• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಸಿರುಗಟ್ಟಿಸುತ್ತಿದ್ದರೂ ರೋಹಿತ್ ಬಿಡಿಸಿಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲ ಏಕೆ?

|

ಬೆಂಗಳೂರು, ಏ.25: ತಾನು ನಂಬಿದ್ದ ಪತ್ನಿಯೇ ತನ್ನನ್ನು ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸುತ್ತಿದ್ದರೂ ರೋಹಿತ್ ತಿವಾರಿ ಬಿಡಿಸಿಕೊಳ್ಳಲು ಪ್ರಯತ್ನವನ್ನೇ ಮಾಡಲಿಲ್ಲ.

ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌ಡಿ ತಿವಾರಿ ಪುತ್ರ ರೋಹಿತ್ ತಿವಾರಿ ಆತನ ಪತ್ನಿಯಿಂದಲೇ ಕೊಲೆಯಾಗಿದ್ದಾರೆ. ಹಾಗಾದರೆ ದಿಂಬಿನಿಂದ ಆತನನ್ನು ಉಸಿರುಗಟ್ಟಿಸುತ್ತಿರುವಾಗ ಆತ ಬಿಡಿಸಿಕೊಳ್ಳುವ ಪ್ರಯತ್ನವನ್ನೇ ಮಾಡಿರಲಿಲ್ಲ ಎನ್ನುವ ವಿಷಯವೂ ಬೆಳಕಿಗೆ ಬಂದಿದೆ.

ಪತಿಯನ್ನು ಕೊಂದಿದ್ದು ಪತ್ನಿಯೇ! ರೋಚಕ ಪ್ರಕರಣ ಭೇದಿಸಿದ ಪೊಲೀಸರು

ಹೌದು ಅದಕ್ಕೆ ಕಾರಣವೂ ಇದೆ. ಆತ ಯಥೇಚ್ಛವಾಗಿ ಮದ್ಯಪಾನ ಮಾಡಿದ್ದ ಕಾರಣ ತನ್ನ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ನವದೆಹಲಿಗೆ ತೆರಳಿ ಇನ್ನೇನು ಬಂದಿದ್ದರು. ಬರುವಾಗಲೇ ಕಂಠಪೂರ್ತಿ ಕುಡಿದಿದ್ದ ಕಾರಣ ಮನೆಯ ಮೆಟ್ಟಿಲನ್ನೂ ಗೋಡೆಯ ಸಹಾಯದಿಂದಲೇ ಹತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಪತಿಯನ್ನು ಕೊಂಡು 90 ನಿಮಿಷದಲ್ಲಿ ಸಾಕ್ಷ್ಯ ನಾಶಪಡಿಸಿದ್ದಳು

ಪತಿಯನ್ನು ಕೊಂಡು 90 ನಿಮಿಷದಲ್ಲಿ ಸಾಕ್ಷ್ಯ ನಾಶಪಡಿಸಿದ್ದಳು

ಕೇವಲ ಒಂದು ವಾರದೊಳಗೆ ಪೊಲೀಸರು ಕೊಲೆಗಾರರನ್ನು ಪತ್ತೆ ಹಚ್ಚಿದ್ದಾರೆ. ಕೊಲೆ ಮಾಡಿ ಕೇವಲ 90 ನಿಮಿಷಗಳಲ್ಲಿ ಎಲ್ಲಾ ದಾಖಲೆಗಳನ್ನು ಅಪೂರ್ವ ತಿವಾರಿ ನಾಶಪಡಿಸಿದ್ದರು ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

ಆಕೆಯನ್ನು ವಿಚಾರಣೆಗೆ ಒಳಪಡಿಸಿರುವ ವೇಳೆ ಈ ಮಾಹಿತಿಯನ್ನು ಅಪೂರ್ವ ನೀಡಿದ್ದಾಗಿ ಹೇಳಿದ್ದಾರೆ.ಫಾರೆನ್ಸಿಕ್ ರಿಪೋರ್ಟ್ ಪ್ರಕಾರ ಅಪೂರ್ವ ಅವರನ್ನು ಬಂಧಿಸಲಾಗಿದೆ. ಬಳಿಕ ಹೌದು ತಾನೇ ಪತಿಯನ್ನು ಕೊಲೆ ಮಾಡಿದ್ದು ವೈವಾಹಿಕ ಜೀವನದಲ್ಲಿ ಸಂತೃಪ್ತಿ ಇಲ್ಲದಿರುವುದೇ ಕೊಲೆಗೆ ಕಾರಣ ಎಂದು ಒಪ್ಪಿಕೊಂಡಿದ್ದರು.

ಪ್ರಕರಣ ಏನು? ರೋಹಿತ್ ತಿವಾರಿ ಕೊಲೆಗೆ ಕಾರಣವೇನು?

