ಬಿಜೆಪಿ ನಾಯಕನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ತರೂರ್

ನವದೆಹಲಿ, ಡಿಸೆಂಬರ್ 10: ತಮ್ಮನ್ನು 'ಕೊಲೆ ಆರೋಪಿ' ಎಂದು ಲೇವಡಿ ಮಾಡಿದ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ಶಶಿ ತರೂರ್ ಮಾನಷ್ಟ ಮೊಕದ್ದಮೆ ಹೂಡಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿಯವರು ಶಿವಲಿಂಗದ ಮೇಲಿರುವ ಚೇಳಿನ ಹಾಗೆ. ಅದನ್ನು ಕೈಯಿಂದ ಓಡಿಸುವುದಕ್ಕೂ ಬರುವುದಿಲ್ಲ, ಚಪ್ಪಲಿಯಿಂದ ಹೊಡೆಯುವುದಕ್ಕೂ ಬರುವುದಿಲ್ಲ" ಎಂಬ ಹೇಳಿಕೆ ನೀಡಿದ್ದ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರನ್ನು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತರಾಟೆಗೆ ತೆಗೆದುಕೊಂಡಿದ್ದರು.

"ಒಬ್ಬ ಕೊಲೆ ಆರೋಪಿಯಾಗಿರುವ ಶಶಿ ತರೂರ್, ಭಗವಾನ್ ಶಿವನಿಗೆ ಹೇಗೆ ಗೌರವ ನೀಡಬೇಕು" ಎಂಬುದನ್ನು ತಿಳಿದಿಲ್ಲ ಎಂದಿದ್ದರು.

Shashi Taroor files criminal defamation against Ravi Shankar Prasad

ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಶಶಿ ತರೂರ್, 'ರವಿ ಶಂಕಾರ್ ಪ್ರಸಾದ್ ಅವರು ತಮ್ಮ ಈ ಹೇಳಿಕೆ(ಕೊಲೆ ಆರೋಪಿ) ಇರುವ ವಿಡಿಯೋ ಕ್ಲಿಪ್ಪಿಂಗ್ ಅನ್ನು ಡಿಲೀಟ್ ಮಾಡಬೇಕು ಮತ್ತು ನನ್ನನ್ನು ಕೊಲೆ ಆರೋಪಿ ಎಂದು ಕರೆದ ಟ್ವೀಟ್ ಅನ್ನು ಡಿಲೀಟ್ ಮಾಡಬೇಕು. ಹಾಗೆಯೇ ನನ್ನ ಬಳಿ ಕ್ಷಮೆ ಕೇಳಬೇಕು' ಎಂದಿದ್ದರು. 48 ಗಂಟೆಗಳೊಳಗೆ ಕ್ಷಮೆ ಕೇಳದಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದ ಶಶಿ ತರೂರ್, ಇದೀಗ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಮೋದಿ ಅವರನ್ನು ಚೇಳಿಗೆ ಹೋಲಿಸಿದ್ದ ಶಶಿ ತರೂರ್ ಅವರ ಮೇಲೂ ಈ ಮೊದಲೇ ಬಿಜೆಪಿ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+