• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೋನಿಯಾ ಅಳಿಯ ವಾದ್ರಾಗೆ ಕೋಪ ಬಂದಿದ್ದೇಕೆ?

By Mahesh
|

ನವದೆಹಲಿ, ನ.2: ಹರ್ಯಾಣದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಾಗುತ್ತಿದ್ದಂತೆ ಭೂ ಹಗರಣಗಳ ಆರೋಪಿಗಳಿಗೆ ಭೀತಿ ಶುರುವಾಗಿತ್ತು. ಇದರ ಬೆನ್ನಲ್ಲೇ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ಎಎನ್ ಐ ಪತ್ರಕರ್ತನ ಪ್ರಶ್ನೆಗೆ ಸಿಟ್ಟಿಗೆದ್ದು ಮೈಕ್ ಪಕ್ಕಕ್ಕೆ ತಳ್ಳಿದ ಘಟನೆ ನಡೆದಿದೆ. ಮಾಧ್ಯಮದವರ ಮೇಲೆ ವಾದ್ರ ಸಿಟ್ಟಾಗಿದ್ದೇಕೆ? ಅಶೋಕ ಹೋಟೆಲ್ ನಲ್ಲಿ ನಡೆದಿದ್ದೇನು? ವಿಡಿಯೋ ಇಲ್ಲಿದೆ...

ಶನಿವಾರ ದೆಹಲಿಯ ಅಶೋಕ ಹೋಟೆಲ್ ನಲ್ಲಿ ಫಿಟ್ನೆಸ್ ಸೆಂಟರ್ ಉದ್ಘಾಟನೆಗೆ ಆಗಮಿಸಿದ್ದ ರಾಬರ್ಟ್ ವಾದ್ರಾರನ್ನು ಎಎನ್ ಐ ಪತ್ರಕರ್ತ ಮಾತನಾಡಿಸಿದ್ದಾರೆ. ಈ ನಡುವೆ ಹರ್ಯಾಣದಲ್ಲಿ ಭೂ ಹಗರಣದ ಆರೋಪಿಯಾಗಿರುವ ವಾದ್ರಾಗೆ ಹಗರಣದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಕೋಪ ಉಕ್ಕಿ ಬಂದಿದೆ, ಮೈಕ್ ಪಕ್ಕಕ್ಕೆ ತಳ್ಳಿದ್ದಲ್ಲದೆ ಪತ್ರಕರ್ತನನ್ನು ಹೀಯಾಳಿಸಿದ್ದಾರೆ. [ಮೋದಿ ಹಾದಿ ಹಿಡಿದ 'ಲಕ್ಕಿ' ಸಿಎಂ ಖಟ್ಟರ್]

ಹರ್ಯಾಣಾ ಸರ್ಕಾರ ಭೂ ಹಗರಣಗಳ ಕುರಿತಂತೆ ತನಿಖೆಗೆ ಮುಂದಾಗಿದೆ ಈ ಬಗ್ಗೆ ಏನು ಹೇಳುತ್ತೀರಾ? ಎಂದು ಎಎನ್ ಐ ಮಾಧ್ಯಮ ಪ್ರತಿನಿಧಿ ಪ್ರಶ್ನೆ ಕೇಳಿದ್ದಕ್ಕೆ ಸಿಟ್ಟಾದ ವಾದ್ರಾ ವರದಿಗಾರ, ಕ್ಯಾಮೆರಾಮೆನ್‌ ಅವರನ್ನು 'ಆರ್‌ ಯು ಸೀರಿಯಸ್‌, ಆರ್‌ ಯು ನಟ್ಸ್‌' ಎಂದು ಬೈದು ಮೈಕ್ ತಳ್ಳಿದ್ದಾರೆ. ಅಲ್ಲದೇ ಕ್ಯಾಮೆರಾ ಆಫ್ ಮಾಡು, ವಿಡಿಯೋ ಡಿಲೀಟ್ ಮಾಡು ಎಂದಿದ್ದಾರೆ.

'ಇದೊಂದು ಸಣ್ಣ ವಿಷ್ಯ, ಇದಕ್ಕೆ ಏಕೆ ಪ್ರಚಾರ ನೀಡುತ್ತಿದ್ದಾರೆ' ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ರಾಬರ್ಟ್ ವಾದ್ರಾ ಪರ ವಿರೋಧ ಟ್ವೀಟ್ ಗಳು ಹರಿದಾಡುತ್ತಿವೆ ಆಯ್ದ ಟ್ವೀಟ್ ಗಳು ಮುಂದಿವೆ ಓದಿ...

ಘಟನೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ

ಘಟನೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ

ಬಿಜೆಪಿ ಅಲ್ಲದೆ, ಎಡಪಕ್ಷಗಳು, ಎಎಪಿ ಕೂಡಾ ವಾದ್ರಾ ವರ್ತನೆಯನ್ನು ಖಂಡಿಸಿವೆ. ಕಾಂಗ್ರೆಸ್‌ ನಾಯಕರು ವಾದ್ರಾ ವರ್ತನೆಯನ್ನು ಸಮರ್ಥಿಸಿಕೊಂಡು ವರದಿಗಾರರ ಮೇಲೆ ದೌರ್ಜನ್ಯ ಎಸಗಿಲ್ಲ, ವಾದ್ರಾ ಅವರಿಗೆ ಇಷ್ಟವಿಲ್ಲದ ಪ್ರಶ್ನೆ ಕೇಳಿ ಕೆರಳಿಸಲಾಗಿದೆ ಎಂದಿದ್ದಾರೆ. ವಾದ್ರಾ ಪ್ರಕರಣದಿಂದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಇರಸು ಮುರುಸು ಉಂಟಾಗಿದೆ.