ಪ್ರಕರಣ ಏನು? ರೋಹಿತ್ ತಿವಾರಿ ಕೊಲೆಗೆ ಕಾರಣವೇನು?

ರೋಹಿತ್ ತಿವಾರಿ ಅವರು ನವದೆಹಲಿಯಿಂದ ಏ.16ರಂದು ಮನೆಗೆ ಮರಳಿದ್ದರು. ಮನೆಗೆ ಬರುವಾಗ ಮದ್ಯಪಾನ ಮಾಡಿದ್ದು, ನಿಲ್ಲಲಾಗದ ಪರಿಸ್ಥಿತಿಯಲ್ಲಿದ್ದರು. ಬಳಿಕ ಗೋಡೆಯನ್ನು ಹಿಡಿದುಕೊಂಡೇ ಒಳಗೆ ಪ್ರವೇಶಿಸಿದ್ದರು.ಅದೇ ದಿನ ಅವರ ಪತ್ನಿ ಅಪೂರ್ವ ತಿವಾರಿ ರೋಹಿತ್ ಅವರ ಕೋಣೆಗೆ ಹೋಗಿ ಅವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಹೃದಯಾಘಾತವೆಂದು ಸುಳ್ಳು ಹೇಳಿದ್ದರು.

ಪತಿಯನ್ನು ಕೊಂದು 90 ನಿಮಿಷದಲ್ಲಿ ಸಾಕ್ಷ್ಯ ನಾಶಪಡಿಸಿದ್ದ ಅಪೂರ್ವ ತಿವಾರಿ

ಪತ್ನಿಯೇ ಕೊಲೆಗಾರ್ತಿ

ಪತ್ನಿಯೇ ಕೊಲೆಗಾರ್ತಿ

ಕೊಲೆಯಾದ ಒಂದು ವಾರದೊಳಗೆ ಪತ್ನಿಯೇ ಕೊಲೆಗಾರ್ತಿ ಎನ್ನುವುದನ್ನು ಪೊಲೀಸರು ಸಾಭೀತುಪಡಿಸಿದ್ದಾರೆ. ಮೊದಲು ಹೃದಯಾಘಾವೆಂದು ಬಿಂಬಿಸಲಾಗಿತ್ತು. ವೈದ್ಯಕೀಯ ವರದಿ ಬಳಿಕ ಇದು ಸಹಜ ಸಾವಲ್ಲ ಕೊಲೆ ಎನ್ನುವುದು ಬಹಿರಂಗಗೊಂಡಿತ್ತು. ಬಳಿಕ ಅಪೂರ್ವಳನ್ನು ತನಿಖೆಗೆಗೊಳಪಡಿಸಿದಾಗ ತನ್ನ ಪತ್ನಿಯನ್ನು ಕೊಂದಿದ್ದು ನಾನೇ ಎಂದು ಒಪ್ಪಿಕೊಂಡಿದ್ದಾಳೆ. ವೈವಾಹಿಕ ಜೀವನದಲ್ಲಿ ಸಂತೃಪ್ತಿ ಇಲ್ಲದಿರುವುದೇ ಕೊಲೆಗೆ ಕಾರಣ ಎಂದು ಹೇಳಿದ್ದಾರೆ.

ಕೊಲೆ ಮಾಡುವುದಕ್ಕೆ ಪ್ರಮುಖ ಕಾರಣ?

ಕೊಲೆ ಮಾಡುವುದಕ್ಕೆ ಪ್ರಮುಖ ಕಾರಣ?

ಅಪೂರ್ವ ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ಕೊಲೆ ಮಾಡಲು ಸಾಂಸಾರಿಕ ಜೀವನದಲ್ಲಿಅತೃಪ್ತಿಯೇ ಕಾರಣ ಎಂದು ಹೇಳಿದ್ದಾರೆ. ರೋಹಿತ್‌ಗೆ ಕುಡಿತದ ಚಟವಿತ್ತು. ಅದು ಅಪೂರ್ವ ಅವರಿಗೆ ಇಷ್ಟವಿರಲಿಲ್ಲ ಒಟ್ಟಿನಲ್ಲಿ ಅವರನ್ನು ಕೊಲೆ ಮಾಡಲು ಮೊದಲಿಂದಲೂ ಅಪೂರ್ವ ಹೊಂಚು ಹಾಕಿದ್ದಳು ಎನ್ನುವುದು ಬಹಿರಂಗಗೊಂಡಿದೆ.

English summary
A week after the death of Rohit Shekhar Tiwari, the son of former Uttar Pradesh Chief Minister ND Tiwari, his wife Apoorva Shukla Tiwari was arrested and taken away by the police from their south Delhi home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X