• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ಶೀಲಾ ದೀಕ್ಷಿತ್ ಆಯ್ಕೆ

|

ನವದೆಹಲಿ, ಜನವರಿ 10: ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ(ಡಿಪಿಸಿಸಿ) ಅಧ್ಯಕ್ಷೆಯಾಗಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಆಯ್ಕೆಯಾಗಿದ್ದಾರೆ. ಅಜಯ್ ಮಕೇನ್ ಅವರಿಂದ ತೆರವಾದ ಸ್ಥಾನಕ್ಕೆ ಶೀಲಾ ದೀಕ್ಷಿತ್ ಅವರನ್ನು ನೇಮಿಸಲಾಗಿದೆ.

ಹಿರಿಯ ನಾಯಕಿ ಶೀಲಾ ದೀಕ್ಷಿತ್ ಅವರ ನಾಯಕತ್ವದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸಮರ್ಥ ವಿಪಕ್ಷವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಅಜಯ್ ಮಕೇನ್ ಅವರು ಹೇಳಿದ್ದಾರೆ. ಅನಾರೋಗ್ಯದ ಕಾರಣ ಅಜಯ್ ಅವರು ತಮ್ಮ ಹುದ್ದೆ ತೊರೆದಿದ್ದರು.

ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಮಕೇನ್ ರಾಜೀನಾಮೆದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಮಕೇನ್ ರಾಜೀನಾಮೆ

ಶೀಲಾ ದೀಕ್ಷಿತ್ ನೇಮಕದ ಬಗ್ಗೆ ಅಧಿಕೃತ ಹೇಳಿಕೆ ಇನ್ನೂ ಹೊರ ಬಂದಿಲ್ಲ. ಆದರೆ, ಕಾಂಗ್ರೆಸ್ ನಾಯಕ ಪಿಸಿ ಚಾಕೋ ಅವರು ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ಕೆಲವು ಕಾರ್ಯಕಾರಿ ಅಧ್ಯಕ್ಷರು ಅವರಿಗೆ ನೆರವಾಗಲಿದ್ದಾರೆ ಎಂದಿದ್ದಾರೆ.

ಮೂರು ಬಾರಿ ದೆಹಲಿಯ ಸಿಎಂ ಆಗಿರುವ 80 ವರ್ಷ ವಯಸ್ಸಿನ ದೀಕ್ಷಿತ್ ಅವರಲ್ಲದೆ, ಎಐಸಿಸಿ ಕಾರ್ಯದರ್ಶಿ ದೇವೇಂದ್ರ ಯಾದವ್, ಹರೂನ್ ಯಾದವ್ ಹಾಗೂ ರಾಜ್ ಕುಮಾರ್ ಚೌಹಾಣ್ ಅವರ ಹೆಸರುಗಳು ಕೂಡಾ ಅಧ್ಯಕ್ಷ ಸ್ಥಾನಕ್ಕಾಗಿ ಕೇಳಿ ಬಂದಿತ್ತು.

English summary
Former Delhi Chief Minister Sheila Dikshit has been appointed the Delhi Pradesh Congress Committee president after Ajay Maken resigned from the post citing ill-health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X