ಒಟ್ಟಾರೆ, ವಾದ್ರಾ ಪರ ವಿರೋಧ ಹೇಳಿಕೆಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದು ಬರುತ್ತಿವೆ. ವಾದ್ರಾ ಹಾಗೂ ಪತ್ರಕರ್ತನ ಜಟಾಪಟಿ ಟ್ವೀಟ್ ಸೇರಿದಂತೆ ಪ್ರಮುಖ ನಾಯಕರ ಪ್ರತಿಕಿಯೆಗಳು ಮುಂದಿದೆ ನೋಡಿ

ಎಎನ್ ಐ ಮೈಕ್ ತಳ್ಳಿದ ವಾದ್ರಾ

ಭೂ ಹಗರಣದ ಪ್ರಶ್ನೆಗೆ ಉತ್ತರಿಸದೆ ಸಿಟ್ಟಿಗೆದ್ದು ಎಎನ್ ಐ ಮೈಕ್ ತಳ್ಳಿದ ವಾದ್ರಾ

ಕಮಾಂಡೋಗಳಿಗೆ ಸೂಚನೆ ನೀಡಿದ ವಾದ್ರಾ

ಎಎನ್ ಐ ಪ್ರತಿನಿಧಿ ತೆಗೆದಿರುವ ವಿಡಿಯೋ ಕ್ಲಿಪ್ಪಿಂಗ್ ಡಿಲೀಟ್ ಮಾಡಿಸುವಂತೆ ಕಮಾಂಡೋಗಳಿಗೆ ಆದೇಶಿಸಿದ ವಾದ್ರಾ. ಅದರೆ, ವಿಡಿಯೋ ಡಿಲೀಟ್ ಮಾಡಲು ಒಪ್ಪದ ಪತ್ರಕರ್ತ.

ವಾದ್ರಾ ಹಾಗೂ ಪತ್ರಕರ್ತನ ಜಟಾಪಟಿ ವಿಡಿಯೋ

ವಾದ್ರಾ ಹಾಗೂ ಪತ್ರಕರ್ತನ ಜಟಾಪಟಿ ವಿಡಿಯೋ ನೋಡಿ

ಘಟನೆ ಬಗ್ಗೆ ಸುಬ್ರಮಣ್ಯ ಸ್ವಾಮಿ ಪ್ರತಿಕ್ರಿಯೆ

ಘಟನೆ ಬಗ್ಗೆ ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಪ್ರತಿಕ್ರಿಯೆ

ವಾದ್ರಾ ನಿವಾಸಕ್ಕೆ ಸುರಕ್ಷತೆ ಒದಗಿಸಲಾಗಿದೆ

ಘಟನೆ ನಂತರ ರಾಬರ್ಟ್ ವಾದ್ರಾ ನಿವಾಸಕ್ಕೆ ಹೆಚ್ಚಿನ ಸುರಕ್ಷತೆ ಒದಗಿಸಲಾಗಿದೆ

ಎಎಪಿ ಪಕ್ಷದ ಆಶುತೋಷ್ ಪ್ರತಿಕ್ರಿಯೆ

ರಾಬರ್ಟ್ ವಾದ್ರಾ ಪ್ರಕರಣದ ಬಗ್ಗೆ ಎಎಪಿ ಪಕ್ಷದ ಆಶುತೋಷ್ ಪ್ರತಿಕ್ರಿಯೆ ನೀಡಿದ್ದು ಹೀಗೆ

ಸಿಪಿಐ ನಾಯಕ ಡಿ ರಾಜ ಪ್ರತಿಕ್ರಿಯೆ

ಸಿಪಿಐ ನಾಯಕ ಡಿ ರಾಜ ಅವರು ರಾಬರ್ಟ್ ವಾದ್ರಾ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಹೀಗೆ

ಇದೊಂದು ಸಣ್ಣ ವಿಷ್ಯ: ದಿಗ್ವಿಜಯ್ ಸಿಂಗ್

ಇದೊಂದು ಸಣ್ಣ ವಿಷ್ಯ, ಇದಕ್ಕೆ ಏಕೆ ಪ್ರಚಾರ ನೀಡುತ್ತಿದ್ದಾರೆ ಗೊತ್ತಿಲ್ಲ, ತಪ್ಪು ಮಾಡಿದ್ರೆ ಶಿಕ್ಷೆ ವಿಧಿಸೋಕೆ ನ್ಯಾಯಾಲಯವಿದೆ: ದಿಗ್ವಿಜಯ್ ಸಿಂಗ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Robert Vadra landed in a fresh controversy as he pushed away a journalist who asked him questions regarding land deal in Haryana. He lost his cool and Sonia Gandhi's son-in-law began facing criticism from all across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more