• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಜಾಪ್ರಭುತ್ವಕ್ಕೆ ಕೆಟ್ಟ ದಿನ: ದೆಹಲಿ ಮಸೂದೆ ಬಗ್ಗೆ ಸಿಎಂ ಕೇಜ್ರಿವಾಲ್ ಕಿಡಿ

|

ನವದೆಹಲಿ, ಮಾರ್ಚ್ 25: ದೆಹಲಿ ಮಸೂದೆ 2021ಕ್ಕೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಜಾಪ್ರಭುತ್ವಕ್ಕೆ ಕೆಟ್ಟ ದಿನ ಎಂದು ಟ್ವೀಟ್ ಮಾಡಿದ್ದಾರೆ.

ಅಂತೆಯೇ ನಮ್ಮ ಅಧಿಕಾರ ಮರಳಿ ಪಡೆಯಲು ನಮ್ಮ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ

ದೆಹಲಿ ಸರ್ಕಾರ ಮಸೂದೆ ವಿವಾದ: ರಾಜ್ಯಸಭೆಯಲ್ಲಿ ಗದ್ದಲ

ರಾಜ್ಯಸಭೆಯಲ್ಲಿ ಜಿಎಲ್ ಸಿಟಿಡಿ ತಿದ್ದುಪಡಿ ಮಸೂದೆಗೆ ಅನುಮೋದನೆ ದೊರೆತಿದೆ. ನಿಜಕ್ಕೂ ಇದು ಪ್ರಜಾಪ್ರಭುತ್ವದ ಕೆಟ್ಟ ದಿನವಾಗಿದೆ. ಅಂತೆಯೇ ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ನಮ್ಮ ಒಳ್ಳೆಯ ಕೆಲಸಗಳನ್ನು ನಾವು ಕೈ ಬಿಡುವುದಿಲ್ಲ. ನಮ್ಮ ಕೆಲಸಗಳಿಗೆ ಯಾರೂ ತಡೆಯೊಡ್ಡಲು ಸಾಧ್ಯವಿಲ್ಲ. ಅದು ನಿಲ್ಲುವುದೂ ಇಲ್ಲ ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ವಿರೋಧ ಪಕ್ಷದ ನಾಯಕರ ಕೋಲಾಹಲದ ನಡುವೆ ಜಿಎನ್‌ಸಿಟಿಡಿ ಮಸೂದೆಯನ್ನು ಅಂಗೀಕರಿಸಲಾಯಿತು. ಕಾಯ್ದೆ ಕುರಿತು ನಡೆದ ಮತದಾನದಲ್ಲಿ 83 ಸದಸ್ಯರು ಕಾಯ್ದೆ ಪರವಾಗಿ ಮತ ಹಾಕಿದ್ದು, 45 ಮಂದಿ ಕಾಯ್ದೆ ವಿರುದ್ಧವಾಗಿ ಮತ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮಾತನಾಡಿ, 'ಪ್ರಜಾಪ್ರಭುತ್ವದ ಕರಾಳದಿನ. ದೆಹಲಿ ಜನರು ಆಯ್ಕೆ ಮಾಡಿದ ಸರ್ಕಾರದ ಹಕ್ಕುಗಳನ್ನು ಕಿತ್ತುಕೊಂಡು ಲೆಫ್ಟಿನೆಂಟ್ ಗವರ್ನರ್ ಗೆ ನೀಡಲಾಗಿದೆ.

ವಿಪರ್ಯಾಸವನ್ನು ನೋಡಿ, ನಮ್ಮ ಪ್ರಜಾಪ್ರಭುತ್ವದ ದೇವಾಲಯ ಎಂದು ಕರೆಯಲ್ಪಡುವ ಸಂಸತ್ತನ್ನು ಪ್ರಜಾಪ್ರಭುತ್ವದ ಹತ್ಯೆ ಮಾಡಲು ಬಳಸಲಾಗಿದೆ. ದೆಹಲಿಯ ಜನರು ಈ ಸರ್ವಾಧಿಕಾರದ ವಿರುದ್ಧ ಹೋರಾಡಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ದೆಹಲಿಯ ಮೇಲೆ ಕೇಂದ್ರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡುವ ಪ್ರಸ್ತಾವಿತ ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರ ( ತಿದ್ದುಪಡಿ) ಮಸೂದೆ 2021 ರನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.

English summary
Soon after the passage of GNCTD amendment bill in the Rajya Sabha, Delhi Chief Minister Arvind Kejriwal on Wednesday said it was a "sad day" for democracy and stressed that his struggle to restore power back to the people would continue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X