ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಷಾರ್: ನವದೆಹಲಿಯಲ್ಲಿ ಸಿಕ್ತು ಮಂಕಿಪಾಕ್ಸ್ ಎರಡನೇ ಕೇಸ್ ಸುಳಿವು!

|
Google Oneindia Kannada News

ನವದೆಹಲಿ, ಜುಲೈ 27: ನವದೆಹಲಿಯಲ್ಲಿ ಎರಡನೇ ಶಂಕಿತ ಮಂಕಿಪಾಕ್ಸ್ ಸೋಂಕಿತ ಪ್ರಕರಣವು ವರದಿಯಾಗಿದ್ದು, ವಿದೇಶದಿಂದ ಆಗಮಿಸಿದ ಪ್ರಯಾಣಿಕನಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಈ ಹಿನ್ನೆಲೆ ವ್ಯಕ್ತಿಯನ್ನು ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಮಂಕಿಪಾಕ್ಸ್ ಸೋಂಕಿನ ಮೊದಲ ವ್ಯಕ್ತಿಯ ಜೊತೆಗೆ ಈ 30ರ ವ್ಯಕ್ತಿಗೆ ಯಾವುದೇ ಸಂಪರ್ಕವಿಲ್ಲ. ಆದರೆ ಈತ ವಿದೇಶಿ ಪ್ರವಾಸದ ಹಿನ್ನೆಲೆ ಹೊಂದಿದ್ದು, ದದ್ದು ಮತ್ತು ಗಾಯಗಳನ್ನು ಹೊಂದಿರುವ ಶಂಕಿತ ರೋಗಿಯ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ.

ಭಯವೇಕೆ ಭಾರತೀಯರೇ; ಮಂಕಿಪಾಕ್ಸ್ ಬಗ್ಗೆ ಓದಿ, ತಿಳಿದು ಜಾಗೃತರಾಗಿರಿಭಯವೇಕೆ ಭಾರತೀಯರೇ; ಮಂಕಿಪಾಕ್ಸ್ ಬಗ್ಗೆ ಓದಿ, ತಿಳಿದು ಜಾಗೃತರಾಗಿರಿ

ದೆಹಲಿಯಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್-ಸೋಂಕಿತನ ಮನೆಯವರಲ್ಲಿ ಒಬ್ಬರಿಗೆ ದೇಹದಲ್ಲಿ ನೋವು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಇದರ ಹೊರತಾಗಿ ಯಾವುದೇ ರೋಗದ ಲಕ್ಷಣಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ದೆಹಲಿ ಮಂಕಿಪಾಕ್ಸ್ ರೋಗಿಯ ಆರೋಗ್ಯ ಸುಧಾರಣೆ

ದೆಹಲಿ ಮಂಕಿಪಾಕ್ಸ್ ರೋಗಿಯ ಆರೋಗ್ಯ ಸುಧಾರಣೆ

ಕಳೆದ ಭಾನುವಾರ ದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್ ಸೋಂಕಿತ ಪ್ರಕರಣವು ಪತ್ತೆಯಾಗಿತ್ತು. ಮಂಕಿಪಾಕ್ಸ್ ಸೋಂಕಿತ ಲಕ್ಷಣಗಳನ್ನು ಹೊಂದಿರುವ ಅಂತಾರಾಷ್ಟ್ರೀಯ ಪ್ರಯಾಣಿಕನನ್ನು ದೆಹಲಿ ವಿಮಾನ ನಿಲ್ದಾಣದಿಂದ ಲೋಕನಾಯಕ ಜಯ ಪ್ರಕಾಶ್ (ಎಲ್‌ಎನ್‌ಜೆಪಿ) ಆಸ್ಪತ್ರೆಗೆ ಕಳುಹಿಸಲಾಗಿತ್ತು.

ನವದೆಹಲಿಯಲ್ಲಿ ಮೊದಲು ವರದಿ ಆಗಿರುವ ಮಂಕಿಪಾಕ್ಸ್ ಸೋಂಕಿತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಯ ಐಸೋಲೇಟ್ ವ್ಯವಸ್ಥೆಯಲ್ಲಿ ಸೋಂಕಿತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಯ ಆರೋಗ್ಯ ಸುಧಾರಿಸಿದೆ. ಆದರೆ ಆತನ ದೇಹದಲ್ಲಿ ಆಗಿರುವ ಗಾಯದಲ್ಲಿ ಜೀವಾಣುಗಳು ಜೀವಂತವಾಗಿದ್ದು, ಇದರಿಂದ ಗುಣಮುಖವಾಗಲು ಕನಿಷ್ಠ ಒಂದು ವಾರ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ

ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ

ಮಂಕಿಪಾಕ್ಸ್ ರೋಗಿಗಳು ಮತ್ತು ಈ ರೋಗದ ಲಕ್ಷಣಗಳನ್ನು ಹೊಂದಿರುವ ಶಂಕಿತರ ಚಿಕಿತ್ಸೆಗಾಗಿ ದೆಹಲಿಯ ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಯಲ್ಲಿ ವಿಶೇಷ ಐಸೋಲೇಟ್ ವಾರ್ಡ್ ಅನ್ನು ಸಿದ್ಧಪಡಿಸಲಾಗಿದೆ. ಈ ವಾರ್ಡಿನಲ್ಲಿ 20 ಸದಸ್ಯದ ವೈದ್ಯರ ತಂಡವು ಶಂಕಿತರ ಆರೋಗ್ಯದ ಮೇಲೆ ನಿಗಾ ವಹಿಸಲಿದ್ದಾರೆ. ಪ್ರತ್ಯೇಕ ಕೊಠಡಿಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಮಂಕಿಪಾಕ್ಸ್ ಸೋಂಕಿತ ಲಕ್ಷಣಗಳನ್ನು ತಿಳಿಯಿರಿ

ಮಂಕಿಪಾಕ್ಸ್ ಸೋಂಕಿತ ಲಕ್ಷಣಗಳನ್ನು ತಿಳಿಯಿರಿ

ಮಂಕಿಪಾಕ್ಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಒಂದು ವೈರಲ್ ಝೂನೋಸಿಸ್ ಆಗಿದೆ. ಈ ಹಿಂದೆ ಸಿಡುಬು ರೋಗಿಗಳಲ್ಲಿ ಕಂಡುಬರುವ ರೋಗಲಕ್ಷಣಗಳನ್ನೇ ಈ ರೋಗವು ಹೋಲುತ್ತದೆ. ಆದಾಗ್ಯೂ ಪ್ರಾಯೋಗಿಕವಾಗಿ ಕಡಿಮೆ ತೀವ್ರತೆಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಮಂಕಿಪಾಕ್ಸ್ ಜ್ವರ, ತಲೆನೋವು, ಮೂರು ವಾರಗಳವರೆಗೆ ದದ್ದುಗಳು, ಗಂಟಲು ನೋವು, ಕೆಮ್ಮು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳೊಂದಿಗೆ ಕಾಣಿಸಿಕೊಳ್ಳುತ್ತದೆ.

ಜಗತ್ತಿನಲ್ಲಿ 16000ಕ್ಕೂ ಹೆಚ್ಚು ಪ್ರಕರಣ ದಾಖಲು

ಜಗತ್ತಿನಲ್ಲಿ 16000ಕ್ಕೂ ಹೆಚ್ಚು ಪ್ರಕರಣ ದಾಖಲು

ಜಾಗತಿಕ ಮಟ್ಟದಲ್ಲಿ ಮಂಕಿಪಾಕ್ಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಕಳೆದ 50 ವರ್ಷಗಳಿಗೆ ಹೋಲಿಸಿದರೆ ಮಂಕಿಪಾಕ್ಸ್ ದಾಖಲೆಯ ವೇಗ ಪಡೆದುಕೊಂಡಿದೆ.

2022ರ ವರ್ಷಾರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ, 47 ರಾಷ್ಟ್ರಗಳಲ್ಲಿ 3040 ಪ್ರಕರಣಗಳು ವರದಿಯಾಗಿದ್ದವು. ಅಲ್ಲಿಂದ ಈವರೆಗೆ 75 ರಾಷ್ಟ್ರಗಳಿಗೆ ಹರಡಿರುವ ಮಂಕಿಪಾಕ್ಸ್ ಮೂಲಕ 16,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಐವರು ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು WHO ಪ್ರಧಾನ ಕಾರ್ಯದರ್ಶಿ ಡಾ.ಟೆಡ್ರೂಸ್ ಹೇಳಿದ್ದಾರೆ. 1970ರಲ್ಲಿ ಮೊದಲ ಬಾರಿಗೆ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ರೋಗವು ಕಾಣಿಸಿಕೊಂಡಿತ್ತು. ಅಲ್ಲಿಂದ 50 ವರ್ಷಗಳಲ್ಲೇ ಮೊದಲ ಬಾರಿಗೆ ಅತಿಹೆಚ್ಚು ಸೋಂಕಿತ ಪ್ರಕರಣಗಳು ಜಾಗತಿಕ ಮಟ್ಟದಲ್ಲಿ ವರದಿಯಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ.

Recommended Video

Siddaramaiah ನಮ್ಮ ಮುಂದಿನ ಮುಖ್ಯ ಮಂತ್ರಿ !! *Politics | OneIndia Kannada

English summary
Delhi reported 2nd Monkeypox Suspect case; Foreign Traveller Admitted To Lok Nayak Jai Prakash Hospital. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X