ಚೀನಾವನ್ನು MFN ಪಟ್ಟಿಯಿಂದ ಕಿತ್ತೆಸೆಯಿರಿ, ಮೋದಿ ಸರ್ಕಾರಕ್ಕೆ ಆಗ್ರಹ
ನವದೆಹಲಿ, ಮಾರ್ಚ್ 15: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಸ್ಪರ ಸಹಕಾರ ನೀಡುವ ನಿಟ್ಟಿನಲ್ಲಿ ಚೀನಾಕ್ಕೆ ನೀಡಲಾದ 'ಮೋಸ್ಟ್ ಫೇವರ್ಡ್ ನೇಷನ್'(MFN) ಪಟ್ಟಿಯಿಂದ ಅದರ ಹೆಸರನ್ನು ಕಿತ್ತೆಸೆಯುವಂತೆ ಸ್ವದೇಶಿ ಜಾಗರಣ ಮಂಚ್ ಆಗ್ರಹಿಸಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಘಟಕವಾದ ಎಸ್ ಜೆಎಂ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.
ಚೀನಾದಿಂದ ಮೋಸ್ಟ್ ಫೇವರ್ಡ್ ನೇಶನ್ ಪಟ್ಟವನ್ನು ಕಿತ್ತೆಸೆಯಬೇಕು. ಆ ಮೂಲಕ ಚೀನಾ ಉತ್ಪನ್ನಗಳಿಗೆ ಭಾರತದಲ್ಲಿ ಬೇಡಿಕೆ ಇಲ್ಲದಂತೆ ಮಾಡಬೇಕು, ಚೀನಾದಿಂದ ಭಾರತಕ್ಕೆ ಬರುವ ಸರಕುಗಳಿಗೆ ಸಾಕಷ್ಟು ನಿಯಮಗಳನ್ನು ಹಾಕಬೇಕು, ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಸರಕುಗಳಿಗೆ ಉಳಿಗಾಲವಿಲ್ಲದಂತೆ ಮಾಡಬೇಕು ಎಂದು ಅದು ಪತ್ರದಲ್ಲಿ ಮನವಿ ಮಾಡಿದೆ.

ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಚೀನಾ ಅಡ್ಡಗಾಲು ಹಾಕಿದ ತರುವಾಯ ಭಾರತ ಚೀನಾ ವಿರುದ್ಧ ಈ ಕ್ರಮ ಕೈಗೊಳ್ಳಬೇಕು ಎಂದು ಅದು ಬೇಡಿಕೆ ಇಟ್ಟಿದೆ.
ಚೀನಾ ಮತ್ತು ಭಾರತದ ನಡುವೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿದ್ದ ಕಾರಣ ಭಾರತ ಅದಕ್ಕೆ ಮೋಸ್ಟ್ ಫೇವರ್ಡ್ ನೇಷನ್ ಎಂಬ ಪಟ್ಟ ನೀಡಿತ್ತು.












Click it and Unblock the Notifications