಮಳಿಗೆಯನ್ನು ತೆರೆದಿದ್ದ ಮಾಲಾ ಅವರ ಬಳಿಯೇ ರಾಹುಲ್ ಕೆಲಸ ಮಾಡುತ್ತಿದ್ದ. ಆದರೆ ಅವರನ್ನು ರಾಹುಲ್ ಕೊಲ್ಲುವ ಕ್ರೌರ್ಯಕ್ಕೆ ಇಳಿದಿದ್ದು ಮಾತ್ರ ದಿಗ್ಭ್ರಮೆ ಮೂಡಿಸಿದೆ.

ಅದೇ ತಮ್ಮ ಕೊನೆಯ ಪ್ರವಾಸ ಎಂಬ ಸೂಚನೆ ಆ ದಂಪತಿಗೆ ಸಿಕ್ಕೇ ಇರಲಿಲ್ಲ!

ಮುಖ ಗುರುತು ಸಿಕ್ಕಲಿಲ್ಲ

ಮುಖ ಗುರುತು ಸಿಕ್ಕಲಿಲ್ಲ

"ಮೀನಾ ಅವರಿಗೆ ಎಂದಿಗೂ ತಮ್ಮ ಸೌಂದರ್ಯದ ಬಗ್ಗೆ ಸಾಕಷ್ಟು ಪ್ರಜ್ಞೆ ಇತ್ತು. ಆದರೆ ಅವರು ಸತ್ತಾಗ ಅವರ ಮುಖವನ್ನು ಗುರುತಿಸುವುದಕ್ಕೂ ಆಗದಷ್ಟು ವಿಕಾರವಾಗಿತ್ತು. ಅವರಿಗೆ ಚಿತ್ರ ಹಿಂಸೆ ನೀಡಿ, ಅವರ ಮುಖದ ತುಂಬ ಗಾಯಗಳನ್ನು ಮಾಡಿ ಅವರನ್ನು ಕೊಲ್ಲಲಾಗಿದೆ" ಎನ್ನುತ್ತಾರೆ ಆರತಿ ಶರ್ಮಾ.

ಮನೆಗೆ ಬರುತ್ತಿದ್ದ ಕೊಲೆಗಾರ

ಮನೆಗೆ ಬರುತ್ತಿದ್ದ ಕೊಲೆಗಾರ

ಮಾಲಾ ಅವರು ಬಟ್ಟೆಯನ್ನು ಕತ್ತರಿಸುವ ಮತ್ತು ಟೈಲರಿಂಗ್ ಮಾಡುವ ಬಗ್ಗೆ ತರಬೇತಿ ನೀಡುವ ಕಾರ್ಯಾಗಾರವನ್ನು ಅವರ ಮನೆಯಲ್ಲಿಯೇ ಹಮ್ಮಿಕೊಂಡಿದ್ದರು. ಆಗ ರಾಹುಲ್ ಅವರ ಮನೆಗೆ ಹಲವು ಬಾರಿ ಬಂದಿದ್ದ. ಮನೆಯ ಬಗ್ಗೆ ಎಲ್ಲವನ್ನೂ ತಿಳಿದಿದ್ದ ಆತ ತಮ್ಮ ಸ್ನೇಹಿತರಾದ ರಹಮತ್ ಮತ್ತು ವಾಸಿಮ್ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ. ಮನೆಯಿಂದ ಬೆಲೆಬಾಳುವ ವಸ್ತುಗಳನ್ನು ಕದ್ದು, ಲಖನಿ ಅವರ ಕಾರಿನಲ್ಲೇ ಆರೋಪಿಗಳು ಪರಾರಿಯಾಗಿದ್ದರು.

ಘಟನೆಯ ವಿವರ

ಘಟನೆಯ ವಿವರ

ನ.15 ರಂದು ಗುರುವಾರ ಬೆಳಗ್ಗಿನ ಜಾವ ಸಾರು 2:45 ರ ಸುಮಾರಿಗೆ ದೆಹಲಿಯ ವಸಂತ್ ಕುಂಜ್ ಎನ್ ಕ್ಲೇವ್ ಎಂಬ ಅಪಾರ್ಟ್ ಮೆಂಟ್ ನಲ್ಲಿದ್ದ ಫ್ಯಾಶನ್ ಡಿಸೈನರ್ ಮಾಲಾ ಲಖನಿ ಅವರ ಕೊಲೆಯಾಗಿತ್ತು. ಅವರ ಕೊಲೆಯನ್ನು ತಡೆಯಲು ಬಂದ ಅವರ ಮನೆಕೆಲಸದಾಕೆಯನ್ನೂ ದುಷ್ಕರ್ಮಿಗಳು ಕೊಂದಿದ್ದರು. ಕೊಲೆ ಮಾಡಿದ ನಂತರ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಕದ್ದು, ಮಾಲಾ ಅವರ ಕಾರಿನಲ್ಲೇ, ಪೊಲೀಸ್ ಠಾಣೆಯ ಮಾರ್ಗವಾಗಿಯೇ ಪರಾರಿಯಾಗಿದ್ದರು. ಆದರೆ ಅವರನ್ನು ಅಂದೇ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

English summary
Delhi fashion designer Mala Lakhani's murder getting shocking twists. The murderer was man, she freed from jail!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X