ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಕಳವಿನ ಮಜವಾದ ಕೇಸು, ಕಳ್ಳರು ಕದ್ದಿದ್ದು 5, 10 ರ ಕಾಸು

|
Google Oneindia Kannada News

ನವದೆಹಲಿ, ಆಗಸ್ಟ್ 24: ದೆಹಲಿಯ ಬ್ಯಾಂಕೊಂದರಿಂದ ಕಳ್ಳರು 46 ಪಾಲಿಥೀನ್ ಕವರ್ ನಲ್ಲಿದ್ದ 5, 10 ರುಪಾಯಿ ನಾಣ್ಯಗಳನ್ನು ಕಳವು ಮಾಡಿದ್ದ ಕಳ್ಳರು ಆಸಕ್ತಿಕರ ಹಾಗೂ ತಮಾಷೆ ಎನಿಸುವಂಥ ಅಂಶ ಹೊರಹಾಕಿದ್ದಾರೆ. ಕಳವಿನ ಒಟ್ಟು ಮೌಲ್ಯ 2.3 ಲಕ್ಷ ರುಪಾಯಿ. ನವದೆಹಲಿಯ ಮುಖರ್ಜಿ ನಗರ ಪ್ರದೇಶದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಮೂವರು ಕಳ್ಳರು ಸೇರಿ ಈ ಕಳವು ಮಾಡಿದ್ದಾರೆ.

ಬೆಂಡೋಲೆ ನುಂಗಿದ ಹುಂಜ ಕಬಾಬ್ ಫ್ರೈ ಆದ ಕಥೆಯಿದು..ಬೆಂಡೋಲೆ ನುಂಗಿದ ಹುಂಜ ಕಬಾಬ್ ಫ್ರೈ ಆದ ಕಥೆಯಿದು..

ಯಾಕೆ ಬರೀ ನಾಣ್ಯಗಳನ್ನೇ ಕದ್ದರು ಅಂದರೆ, ಹೊಸ ನೋಟಿನಲ್ಲಿ ಮೈಕ್ರೋಚಿಪ್ ಅಳವಡಿಸಲಾಗಿದೆ. ಹಣ ಎಲ್ಲಿದ್ದರೂ ಕಂಡುಹಿಡಿಯಬಹುದು ಎಂಬ ಮುನ್ನೆಚ್ಚರಿಕೆಯಾಗಿ ಹೀಗೆ ಮಾಡಿದ್ದರಂತೆ. ಇಂಥ ಚಿಪ್ಪು-ಗಿಪ್ಪು ಏನೂ ಇಲ್ಲ ಅಂತ ಸರಕಾರವೇ ಹೇಳಿದ್ದರೂ ಇವರು ಚಿಪ್ ಇರುವುದನ್ನು ನಂಬಿಕೊಂಡಂತಿದೆ. ಜತೆಗೆ ಈ ರೀತಿ ನಾಣ್ಯಗಳನ್ನು ಖರ್ಚು ಮಾಡಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂಬ ಧೈರ್ಯವೂ ಜತೆಯಾಗಿದೆ.

Robbers Steal Rs. 2.3 Lakh From Delhi Bank, But Only In Coins. Here's Why

ಎರಡು ಸಾವಿರ ರುಪಾಯಿ ನೋಟಿನ ತಂಟೆಗೆ ಕೂಡ ಹೋಗಬಾರದು ಎಂದು ಈ ಮೂವರು ಕಳ್ಳರು ಮೊದಲೇ ನಿರ್ಧರಿಸಿದ್ದರಂತೆ. ಸಿನಿಮಾಗಳನ್ನು ನೋಡಿ ಸ್ಫೂರ್ತಿ ಪಡೆದಿದ್ದ ಈ ಮೂವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬ್ಯಾಂಕ್ ಹತ್ತಿರವೇ ಇದ್ದ ಬಸ್ ಡಿಪೋದಲ್ಲಿ ಈ ಮೂವರು ಕೆಲಸ ಮಾಡುತ್ತಿದ್ದರಂತೆ.

ಕಳ್ಳರೇನೋ ಸಿಕ್ಕಿ ಹಾಕಿಕೊಂಡರು. ಆದರೆ ಆ ಹಣವನ್ನು ತಿಂದು- ಕುಡಿದು ಮಜಾ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

English summary
A group of very picky thieves robbed a Delhi bank of Rs. 2.3 lakh - but only in coins. The three robbers broke into Syndicate Bank in North Delhi's Mukherjee Nagar area and left two hours later with Rs. 2.3 lakh in Rs. 5, Rs. 10 coins in 46 polythene bags. Here is the reason why?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X