ಯುಪಿಎ ಕೊಡುಗೆ: ಹೊಸ ಸರಕಾರಕ್ಕೆ ಕಾದಿದೆ ಆಘಾತ!

rs-3-lakh-cr-upa-2-financial-mess-to-embarrass-new-union-govt
ನವದೆಹಲಿ, ಮಾರ್ಚ್4: ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-2 ಸರಕಾರ ನಿರ್ಗಮನದ ಹೊಸ್ತಿಲಲ್ಲಿದೆ. ಆದರೆ ಮುಂದೆ, ಮೇ ತಿಂಗಳಾಂತ್ಯಕ್ಕೆ ಬೈ ಚಾನ್ಸ್ ಇವರದ್ದೇ ಸರಕಾರ ಮತ್ತೆ ಅಧಿಕಾರಕ್ಕೆ ಬಂದರೆ ಕೇಂದ್ರ ಸರಕಾರದ ಖಜಾನೆ ನೋಡಿ, ಎದೆಯೊಡೆದು ಲಟಾರನೆ ಮಲಗಿಬಿಡುವುದು ಗ್ಯಾರಂಟಿ.

ಎಂಎಂಎಸ್, ಚಿದು ಅವರಂಥ ಘಟಾನುಘಟಿ ಆರ್ಥಿಕ ತಜ್ಞರೇ ಇದ್ದರೂ ಆರ್ಥಿಕ ಅಶಿಸ್ತಿನಿಂದ ತುಂಬಿತುಳುಕಿದ್ದ ಯುಪಿಎ ಆಡಳಿತವು ಖಜಾನೆಯನ್ನು ಬರೀ ಖಾಲಿ ಮಾಡಿರುವುದಲ್ಲ, ಅದರ ಮೇಲೆ ಲಕ್ಷಾಂತರ ಕೋಟಿ ರೂ ಹೊರೆಯ ಮುಚ್ಚಳವನ್ನು ಮುಚ್ಚಿ, ಎದ್ದುಹೋಗಿದೆ.

ಈಗಿನ ವರದಿಯ ಪ್ರಕಾರ ಕೇವಲ 2.85 ಲಕ್ಷ ಕೋಟಿ ರೂ. ಆರ್ಥಿಕ ಶಿಸ್ತು ಹೊಸ ಸರಕಾರವನ್ನು ಸ್ವಾಗತಿಸಲಿದೆ. ಕೇಂದ್ರ ಮಾರಾಟ ತೆರಿಗೆ (CST) ಬಾಬತ್ತಿನಲ್ಲಿ ಕೇಂದ್ರವು ರಾಜ್ಯ ಸರಕಾರಗಳಿಗೆ 50,000 ಕೋಟಿ ರೂ. ಗಳನ್ನು ಪಾವತಿಸಬೇಕಾಗಿದೆ. ಕಳೆದ ಮೂರು ವರ್ಷಗಳಿಂದ ಕೇಂದ್ರವು ಈ ಮೊತ್ತವನ್ನು ಸಂಗ್ರಹಿಸಿಟ್ಟುಕೊಂಡಿದೆ.

CSTಯನ್ನು ತೆಗೆದುಹಾಕಿ ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ (GST) ಎಂಬ ಹೊಸ ವ್ಯವಸ್ಥೆಯನ್ನು ತಂದಿಟ್ಟ ಕೇಂದ್ರವು ಮೂರು ವರ್ಷದಿಂದೀಚೆಗೆ ರಾಜ್ಯ ಸರಕಾರಗಳ ಆದಾಯಕ್ಕೆ ಖೋತಾ ತಂದಿದೆ. ಅದನ್ನು ಸರಿದೂಗಿಸಲು ಹೊಸ ಸರಕಾರ ಬರುವ ವೇಳೆಗೆ 50,000 ಕೋಟಿ ರೂ. ಪಾವತಿಸುವುದು ಅನಿವಾರ್ಯವಾಗಿದೆ. ಆದರೆ ಇದು ಯಾವ ಕಾಲಕ್ಕೋ?

ಇನ್ನೊಂದು ಇಂತಹುದೇ ಬೃಹತ್ ಮೊತ್ತವನ್ನು ಹೊಸ ಸರಕಾರದ ಹೆಗಲ ಮೇಲೆ ಹಾಕಲಾಗಿದೆ. ಅದು ತೈಲ ಕಂಪನಿಗಳಿಗೆ ವಾಪತಿಸಬೇಕಾದ ಮೊತ್ತ. ಅದು 35,000 ಕೋಟಿ ರೂ. ಮೊತ್ತದ್ದು. ಮುಂದಿನ ಹಣಕಾಸು ವರ್ಷದೊಳಗೆ ಈ ಮೊತ್ತವನ್ನು ಪಾವತಿಸದಿದ್ದರೆ ತೈಲ ಕಂಪನಿಗಳ ಅಸ್ತಿತ್ವಕ್ಕೇ ಧಕ್ಕೆಯೊದಗಲಿದೆ ಎನ್ನುತ್ತಿದ್ದಾರೆ ಆರ್ಥಿಕ ತಜ್ಞರು.

ಮತ್ತೊಂದು ಮೊತ್ತ. ಬ್ಯಾಂಕುಗಳಿಗೆ ಪಾವತಿಸಬೇಕಾಗಿರುವುದು. ಬ್ಯಾಂಕುಗಳಿಗೆ ದೊಡ್ಡ ಪಿಡುಗಾಗಿ ಕಾಡುತ್ತಿರುವ ಅನುತ್ಪಾದಕ ಆಸ್ತಿ (NPA) 2 ಲಕ್ಷ ಕೋಟಿ ರೂ. ಅದನ್ನು ಪಾವತಿಸಬೇಕಾದ ಜವಾಬ್ದಾರಿ ಕೇಂದ್ರ ಸರಕಾರದ್ದು. ಅಂದರೆ ಹೊಸ ಸರಕಾರವನ್ನು 2 ಲಕ್ಷ ಕೋಟಿ ರೂ. ಎದುರಗೊಳ್ಳಲಿದೆ. 2008-09 ಅವಧಿಯಲ್ಲಿ 68,220 ಕೋಟಿ ರೂ. ಇದ್ದ NPA 2012-13 ಆರ್ಥಿಕ ಸಾಲಿನಲ್ಲಿ 1,94,000 ಕೋಟಿ ರೂ. ಗೆ ತಲುಪಿದೆ.

ಇದಲ್ಲದೆ ಆಹಾರ ಸಬ್ಸಿಡಿ ಕಾಯಿದೆಯಡಿ 88,250 ಕೋಟಿ ರೂ. ಪಾವತಿಸಬೇಕಾಗಿದೆ. ಇದರರ್ಥ ಕೇಂದ್ರದ ಆರ್ಥ ಪರಿಸ್ಥಿತಿ ತಳಕಚ್ಚಿದೆ. ಇದೆಲ್ಲಾ ಬಾಕಿ ಉಳಿಸಿಕೊಂಡಿರುವ ಮೊತ್ತ. ಇನ್ನು ಹೊಸ ಯೋಜನೆಗಳಿಗೆ ಮತ್ತು ಈಗಿರುವ ಯೋಜನೆಗಳ ಮುಂದುವರಿಕೆಗೆ ಹೊಸ ಸರಕಾರ ಎಲ್ಲಿಂದ ತರಬೇಕು. 2 ಅವಧಿಗೆ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವೇ ಹೇಳಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+